ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗ ಮೂರು ರಾಜಕೀಯ ಪಕ್ಷಗಳ ಕಣ್ಣು ಹಳೇ ಮೈಸೂರು(Old Mysuru) ಭಾಗದ ಮೇಲೆ ಬಿದ್ದಿದೆ.
ಜೆಡಿಎಸ್-ಕಾಂಗ್ರೆಸ್(JDS – Congress) ಪ್ರಬಲವಾಗಿರುವಾಗಿರುವ ಇಲ್ಲಿ ತಳವೂರಲು ಬಿಜೆಪಿ(BJP) ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಒಕ್ಕಲಿಗರ ಮತಗಳ ಕಣ್ಣಿಟ್ಟು 3 ಪಕ್ಷ ನಾನಾ ರಣತಂತ್ರ ಹೆಣಿಯುತ್ತಿವೆ. ಅದರಲ್ಲೂ ಜೆಡಿಎಸ್ ಮತ್ತು ಬಿಜೆಪಿ ಭಾವನಾತ್ಮಕ ದಾಳಗಳನ್ನು ಉರುಳಿಸುತ್ತಿರುವುದು ಕಾಂಗ್ರೆಸ್ ತಲೆಬಿಸಿಗೆ ಕಾರಣವಾಗಿದೆ.
Advertisement
Advertisement
ಗುರುವಾರ ರಾತ್ರಿ ಬೆಂಗಳೂರಲ್ಲಿ ಸಭೆ ಸೇರಿದ ಕಾಂಗ್ರೆಸ್ ಪಕ್ಷದ ಒಕ್ಕಲಿಗ ನಾಯಕರು ಈ ಬಗ್ಗೆಯೇ ಚರ್ಚೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ದೇವೇಗೌಡರ ಟಾರ್ಗೆಟ್ ಬೇಡ ಎಂದು ಡಿಕೆ ಶಿವಕುಮಾರ್(DK Shivakumar) ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ಮತ್ತೆ ಸಂಕಷ್ಟ
Advertisement
Advertisement
ಬಿಜೆಪಿಯವರು ಹಳೆ ಮೈಸೂರು ಭಾಗದಲ್ಲಿ ಟಿಪ್ಪು ವಿರೋಧಿಸುವುದು, ಹನುಮ ಜಯಂತಿ ಆಯೋಜನೆ ಮಾಡುತ್ತಾ ಹಿಂದುತ್ವದ ಅಜೆಂಡಾವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಈ ಅಜೆಂಡಾವನ್ನು ನಾವು ಜಾಣತನದಿಂದ ಹತ್ತಿಕ್ಕಬೇಕು ಎಂದು ಡಿಕೆಶಿ ಕರೆ ನೀಡಿದ್ದಾರೆ.
ಇದೇ ವೇಳೆ ಈಗ ಸಿಎಂ ವಿಚಾರ ಚರ್ಚೆ ಮಾಡಬೇಡಿ. ಆದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಒಕ್ಕಲಿಗ ನಾಯಕರಿಗೆ ಡಿಕೆಶಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.