ಮಂಡ್ಯ: ಮಾಜಿ ಸಂಸದೆ ರಮ್ಯಾ ಮಂಡ್ಯ ಲೋಕಸಭೆ ಉಪಚುನಾವಣೆ ಮೇಲೆ ಕಣ್ಣಿಟ್ಟಿದ್ದು ಶೀಘ್ರದಲ್ಲೇ ಮಂಡ್ಯಕ್ಕೆ ವಾಪಸ್ಸಾಗೋದು ಖಚಿತ ಎಂಬ ಮಾಹಿತಿ ಲಭ್ಯವಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಅಥವಾ ಮೇಲುಕೋಟೆ ಕ್ಷೇತ್ರದಿಂದ ರಮ್ಯಾ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಕ್ಕೆಲ್ಲ ತೆರೆ ಬಿದ್ದಿದ್ದು ಅವರು ಕಣ್ಣಿಟ್ಟಿರುವುದು ಮಂಡ್ಯ ಲೋಕಸಭಾ ಉಪಚನಾವಣೆ ಮೇಲೆ ಎಂಬ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಬಹು ಚರ್ಚಿತವಾಗುತ್ತಿದೆ.
Advertisement
ಮಂಡ್ಯ ಸಂಸದರಾಗಿರುವ ಪುಟ್ಟರಾಜು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗೋದು ಖಚಿತವಾಗಿದೆ. ಹೀಗಾಗಿ ಪುಟ್ಟರಾಜು ಮೊದಲು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಇದರಿಂದ ವಿಧಾನಸಭೆ ಚುನಾವಣೆ ಜೊತೆಯಲ್ಲೇ ಮಂಡ್ಯ ಲೋಕಸಭೆ ಚುನಾವಣೆಯೂ ನಡೆಯುತ್ತೆ ಎಂಬ ಮಾತು ಕೇಳಿಬಂದಿತ್ತು.
Advertisement
ಇದನ್ನೂ ಓದಿ: ಮಂಡ್ಯದಲ್ಲಿ ರಮ್ಯಾ ಮನೆ ಖರೀದಿ ವಿಚಾರ- ಮನೆ ಮಾಲೀಕ ಹೇಳಿದ್ದು ಹೀಗೆ
Advertisement
ಆದುದರಿಂದ ಆದಷ್ಟು ಬೇಗ ಸಂಸದರಾಗುವ ಆಸೆ ಹೊತ್ತಿರುವ ರಮ್ಯಾ ಶೀಘ್ರವೇ ಮಂಡ್ಯಕ್ಕೆ ಬಂದು ಲೋಕಸಭೆ ಉಪಚುನಾವಣೆ ತಯಾರಿ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ಶುರುವಾತ್ತು. ಆದ್ರೆ ಪುಟ್ಟರಾಜು ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತ್ರ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತೇನೆ ಅಂತಿದ್ದಾರೆ.
Advertisement
ಒಂದು ವೇಳೆ ಪುಟ್ಟರಾಜು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ ಉಪಚನಾವಣೆಯಲ್ಲಿ ಗೆದ್ದು ಮತ್ತೆ ಮಂಡ್ಯ ಸಂಸದರಾಗುವ ಆಸೆಯಿಂದ ರಮ್ಯಾ ಶೀಘ್ರದಲ್ಲೇ ಮಂಡ್ಯಕ್ಕೆ ವಾಪಸ್ಸಾಗೋದು ಖಚಿತವಾಗಿದೆ.
ಮಂಡ್ಯದಲ್ಲಿ ರಮ್ಯಾ ಮನೆ ಮಾಡಿದ ಗುಟ್ಟು ರಟ್ಟಾಯ್ತು! https://t.co/7s4kW6RLaj#Bengaluru #Mandya #Ramya #Home #Congress pic.twitter.com/sevyisVhco
— PublicTV (@publictvnews) November 17, 2017
ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸ್ತಾರಾ ರಮ್ಯಾ?https://t.co/GaN54vznaX#Ramya #Melukote #Election #Congress pic.twitter.com/U5ySyVuXmx
— PublicTV (@publictvnews) November 15, 2017
ಟ್ವಿಟ್ಟರ್‍ನಲ್ಲಿ ಸೈಲೆಂಟ್ ಆದ ಮಾಜಿ ಸಂಸದೆ ರಮ್ಯಾhttps://t.co/58nseoUfF1#Ramya #Twitter #Congress pic.twitter.com/YuEnfR0mO4
— PublicTV (@publictvnews) November 16, 2017
'ವಾಟ್ಸಪ್’ನಲ್ಲಿ ಆರ್‍ಎಸ್‍ಎಸ್, ಮೋದಿ ವಿರುದ್ಧ ರಮ್ಯಾ ವಾಗ್ದಾಳಿ https://t.co/G5EyrWVKPO#Ramya #Modi #RSS #Congress #BJP pic.twitter.com/D1bD9WyfpK
— PublicTV (@publictvnews) October 26, 2017