– ಕಳೆದೊಂದು ವರ್ಷದಲ್ಲಿ 24 ಪ್ರಕರಣಗಳು
ನವದೆಹಲಿ: ಆಗಸ್ಟ್ ತಿಂಗಳು ಒಂದರಲ್ಲೇ ದೇಶದಾದ್ಯಂತ ರೈಲುಗಳ ಹಳಿ ತಪ್ಪಿಸಲು (Train Derailment) 18 ಪ್ರಯತ್ನಗಳು ನಡೆದಿವೆ ಎಂದು ಭಾರತೀಯ ರೈಲ್ವೇ ಅಧಿಕಾರಿಗಳು (Railway Department) ಹೇಳಿದ್ದಾರೆ. ಕಾನ್ಪುರ ಮತ್ತು ಅಜ್ಮೀರ್‌ನಲ್ಲಿ ಭಾನುವಾರ ಎರಡು ಪ್ರಯತ್ನಗಳು ವರದಿಯಾಗಿದ್ದು, ಜೂನ್ 2023ರಿಂದ ಇಲ್ಲಿಯವರೆಗೆ ಇಂತಹ 24 ಘಟನೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
Advertisement
ಎಲ್‌ಪಿಜಿ ಸಿಲಿಂಡರ್‌ಗಳು, ಬೈಸಿಕಲ್‌ಗಳು, ಕಬ್ಬಿಣದ ರಾಡ್‌ಗಳು ಮತ್ತು ಸಿಮೆಂಟ್ ಬ್ಲಾಕ್‌ಗಳು ಸೇರಿದಂತೆ ರೈಲು ಹಳಿಗಳ ಮೇಲೆ ಇರಿಸಲಾದ ವಿವಿಧ ರೀತಿಯ ವಸ್ತುಗಳನ್ನು ಪತ್ತೆ ಮಾಡಲಾಗಿದೆ. ರೈಲ್ವೆಯ ವರದಿಯ ಪ್ರಕಾರ, 18 ಘಟನೆಗಳಲ್ಲಿ 15 ಆಗಸ್ಟ್‌ನಲ್ಲಿ ಮತ್ತು ಮೂರು ಸೆಪ್ಟೆಂಬರ್‌ನಲ್ಲಿ ಸಂಭವಿಸಿವೆ. ಘಟನೆಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಉಳಿದವು ಪಂಜಾಬ್, ಜಾರ್ಖಂಡ್, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ ಮತ್ತು ತೆಲಂಗಾಣದಿಂದ ವರದಿಯಾಗಿದೆ. ಇದನ್ನೂ ಓದಿ: ಭಯೋತ್ಪಾದನಾ ಚಟುವಟಿಕೆ ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚಿಸಿ: ಅಶೋಕ್ ಆಗ್ರಹ
Advertisement
Advertisement
ಕಳೆದ ಆಗಸ್ಟ್‌ನಲ್ಲಿ ಟ್ರ‍್ಯಾಕ್‌ನಲ್ಲಿ ಇರಿಸಲಾದ ವಸ್ತುವಿಗೆ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ಅಹಮದಾಬಾದ್‌ಗೆ ತೆರಳುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲಿನ 20 ಬೋಗಿಗಳು ಕಾನ್ಪುರದ ಗೋವಿಂದಪುರಿ ನಿಲ್ದಾಣದ ಬಳಿ ಹಳಿತಪ್ಪಿದವು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದನ್ನೂ ಓದಿ: ನಿಯಂತ್ರಣಕ್ಕೆ ಬಾರದ ಹಿಂಸಾಚಾರ – ಮಣಿಪುರದ ಮೂರು ಜಿಲ್ಲೆಗಳಲ್ಲಿ ಕರ್ಫ್ಯೂ
Advertisement
ಈ ಭಾನುವಾರ ಎರಡು ಹಳಿ ತಪ್ಪಿಸುವ ಪ್ರಯತ್ನಗಳು ನಡೆದಿವೆ. ಕಾನ್ಪುರದಲ್ಲಿ ಕಾಳಿಂದಿ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲು ಹಳಿ ಮೇಲೆ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗೆ ಡಿಕ್ಕಿ ಹೊಡೆದು ನಿಂತಿತು. ಟ್ರ‍್ಯಾಕ್‌ನಲ್ಲಿ ಸಿಲಿಂಡರ್, ಪೆಟ್ರೋಲ್ ಬಾಟಲಿ, ಬೆಂಕಿಕಡ್ಡಿ ಸೇರಿದಂತೆ ಇತರ ಅನುಮಾನಾಸ್ಪದ ವಸ್ತುಗಳನ್ನು ಗುರುತಿಸಿದ ನಂತರ ಲೊಕೋ ಪೈಲಟ್ ಬ್ರೇಕ್ ಹಾಕಿದ್ದರು. ಕಾನ್ಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಈವರೆಗೆ ಆರು ಮಂದಿಯನ್ನು ಬಂಧಿಸಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ ರಾಜಸ್ಥಾನದ ಅಜ್ಮೀರ್‌ನಲ್ಲಿ ಸರಕು ರೈಲು ಸಂಚರಿಸುತ್ತಿದ್ದು, ಹಳಿಗಳ ಮೇಲೆ ತಲಾ 70 ಕೆಜಿ ತೂಕದ ಎರಡು ಸಿಮೆಂಟ್ ಬ್ಲಾಕ್‌ಗಳನ್ನು ಇರಿಸಲಾಗಿತ್ತು. ಇದಕ್ಕೆ ಡಿಕ್ಕಿ ಹೊಡೆದ ನಂತರ ರೈಲು ಯಾವುದೇ ಹಾನಿಯಾಗದೆ ತನ್ನ ಪ್ರಯಾಣವನ್ನು ಮುಂದುವರಿಸಿದೆ. ಇದನ್ನೂ ಓದಿ: ವಯನಾಡು ದುರಂತದ ಬಳಿಕ ಸರ್ಕಾರ ಅಲರ್ಟ್- ಕಾಫಿನಾಡಲ್ಲಿ 40 ಅನಧಿಕೃತ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ನೋಟಿಸ್
ಸೆಪ್ಟೆಂಬರ್ 4 ರಂದು ಇದೇ ರೀತಿಯ ಘಟನೆಯಲ್ಲಿ, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ರೈಲು ಹಳಿ ಮೇಲೆ ಬೃಹತ್ ಕಲ್ಲನ್ನು ಹಾಕಿರುವುದನ್ನು ಟವರ್ ವ್ಯಾಗನ್‌ನ ಲೋಕೋ ಪೈಲಟ್‌ಗಳು ಗಮನಿಸಿದರು ಮತ್ತು ಅದಕ್ಕೆ ಡಿಕ್ಕಿಯಾಗುವ ಮೊದಲೇ ರೈಲು ನಿಲ್ಲಿಸಿದರು. ಘಟನೆ ಕುರಿತು ರೈಲ್ವೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ. 2023ರಲ್ಲಿ ಒಡಿಶಾ ಮತ್ತು ರಾಜಸ್ಥಾನದಲ್ಲಿ ಕ್ರಮವಾಗಿ ಜೂನ್ ಮತ್ತು ಅಕ್ಟೋಬರ್‌ನಲ್ಲಿ ಎರಡು ಹಳಿ ತಪ್ಪಿಸುವ ಪ್ರಯತ್ನಗಳು ನಡೆದಿವೆ. ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ರೈಲ್ವೆ ಕ್ರಾಸಿಂಗ್‌ನಲ್ಲಿ ಮರದ ದಿಮ್ಮಿ ಇಡಲಾಗಿದ್ದು, ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಹಳಿಯಲ್ಲಿ ಕಲ್ಲು ಪತ್ತೆಯಾಗಿತ್ತು. ಇದನ್ನೂ ಓದಿ: ಸ್ಫೋಟಕ್ಕೆ ಉಗ್ರರ ಸಂಚು – ಮಲ್ಲೇಶ್ವರ ಬಿಜೆಪಿ ಕಚೇರಿಗೆ ಪೊಲೀಸ್ ಭದ್ರತೆ ಹೆಚ್ಚಳ