ಬೆಂಗಳೂರು: ಎಲೆಕ್ಷನ್‍ಗೆ ಭರ್ಜರಿಯಾಗಿ ರೆಡಿಯಾಗ್ತಿರೋ ಜೆಡಿಎಸ್, ಮುಸ್ಲಿಮರ ಬಳಿಕ ಈಗ ಬ್ರಾಹ್ಮಣರ ವೋಟ್‍ಬ್ಯಾಂಕ್‍ಗೆ ಕೈ ಹಾಕಿದೆ. ಈ ಹಿನ್ನಲೆಯಲ್ಲಿ ಇಂದು ಎಚ್‍ಡಿ ಕುಮಾರಸ್ವಾಮಿ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪ್ರಕಾಶ್ ಅಯ್ಯಂಗಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ರು.
ಮಲ್ಲೇಶ್ವರಂ ವೈಯಾಲಿಕಾವಲ್ ನಲ್ಲಿರುವ ಪ್ರಕಾಶ್ ಅಯ್ಯಂಗಾರ್ ನಿವಾಸದಲ್ಲಿ ಸುಮಾರು 45 ನಿಮಿಷಕ್ಕೂ ಹೆಚ್ಚಿನ ಕಾಲ ಮಾತುಕತೆ ನಡೆಸಿದ್ರು. ಭೇಟಿ ಬಳಿಕ ಮಾತನಾಡಿದ ಎಚ್‍ಡಿಕೆ ಇದೊಂದು ಸೌಹಾರ್ದಯುತ ಭೇಟಿ. ಪ್ರಕಾಶ್ ಅಯ್ಯಂಗಾರ್ ನನ್ನ ಹಳೆಯ ಸ್ನೇಹಿತರು. ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಪಕ್ಷಕ್ಕೆ ಸಹಕಾರವನ್ನೂ ಕೇಳಿದ್ದೇನೆ. ಪಕ್ಷಕ್ಕೆ ಸೇರ್ಪಡೆ ವಿಚಾರ ಸಮಾಜದವರ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದರು ಎಂದರು.
Advertisement
ಕೈ, ಬಿಜೆಪಿ ವಿರುದ್ಧ ವಾಗ್ದಾಳಿ: ಬಿಜೆಪಿಯಂತೆ ಚಾರ್ಜ್ ಶೀಟ್ ಬಿಡುಗಡೆ ಮಾಡುವ ಹವ್ಯಾಸ ನಮ್ಮಲ್ಲಿ ಇಲ್ಲ. ಚಾರ್ಜ್ ಶೀಟ್ ಪದ ಬಿಜೆಪಿಯವರಿಗೆ ಬಹಳ ಪ್ರಿಯ. ರಾಜ್ಯದಲ್ಲಿ ಭ್ರಷ್ಟಾಚಾರದ ನಿರ್ಮಾತೃ ಯಡಿಯೂರಪ್ಪ. ಈ ಮಾತನ್ನು 2013 ರಲ್ಲಿ ಸದಾನಂದ ಗೌಡರೇ ಬೆಳಗಾವಿಯಲ್ಲಿ ಹೇಳಿದ್ರು. ಈಗ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಮಾತನಾಡುತ್ತಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್, ಬಿಜೆಪಿ ಇಬ್ಬರಿಗೂ ನೈತಿಕತೆ ಇಲ್ಲ ಅಂತ ವಾಗ್ದಾಳಿ ನಡೆಸಿದ್ರು.
Advertisement
ಶನಿವಾರ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಸಿಎಂ ಸಿದ್ದರಾಮಯ್ಯನವರಿಗಿಲ್ಲ. ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿಚಾರದಲ್ಲಿ ಸರ್ಕಾರ ಕೈಗೊಂಡ ಕ್ರಮಗಳೇನು? ಇವಾಗ ಟನಲ್ ರೋಡ್ ಮಾರ್ಗದ ಬಗ್ಗೆ ಸರ್ಕಾರ ಮಾತ್ನಾಡುತ್ತಿದೆ. ಟನಲ್ ರೋಡ್ ನನ್ನ ಅವಧಿಯಲ್ಲಿ 800 ಕೋಟಿಗೆ ಎಂಓಯು ಆಗಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರ ಇದೀಗ ಅದೇ ರೋಡ್ ಯೋಜನೆಗೆ 3500 ಕೋಟಿ ಒಪ್ಪಂದ ಮಾಡಿಕೊಂಡಿದೆ. ಇದು ಭ್ರಷ್ಟರ ಹಿತ ಸರ್ಕಾರ ಮಾಡುತ್ತಿರುವ ಕೆಲಸ ಎಂದು ಆರೋಪಿಸಿದರು.
Advertisement
ಪೊಲೀಸ್ ಇಲಾಖೆ ದರೋಡೆಕೋರ ಇಲಾಖೆ ಆಗಿದೆ. ಲಾಟರಿ ಮತ್ತು ಬೆಟ್ಟಿಂಗ್ ದಂಧೆಯಿಂದಾಗಿ ಅದೆಷ್ಟೋ ಮನೆಗಳು ಹಾಳಾಗಿವೆ. ಪ್ರಾಮಾಣಿಕ ಅಧಿಕಾರಿ ಕಲ್ಲಪ್ಪ ಹಂಡಿಭಾಗ್ ರಂತವರು ಬೆಟ್ಟಿಂಗ್ ದಂಧೆಗೆ ಬಲಿಯಾದ್ರು ಇದೆಲ್ಲ ಸಿದ್ದರಾಮಯ್ಯ ಸರ್ಕಾರದ ನಾಲ್ಕು ವರ್ಷ ಸಾಧನೆ ಎಂದು ಆರೋಪಿಸಿದರು.