– ವರನಟ ರಾಜ್‍ಕುಮಾರ್ ಅವರೇ ಪ್ರೇರಣೆ ಅಂತಿದೆ ಕುಟುಂಬ
ಬಳ್ಳಾರಿ: ಮದುವೆ ಅಂದ್ರೆ ಆ ಮನೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿರುತ್ತೆ. ಮದುವೆ ಮನೆಯಲ್ಲಿ ಎಲ್ಲರೂ ಸಂಭ್ರಮಿಸುತ್ತಿರುತ್ತಾರೆ. ಆದ್ರೆ ಇಲ್ಲೊಂದು ಕುಟುಂಬದ ಸದಸ್ಯರು ಮಗನ ಮದುವೆಯ ದಿನದಂದೇ ಇಡೀ ಕುಟುಂಬದ ಸದಸ್ಯರೆಲ್ಲಾ ನೇತ್ರದಾನ ಮಾಡೋ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಗ್ರಾಮದ ಅವಿಭಕ್ತ ಕುಟುಂಬವೊಂದು ಮನೆಯ ಮಗನ ಮದುವೆ ದಿನವನ್ನೂ ಅರ್ಥಪೂರ್ಣವಾಗಿ ಮಾಡಿದೆ. ಮನೆಯ ಮಗ ಆನಂದ್ ವ್ಯವಸಾಯ ಮಾಡುತ್ತಿದ್ದರೂ, ಆರತಿಯೊಂದಿಗೆ ಮದುವೆಯಾಗುವ ದಿನದಂದ್ದೆ ಮನೆಯ ಎಲ್ಲ 28 ಸದಸ್ಯರು ನೇತ್ರದಾನ ಮಾಡುವ ಎಲ್ಲರಿಗೂ ಮಾದರಿಯಾಗಿದ್ದಾರೆ.
ತಮ್ಮ ಮದುವೆಯ ದಿನವನ್ನು ಅರ್ಥಪೂರ್ಣವಾಗಿ ಮಾಡಿಕೊಳ್ಳಬೇಕೆಂದು ಆಸೆ ಹೊಂದಿದ್ದ ಆನಂದ್ ನೇತ್ರದಾನ ಮಾಡಲು ನಿರ್ಧರಿಸಿದ್ದಾರೆ. ಆನಂದರ ಅವಿಭಕ್ತ ಕುಟುಂಬದ ಸದಸ್ಯರೆಲ್ಲರೂ ತಮ್ಮ ಮನೆಯವರೆಲ್ಲಾ ನೇತ್ರದಾನ ಮಾಡಲು ಈ ಹಿಂದೆಯೇ ನಿರ್ಧರಿಸಿದ್ದರು. ಆದ್ರೆ ಕಾಲ ಕೂಡಿ ಬಂದಿರಲಿಲ್ಲ. ತಮ್ಮ ಕಣ್ಣುಗಳು ಅಂಧರ ಬಾಳಿಗೆ ಬೆಳಕಾಗುತ್ತವೆ ಅನ್ನೋ ಉದ್ದೇಶ ಹೊಂದಿದ್ದ ವರನಟ ಡಾಕ್ಟರ್ ರಾಜ್‍ಕುಮಾರ್ ಅವರ ಪ್ರೇರಣೆಯಿಂದಲೇ ಈ ಕುಟುಂಬದ ಸದಸ್ಯರೆಲ್ಲರೂ ಇದೀಗ ನೇತ್ರದಾನಕ್ಕೆ ಒಪ್ಪಿ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಾರೆ. ಅಲ್ಲದೇ ನಮ್ಮ ಮನೆಯವರಿಗೆಲ್ಲ ರಾಜ್‍ಕುಮಾರ್ ಅವರೇ ಪ್ರೇರಣೆ ಅಂತ ವರನ ಸಹೋದರ ಪ್ರಶಾಂತ್ ಹೇಳುತ್ತಾರೆ. ಇದನ್ನೂ ಓದಿ: ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿದ ದಂಪತಿ!
ಆನಂದ್ ಅವರ ಮದುವೆಯ ದಿನವೇ ಅವಿಭಕ್ತ ಕುಟುಂಬದ 28 ಸದಸ್ಯರು ನೇತ್ರದಾನದ ವಾಗ್ದಾನ ಮಾಡೋ ಮೂಲಕ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಾರೆ, ಇದೂ ನಿಜಕ್ಕೂ ಅರ್ಥಪೂರ್ಣ ಮದುವೆ ಅಂತಾ ಮದುವೆಗೆ ಬಂದವರೆಲ್ಲಾ ಹರಸಿ ಹಾರೈಸಿದರು. ಇದೇ ವೇಳೆ ಮದುವೆಯ ವೇಳೆ ಸಸಿಗಳನ್ನು ಸಹ ವಿತರಣೆ ಮಾಡಿರುವುದು ಕೂಡ ವಿಶೇಷವಾಗಿತ್ತು. ಇದನ್ನೂ ಓದಿ: ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!