– ವಿಶ್ವ ಬ್ಯಾಂಕ್ ಡಾಟಾದಿಂದ ಮಾಹಿತಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಸರ್ಕಾರದ ಅಡಿಯಲ್ಲಿ ಭಾರತವು ಕಳೆದ ದಶಕದಲ್ಲಿ ತನ್ನ ಕಡುಬಡತನದ ಪ್ರಮಾಣವನ್ನು ಇಳಿಕೆ ಮಾಡುವಲ್ಲಿ ಪ್ರಗತಿ ಸಾಧಿಸಿದೆ.
2011-12 ರಲ್ಲಿ ಶೇ. 27.1 ಇದ್ದ ಕಡುಬಡತನ ಪ್ರಮಾಣ, 2022-23 ರಲ್ಲಿ ಶೇ.5.3 ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್ ಅಂಕಿಅಂಶಗಳು ಬಹಿರಂಗಪಡಿಸಿವೆ. 2022-23ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 75.24 ಮಿಲಿಯನ್ ಜನರು ತೀವ್ರ ಬಡತನದಲ್ಲಿದ್ದರು. ಇದು 2011-12ರಲ್ಲಿ 344.47 ಮಿಲಿಯನ್ಗೆ ಏರಿಕೆಯಾಗಿತ್ತು.
ವಿಶ್ವಬ್ಯಾಂಕ್ ದತ್ತಾಂಶದ ಪ್ರಕಾರ, ಸುಮಾರು 11 ವರ್ಷಗಳಲ್ಲಿ 269 ಮಿಲಿಯನ್ ಜನರು ತೀವ್ರಬಡತನದಿಂದ ಮುಕ್ತರಾಗಿದ್ದಾರೆ. 2011-12ರಲ್ಲಿ ಭಾರತದ ಕಡುಬಡವರು ಶೇ.65 ರಷ್ಟಿದ್ದ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ರಾಜ್ಯದವರಾಗಿದ್ದರು. 2022-23 ರ ವೇಳೆಗೆ ಕಡು ಬಡತನದ ಒಟ್ಟಾರೆ ಕುಸಿತದ ಮೂರನೇ ಎರಡರಷ್ಟು ಭಾಗಕ್ಕೆ ಬಂದಿದೆ.
ಕಡುಬಡತನದಲ್ಲಿರುವ ಜನರು 344.47 ಮಿಲಿಯನ್ನಿಂದ (34.4 ಕೋಟಿ) ಕೇವಲ 75.24 ಮಿಲಿಯನ್ಗೆ (7.25 ಕೋಟಿ) ಇಳಿದಿದ್ದಾರೆ ಎಂದು ವಿಶ್ವಬ್ಯಾಂಕ್ನ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.