ನವದೆಹಲಿ: ಚೀನಾ (China), ರಷ್ಯಾದೊಂದಿಗೆ (Russia) ಭಾರತದ ಸಂಬಂಧಗಳು ಹಾಗೂ ಭಾರತ ಮತ್ತು ಜರ್ಮನಿ ನಡುವಿನ ಅಭಿವೃದ್ಧಿ ಸಹಕಾರ ಕುರಿತು ಚರ್ಚೆ ನಡೆಸಲು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ (Annalena Baerbock) ಅವರು ಭಾರತದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
External Affairs Minister Dr S Jaishankar meets German Foreign Minister Annalena Baerbock and holds a meeting in Delhi. pic.twitter.com/XpXibmJMMZ
— ANI (@ANI) December 5, 2022
Advertisement
ಅನ್ನಾಲೆನಾ ಬೇರ್ಬಾಕ್ ಎರಡು ದಿನಗಳ ಭೇಟಿಯಾಗಿ ಭಾರತಕ್ಕೆ ಆಗಮಿಸಿದ್ದು, ವಿದೇಶಾಂಗ ಸವಿವ ಜೈಶಂಕರ್ (Jaishankar) ಜೊತೆಗೆ ಮಾತುಕತೆ ನಡೆಸಲಿದ್ದಾರೆ. ರಷ್ಯಾ-ಉಕ್ರೆನ್ ಸಂಘರ್ಷದ (Russia Ukraine War) ಜಾಗತಿಕ ಪರಿಣಾಮಗಳು, ಗಾಲ್ವಾನ್ ಕಣಿವೆ ಘಟನೆಗಳು, ಚೀನಾದೊಂದಿಗೆ ಭಾರತದ ಸಂಬಂಧಗಳ ಕುರಿತು ಉಭಯ ದೇಶಗಳ ಸಚಿವರು ಚರ್ಚೆ ಮಾಡಲಿದ್ದಾರೆ. ಇದನ್ನೂ ಓದಿ: ಸ್ವಂತ ಮಗಳು ಸೇರಿ 20ಕ್ಕೂ ಹೆಚ್ಚು ಯುವತಿಯರ ಮದುವೆ- ಸ್ವಘೋಷಿತ ಪ್ರವಾದಿ ಅರೆಸ್ಟ್
Advertisement
Advertisement
ಇದೇ ವೇಳೆ ಎರಡೂ ಕಡೆಯವರು ವಿವಿಧ ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇದರಿಂದ ಪರಸ್ಪರ ದೇಶದ ಜನರು ಎರಡೂ ದೇಶಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದನ್ನೂ ಓದಿ: ಸತತ 1 ವರ್ಷ ಡ್ರಮ್‌ನಲ್ಲಿತ್ತು ಮಹಿಳೆ ದೇಹದ ಪೀಸ್‌ಗಳು – ಮನೆ ಬಾಡಿಗೆ ಕೊಟ್ಟಿದ್ದ ಮಾಲೀಕ ಶಾಕ್!
Advertisement
ಭಾರತ ಜಿ7 ರಾಷ್ಟ್ರಗಳ (G7 Nations) ಅಧ್ಯಕ್ಷತೆ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಜರ್ಮನ್ ಸಚಿವರು ಭೇಟಿ ನೀಡಿದ್ದಾರೆ. ಜಿ20 ಶೃಂಗ ಸಭೆಯಲ್ಲಿ ಭಾರತವು ಜಾಗತಿಕವಾಗಿ ತನ್ನ ಸಾಮರ್ಥ್ಯ ನಿರ್ವಹಿಸಲು ಸಿದ್ಧವಾಗಿದೆ ಎಂಬುದನ್ನು ತೋರಿಸಿದೆ. ಎಲ್ಲಾ ಆಂತರಿಕ ಹಾಗೂ ಸಾಮಾಜಿಕ ಸವಾಲುಗಳ ನಡುವೆಯೂ ಭಾರತ ವಿಶ್ವದ ಇತರ ದೇಶಗಳಿಗೆ ಮಾದರಿಯಾಗಿದೆ. ಅಲ್ಲದೇ ಕಳೆದ 15 ವರ್ಷಗಳಲ್ಲಿ ಭಾರತವು 400 ಮಿಲಿಯನ್ ಜನರನ್ನು ಸಂಪೂರ್ಣ ಬಡತನದಿಂದ ಹೊರತರುವಲ್ಲಿ ಯಶಸ್ವಿಯಾಗಿದೆ.