ಹೈದರಾಬಾದ್: ನಿಲ್ದಾಣದಲ್ಲಿಯೇ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾದ ಘಟನೆ ಹೈದರಾಬಾದ್ ನ ಕಾಚಿಗುಡದಲ್ಲಿ ಇಂದು ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ.
ಕರ್ನೂಲ್ ಕಡೆಯಿಂದ ಬರುತ್ತಿದ್ದ ಹುಂಡ್ರಿ ಇಂಟರ್ಸಿಟಿ ಹಾಗೂ ಹೈದರಾಬಾದಿನ ಎಂಎಂಟಿಎಸ್(ಮಲ್ಟ್ ಮೊಡಲ್ ಟ್ರಾನ್ಸ್ ಪೋರ್ಟ್ ಸಿಸ್ಟಮ್) ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೊಳಗಾದ ಎರಡೂ ರೈಲುಗಳು ಸ್ವಲ್ಪ ನಿಧಾನವಾಗಿ ಬರುತ್ತಿದ್ದರಿಂದ ದೊಡ್ಡ ಮಟ್ಟದ ಅಪಾಯ ತಪ್ಪಿದೆ ಎಂದು ವರದಿಯಾಗಿದೆ.
Advertisement
Hyderabad: Two trains have collided at Kacheguda Railway Station. More details awaited. #Telangana pic.twitter.com/tr5GCvfKke
— ANI (@ANI) November 11, 2019
Advertisement
ಈ ಬಗ್ಗೆ ತನಿಖೆ ನಡೆಸಿದಾಗ, ಕರ್ನೂಲ್ ನಿಂದ್ ರೈಲು ಕಾಚಿಗುಡ ರೈಲ್ವೇ ನಿಲ್ದಾಣದಲ್ಲಿ ಬಂದು ನಿಂತಿತ್ತು. ಈ ವೇಳೆ ಲಿಂಗಂಪಳ್ಳಿಯಿಂದ ಬಂದ ಎಂಎಂಟಿಎಸ್ ರೈಲು ಚಾಲಕನಿಗೆ ಸರಿಯಾದ ಸಿಗ್ನಲ್ ಸಿಗದ ಪರಿಣಾಮ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ.
Advertisement
ಘಟನೆಯಲ್ಲಿ ಒಂದು ರೈಲಿನ ಚಾಲಕ ಸೇರಿ ಸುಮಾರು 6 ಮಂದಿಗೆ ಗಾಯಗಳಾಗಿದೆ. ಇದುವರೆಗೂ ಸಾವನ್ನಪಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡವರನ್ನು ಕೂಡಲೇ ಹತ್ತಿರದ ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರಲ್ಲಿ ಇಬ್ಬರು ಡಿಸ್ಚಾರ್ಜ್ ಕೂಡ ಆಗಿದ್ದಾರೆ.
Advertisement
#UPDATE Hyderabad: 5 injured after 3 coaches of Lingampalli-Falaknuma train and 4 coaches of Kurnool City-Secunderabad Hundry Express derailed, following collision of the two trains at Kacheguda Railway Station, earlier today. Rescue operation underway. #Telangana https://t.co/qW22IvRVPV
— ANI (@ANI) November 11, 2019
ಘಟನೆಯ ಮಾಹಿತಿಯನ್ನರಿತ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ದೌಡಾಯಿಸಿ ರೈಲುಗಳ ಮಧ್ಯೆ ಸಿಲುಕಿದ ಚಾಲಕನನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಅಪಘಾತ ಸಂಬಂಧ ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿ, ಸ್ಥಳಕ್ಕೆ ಅದೀಕಾರಿಗಳನ್ನು ಕಳುಹಿಸಲಾಗಿದ್ದು, ಎಲ್ಲ ರೀತಿಯಲ್ಲೂ ಸಹಾಯ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ರೈಲುಗಳ ಮಧ್ಯೆ ಅಪಘಾತ ಸಂಭವಿಸಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಮೇಲ್ವಿಚಾರಣೆ ಹಾಗೂ ಸಹಾಯಕ್ಕಾಗಿ ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಗಾಯಗೊಂಡವರಿಗೆ ಕೂಡಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ ಎಂದು ಸಚಿವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Received the tragic news of the train accident in Hyderabad & immediate instructions have been given to the authorities for assistance & monitoring.
Railway administration is extending assistance & have made arrangements for the treatment of the injured at the accident site.
— Piyush Goyal (@PiyushGoyal) November 11, 2019