ಮಂಗಳೂರು: ಭಾರತದಲ್ಲಿ ಚೀನಾ ಐಟಂಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ನಮ್ಮಲ್ಲಿ ಚೀನಾ ವಸ್ತುಗಳ ನಿಷೇಧಕ್ಕಾಗಿ ಹೋರಾಟ ತೀವ್ರಗೊಂಡಿದೆ.
ಇದೇ ಹೊತ್ತಲ್ಲಿ ಸದ್ದೇ ಇಲ್ಲದಂತೆ ಚೀನಾ ದೇಶಕ್ಕೆ ಭಾರತದಿಂದ ಸರಬರಾಜಾಗುವ ಮೀನು, ಮಾಂಸ ಮೇಲೆ ನಿಷೇಧವನ್ನು ವಿಧಿಸಲಾಗಿದೆ. ಕರಾವಳಿಯಿಂದ ರಫ್ತಾಗುವ ಆಹಾರ ಉತ್ಪನ್ನಗಳು, ಮೀನು ಹಾಗೂ ಮಾಂಸಕ್ಕೆ ಬ್ರೇಕ್ ಹಾಕಿದೆ.
Advertisement
ಕರಾವಳಿಯಿಂದ ಬೃಹತ್ ಪ್ರಮಾಣದಲ್ಲಿ ರಿಬ್ಬನ್ ಫಿಶ್ ಹಾಗೂ ಕಪ್ಪೆ ಬೊಂಡಾಸ್ ಮೀನು ಚೀನಾಕ್ಕೆ ರಫ್ತಾಗುತ್ತಿತ್ತು. ಆದರೆ ಒಂದು ತಿಂಗಳಿಂದ ಚೀನಾದಲ್ಲಿ ಭಾರತದ ಮೀನುಗಳಿಗೆ ಮಾರುಕಟ್ಟೆಯೇ ಇಲ್ಲವಾಗಿದೆ. ಕರಾವಳಿಯಿಂದ 1.30 ಟನ್ ನಷ್ಟು ಮೀನು ಸರಬರಾಜು ಆಗುತ್ತಿತ್ತು. ಇದರಿಂದ ಮೀನಿನ ಬೆಲೆ ಕೂಡಾ ಪಾತಳಕ್ಕೆ ಇಳಿದಿದ್ದು ಮೀನುಗಾರರು ಕಂಗಾಲಾಗಿದ್ದಾರೆ.