ಬೊಗೊಟಾ: ನೈಋತ್ಯ ಕೊಲಂಬಿಯಾದಲ್ಲಿ ಶುಕ್ರವಾರ ಸ್ಫೋಟಕಗಳನ್ನು ಬಳಸಿ ನಡೆಸಿದ ದಾಳಿಯಲ್ಲಿ 8 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ತಿಳಿಸಿದ್ದಾರೆ.
ಅಧ್ಯಕ್ಷ ಗುಸ್ಟಾವೋ ಪೆಟ್ರೋ ಅಧಿಕಾರ ವಹಿಸಿಕೊಂಡ ಬಳಿಕ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಪೆಟ್ರೋ, 8 ಪೊಲೀಸರ ಸಾವಿಗೆ ಕಾರಣವಾದ ಸ್ಫೋಟಕ ದಾಳಿಯನ್ನು ನಾನು ಬಲವಾಗಿ ತಿರಸ್ಕರಿಸುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಅಡುಗೆ ಮನೆಯ ನೆಲಮಾಳಿಗೆಯಲ್ಲಿ 2.3ಕೋಟಿ ರೂ. ಮೌಲ್ಯದ ಚಿನ್ನದ ನಾಣ್ಯ ಪತ್ತೆ
Advertisement
Advertisement
ಇದು ಪೊಲೀಸ್ ಭದ್ರತೆಯ ವಿರುದ್ಧದ ದಾಳಿಯಾಗಿದೆ. ಪೊಲೀಸರನ್ನು ಸ್ಫೋಟಕಗಳಿಂದ ಹಾಗೂ ಬಂದೂಕುಗಳಿಂದ ಕೊಲ್ಲಲಾಗಿದೆ ಎಂದು ಪ್ರಾದೇಶಿಕ ಪೊಲೀಸ್ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಯಾರ ಮೇಲೂ ಆರೋಪ ಹೊರಿಸಲಾಗಿಲ್ಲ. ಇದನ್ನೂ ಓದಿ: ಕೋಮು ಸಂಘರ್ಷದ ಮಧ್ಯೆ ಸಾಮರಸ್ಯ ಮೆರೆದ ಮುಸ್ಲಿಂ ಕುಟುಂಬ – ಗಣೇಶ ಪ್ರತಿಷ್ಠಾಪಿಸಿ ಹಬ್ಬ ಆಚರಣೆ
Advertisement
ಪೆಟ್ರೋ ಅವರು ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳ ಭಿನ್ನಮತೀಯರೊಂದಿಗೆ ಕದನ ವಿರಾಮವನ್ನು ಪ್ರಸ್ತಾಪಿಸಿದ್ದರು. ಬಳಿಕ ಅವರು ಶಸ್ತ್ರಾಸ್ತ್ಗಳನ್ನು ತ್ಯಜಿಸಿ 2016ರಲ್ಲಿ ಶಾಂತಿಯ ಮಾತುಕತೆಯನ್ನು ಮುಂದುವರಿಸಿದರು. ಆದರೆ ಬಳಿಕ 2019ರಲ್ಲಿ ಬೊಗೋಟಾದಲ್ಲಿನ ಪೊಲೀಸ್ ಅಕಾಡೆಮಿಯ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, ಅದರಲ್ಲಿ 22 ಜನರು ಸಾವನ್ನಪ್ಪಿದ್ದರು. ಇದರಿಂದ ಶಾಂತಿಯ ಮಾತುಕತೆ ಮುರಿದು ಬಿದ್ದಿತ್ತು.