ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish) ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಈ ಕುರಿತಂತೆ ಮನೆಯಲ್ಲಿ ಡೆತ್ ನೋಟ್ ದೊರೆತದ್ದು. ಈ ಡೆತ್ ನೋಟ್ ಆಧರಿಸಿ ಸೌಂದರ್ಯ ಜದೀಶ್ ಅವರ ಬ್ಯುಸಿನೆಸ್ ಪಾರ್ಟನರ್ಸ್ ಮೇಲೆ ಎಫ್ ಐ ಆರ್ ದಾಖಲಾಗಿದೆ. ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವರ ಮೇಲೆ ಎಫ್‍್.ಐ.ಆ ರ್ ದಾಖಲಿಸಿದ್ದಾರೆ ಪೊಲೀಸರು.
Advertisement
ಸೌಂದರ್ಯ ಜಗದೀಶ್ ಮನೆಯಲ್ಲಿ ಕೆಲವೇ ಸಾಲುಗಳು ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ ಸೌಂದರ್ಯ ಕನ್ಸ್ಟ್ರಕ್ಷನ್ ಸಂಬಂಧ ಬ್ಯುಸಿನೆಸ್ ಲಾಸ್ ಬಗ್ಗೆ ಮಾಹಿತಿ ಇದೆ. ಸುಮಾರು 60 ಕೋಟಿ ನಷ್ಟವಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ಡೆತ್ ನೋಟ್ ಅಧರಿಸಿ ಜಗದೀಶ್ ಪತ್ನಿ ಶಶಿರೇಖಾ ರಿಂದ ಮಹಾಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.
Advertisement
Advertisement
ಈ ಕುರಿತಂತೆ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ‘ರಿಸೆಂಟ್ ಆಗಿ ಡೆತ್ ನೋಟ್ ಸಿಕ್ತು. ನಮ್ಮ ತಂದೆಗೆ ಬ್ಲಾಕ್ ಮೇಲ್ ಮಾಡಿ ಸುರೇಶ್ ಹಾಗೂ ಹೊಂಬಣ್ಣ ಖಾಲಿ ಚೆಕ್ ಗೆ ಸಹಿ ಹಾಕಿಸ್ಕೊಂಡಿದ್ರು. ದುಡ್ಡು ಹೋದ್ರೆ ಹೋಗ್ಲಿ ನಮ್ ತಂದೆನ ಯಾರ್ ತಂದು ಕೊಡ್ತಾರಾ? ನಮ್ ತಂದೆ ಅಂತವ್ರನ್ನೇ ಬೆಂಡ್ ಮಾಡಿದ್ದಾರೆ. ಇನ್ನ ನಮ್ಮನ್ನ ಸುಮ್ನೆ ಬಿಡ್ತಾರಾ ಅಂತಾ ನಮಗೆ ಭಯ ಇದೆ’ ಅಂತಾರೆ. ನಮ್ ತಂದೆ ಸಾವಿಗೆ ನ್ಯಾಯ ಸಿಗೋವರೆಗೂ ಬಿಡೊಲ್ಲ ಅನ್ನುವುದು ಸ್ನೇಹಿತ್ ಮಾತು.
Advertisement
ಜಗದೀಶ್ ಪತ್ನಿ ಶಶಿರೇಖಾ ಕೂಡ ಈ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ‘ಒಂದು ವಾರದ ಹಿಂದೆ ನಮ್ ತಾಯಿ ತೀರಿಕೊಂಡಿದ್ರು. ಆದ್ಮೇಲೆ ಪತಿ ಹೀಗೆ ಮಾಡ್ಕೊಂಡ್ರು. ಸಡನ್ ಶಾಕ್ ತಡ್ಕೊಳ್ಳೋಕೆ ಆಗ್ಲಿಲ್ಲ. ಇದೇ 29ನೇ ತಾರೀಖು ಶ್ರೀರಂಗ ಪಟ್ಟಣದಲ್ಲಿ ಅವ್ರ ಪೂಜೆ ಇದೆ. ಅವ್ರ ಹಳೆ ಬಟ್ಟೆ ತಗೊಳ್ಳೋಣ ಅಂತ ವಾರ್ಡ್ ರೋಬ್ ತೆಗೆದೆ. ಆ ಟೈಂನಲ್ಲಿ ಡೆತ್ ನೋಟ್ ಸಿಕ್ತು. ನಮ್ ಯಜಮಾನ್ರ ಸಾವಿಗೆ ಸುರೇಶ್ ಹೊಂಬಣ್ಣನೇ ಕಾರಣ. ಕೊನೆ ಕಾಲ್ ಕೊನೆ ಮೆಸೇಜ್ ಸುರೇಶ್ ದೆ ಬಂದಿದ್ದು. ತುಂಬಾ ಟಾರ್ಚರ್ ಕೊಡ್ತಿದ್ದಾರೆ ಅಂತ ಒಂದೊಂದು ಸಾರಿ ಹೇಳ್ತಿದ್ರು. ನಮ್ ಫ್ಯಾಮಿಲಿ ತುಂಬಾ ಚನ್ನಾಗಿತ್ತು. ಕಂಪ್ಲೇಂಟ್ ಕೊಟ್ಟಿದ್ದೀನಿ. ಕಾನೂನು ರೀತಿ ಹೋರಾಟ ಮಾಡ್ತೀನಿ’ ಅಂದಿದ್ದಾರೆ.