– ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದ ನಟ
ಮೈಸೂರು: ಬೆನ್ನು ನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ನಟ ದರ್ಶನ್ (Darshan) ಬುಧವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ (Treatment) ಒಳಗಾದರು.
20 ದಿನಗಳ ಹಿಂದೆ ಬೆನ್ನು ನೋವಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ನಟ ದರ್ಶನ್, ಶಸ್ತ್ರಚಿಕಿತ್ಸೆಗೂ (Surgery) ಒಪ್ಪಿದ್ದರು. ಹೀಗಾಗಿ ಕೆಲವು ಮೆಡಿಸಿನ್ ನೀಡಿ ಫಿಸಿಯೋಥೆರಪಿಗೆ ಡಾ. ಅಜಯ್ ಹೆಗ್ಡೆ ಸೂಚಿಸಿದ್ದರು. ಆ ಅವಧಿ ಮುಗಿದ ಕಾರಣ ಇಂದು ನಟ ದರ್ಶನ್ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾದರು. ಇದನ್ನೂ ಓದಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ ದಾಖಲೆ – ಐರ್ಲೆಂಡ್ ವಿರುದ್ಧ ಸರಣಿ ಗೆದ್ದ ಸಿಂಹಿಣಿಯರು
ನಟ ದರ್ಶನ್‌ಗೆ ಇವತ್ತು ಶಸ್ತ್ರಚಿಕಿತ್ಸೆ ಮಾಡಲಿಲ್ಲ. ಶಸ್ತ್ರಚಿಕಿತ್ಸೆಗೂ ಮುನ್ನ ನರ್ವ್ ರೂಟ್ ಬ್ಲಾಕ್‌ಗೆ ಎಪಿಡ್ಯೂರಲ್ ಇಂಜೆಕ್ಷನ್ (Epidural Injection) ಅನ್ನು ವೈದ್ಯರು ನೀಡಿದರು. ಈ ಇಂಜೆಕ್ಷನ್ ಹಿನ್ನೆಲೆಯಲ್ಲಿ ಒಂದು ವಾರ ನಿಗಾ ಇಡಲಾಗುತ್ತದೆ. 1 ವಾರದಲ್ಲಿ ಬ್ಲಾಕ್ ಕ್ಲಿಯರ್ ಆಗದಿದ್ದರೆ ಅಪರೇಷನ್‌ಗೆ ವೈದ್ಯರು ಸಿದ್ಧತೆ ನಡೆಸಲಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮದುವೆಗೆ 4 ದಿನ ಬಾಕಿಯಿರುವಾಗಲೇ ಪೊಲೀಸರ ಮುಂದೆ ಮಗಳನ್ನ ಗುಂಡಿಕ್ಕಿ ಕೊಂದ ತಂದೆ
ದರ್ಶನ್ ಬೆನ್ನು ನೋವಲ್ಲಿ ಸ್ವಲ್ಪ ಗುಣಮುಖ
ಫಿಸಿಯೋಥೆರಪಿಯಲ್ಲಿ ದರ್ಶನ್‌ಗೆ ಬೆನ್ನು ನೋವು ಸ್ವಲ್ಪ ಗುಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 20 ದಿನಗಳ ಹಿಂದೆ ಇದ್ದ ನೋವಿಗೂ ಇಂದಿಗೂ ಬಹಳ ವ್ಯತ್ಯಾಸ ಕಂಡುಬಂದಿದೆ. 20% ನಷ್ಟು ಚೇತರಿಕೆ ಆಗಿದೆ. ವೈದ್ಯರು ಹೇಳಿದ ಈ ಮಾತು ಕೇಳಿ ನಟ ದರ್ಶನ್ ಖುಷಿ ಆಗಿದ್ದಾರೆ. ಆದ್ದರಿಂದ ಫಿಸಿಯೋಥೆರಪಿ ಮುಂದುವರೆಸುವಂತೆ ವೈದ್ಯರು ನಟ ದರ್ಶನ್‌ಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಭ್ರಷ್ಟಾಚಾರ ಆರೋಪ – ರಾಜ್ಯಪಾಲರಿಗೆ ದೂರು
ಎಪಿಡ್ಯೂರಲ್ ಇಂಜೆಕ್ಷನ್ ಕೊಡುವ ಮುನ್ನ ದರ್ಶನ್‌ಗೆ ಇಂಜೆಕ್ಷನ್ ಸೈಡ್ ಎಫೆಕ್ಟ್ ವರ್ಕ್ ಆಗುವ ರೀತಿ ಎಲ್ಲವನ್ನು ವೈದ್ಯ ಡಾ. ಅಜಯ್ ಹೆಗ್ಡೆ ವಿವರಿಸಿದ್ದಾರೆ. ವೈದ್ಯರ ವಿವರಣೆ ಕೇಳಿ ಇಂಜೆಕ್ಷನ್ ಕೊಡಲು ದರ್ಶನ್ ಸಮ್ಮತಿ ಸೂಚಿಸಿದರು. ಒಂದು ವೇಳೆ ಅಪರೇಷನ್ ನಿಶ್ಚಿತವಾದರೆ ದರ್ಶನ್, ಪತ್ನಿ ವಿಜಯಲಕ್ಷ್ಮಿ, ದರ್ಶನ್ ಸಹೋದರ ದಿನಕರ್, ಮಗ ವಿನೀಶ್ ನಾಲ್ವರನ್ನು ಕರೆಸಿ ಅಪರೇಷನ್ ಬಗ್ಗೆ, ಅಪರೇಷನ್ ನಂತರ ಆಗುವ ಪರಿಣಾಮಗಳ ಬಗ್ಗೆ ಕೌನ್ಸಿಲಿಂಗ್ ರೂಪದಲ್ಲಿ ವೈದ್ಯರು ಮಾಹಿತಿ ನೀಡಲಿದ್ದಾರೆ. ಈ ಬಗ್ಗೆ ದರ್ಶನ್‌ಗೂ ವೈದ್ಯರು ತಿಳಿಸಿದ್ದಾರೆ. ಬಳಿಕ ಒಂದು ವಾರದ ನಂತರ ಕುಟುಂಬದ ಸಮೇತ ಆಸ್ಪತ್ರೆಗೆ ಬರುತ್ತೇನೆ ಎಂದು ದರ್ಶನ್ ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣದ ಕುಂಭಮೇಳ ಗವಿಸಿದ್ದೇಶ್ವರ ಜಾತ್ರಾಮಹೋತ್ಸವ – ರಥೋತ್ಸವಕ್ಕೆ ಭಕ್ತರ ದಂಡು
ಅಲ್ಲಿಗೆ ಈ ಒಂದು ವಾರ ದರ್ಶನ್ ಪಾಲಿಗೆ ಬಹಳ ಮಹತ್ತರವಾದದ್ದು. ಇಂಜೆಕ್ಷನ್ ವರ್ಕ್ ಆದರೆ ಆಪರೇಷನ್ ಇಲ್ಲ. ವರ್ಕ್ ಆಗದೆ ಇದ್ದರೆ ಮುಂದಿನ ವಾರ ಆಪರೇಷನ್ ಮಾಡಿಸಿಕೊಳ್ಳುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.