ಚಿಕ್ಕಬಳ್ಳಾಪುರ: ಭೂಮಿಯೇ ಗಡ ಗಡ ನಡುಗುವ ಹಾಗೆ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟಿಂಗ್ ಮಾಡಿರುವ ಘಟನೆ ಗೌರಿಬಿದನೂರು ತಾಲೂಕಿನ ಅರ್ಕುಂದ್ ಗ್ರಾಮದ ಬಳಿ ನಡೆದಿದೆ.
ಅರ್ಕುಂದ್ ಹಾಗೂ ಕಾಟನಾಗೇನಹಳ್ಳಿ ಗ್ರಾಮದ ಮಧ್ಯೆ ಇರುವ ಬೆಟ್ಟದಲ್ಲಿ ಈ ಬ್ಲಾಸ್ಟಿಂಗ್ ಮಾಡಿದ್ದಾರೆ. ಈ ಗಣಿಗಾರಿಕೆ ಸ್ಪೋಟದ ದೃಶ್ಯವು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಈ ಗಣಿಗಾರಿಕೆಯ ಸ್ಪೋಟದ ರಭಸಕ್ಕೆ ಬೃಹತ್ ಕಲ್ಲು ಬಂಡೆಗೆಳು ಆಕಾಶದತ್ತ ಚಿಮ್ಮುವಂತೆ ಕಾಣುತ್ತವೆ. ಸುಮಾರು 500-600 ಮೀ. ದೂರದವರೆಗೂ ಭಾರೀ ಗಾತ್ರದ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯ ಬಂಡೆಗಳ ಮೇಲೆ ಪ್ರವಾಸಿಗರ ಮೋಜು-ಮಸ್ತಿ- ಸೂಕ್ತ ಕ್ರಮಕ್ಕೆ ಮನವಿ
Advertisement
Advertisement
ಈ ಸ್ಫೋಟದಿಂದಾಗಿ ರೈತರ ಜಮೀನುಗಳಿಗೆ ಆ ಬೃಹತ್ ಗಾತ್ರದ ಕಲ್ಲುಗಳು ಬಂದು ಬಿದ್ದಿದೆ. ನಿಯಮಗಳನ್ನು ಮೀರಿ ಕಲ್ಲು ಕ್ವಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟವಾಗುತ್ತಿದೆ. ಇದರಿಂದ ಬಹಳಷ್ಟು ತೊಂದರೆ ಆಗುತ್ತಿದೆ. ಈ ಕಲ್ಲು ಕ್ವಾರಿಗಳು ನಡೆಯುತ್ತಿರುವ ಜಾಗಕ್ಕೆ ಪ್ರಾಣಿಗಳು, ಅಥವಾ ಮನುಷ್ಯರು ಹೋದರೆ ಅವರ ಜೀವಕ್ಕೆ ಹಾನಿ ಆಗುವಷ್ಟು ಆಪತ್ತು ಇದೆ. ಈ ಬಗ್ಗೆ ಇನ್ನಾದರೂ ಇಲಾಖೆ ಕ್ರಮ ತೆಗೆದುಕೊಳ್ಳುತ್ತವೆಯಾ ಎಂದು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ರಾಜಧಾನಿಯಲ್ಲಿ ಪ್ರಯಾಣಿಕರಿಗೆ ತಟ್ಟಲಿದೆ ಡೀಸೆಲ್ ಕೊರತೆ ಬಿಸಿ – ಬಸ್ ಸಂಚಾರದಲ್ಲಿ ವ್ಯತ್ಯಯ