PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?

Public TV
4 Min Read
KAVACH INDIAN RAILWAY 1

320 X 50

ಡಿಶಾ ರೈಲು (Odisha Train) ಅಪಘಾತವು ದೇಶದ ರೈಲು ದುರಂತಗಳ ಇತಿಹಾಸಕ್ಕೆ ಸಿಕ್ಕ ಮತ್ತೊಂದು ಕಪ್ಪು ಚುಕ್ಕೆ. ಭಾರತದ ಇತಿಹಾಸದಲ್ಲಿ ಈವರೆಗೆ ಸಂಭವಿಸಿದ ಭೀಕರ ರೈಲು ದುರಂತಗಳ ಸಾಲಿಗೆ ಒಡಿಶಾ ಅಪಘಾತವು ಸೇರುತ್ತದೆ. ಅವಘಡದಲ್ಲಿ 260 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರುತ್ತಿದೆ. 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ನರಳುತ್ತಿದ್ದಾರೆ. ಈ ರೈಲು ದುರಂತಕ್ಕೆ ಭಾರತ (India) ಅಷ್ಟೇ ಅಲ್ಲ ವಿದೇಶಗಳ ಅನೇಕ ಗಣ್ಯರು ವಿಷಾದ ವ್ಯಕ್ತಪಡಿಸಿದ್ದಾರೆ. ನೂರಾರು ಸಾವು-ನೋವುಗಳ ಮಧ್ಯೆ ರೈಲ್ವೆ ಇಲಾಖೆಯ ‘ಕವಚ’ ತಂತ್ರಜ್ಞಾನದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿದ್ದರೆ ಒಡಿಶಾ ರೈಲು ದುರಂತ (Odisha Train Tragedy) ವನ್ನು ತಪ್ಪಿಸಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಾಗಾದ್ರೆ, ಏನಿದು ರೈಲ್ವೆ ಇಲಾಖೆ (Indian Railway Department) ಯ ‘ಕವಚ’ ಸಿಸ್ಟಮ್. ಭೀಕರ ರೈಲು ದುರಂತಗಳನ್ನು ತಪ್ಪಿಸುವಲ್ಲಿ ಇದರ ಪಾತ್ರ ಏನು? ಇದರಿಂದ ಒಡಿಶಾದ ರೈಲು ದುರಂತವನ್ನು ತಪ್ಪಿಸಬಹುದಿತ್ತೇ ಎಂಬ ಪ್ರಶ್ನೆ ಮೂಡುವುದು ಸಹಜ. ಕವಚ ತಂತ್ರಜ್ಞಾನದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

ASHWIN VAISHNAV

ಏನಿದು ‘ಕವಚ’..?: ‘ಕವಚ’ (KAVACH) ಎಂಬುದು ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಿಸ್ಟಮ್. ಭಾರತೀಯ ರೈಲ್ವೆಯು ಶೂನ್ಯ ಅಪಘಾತಗಳನ್ನು ಸಾಧಿಸುವುದಕ್ಕೆ ಸಹಾಯ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆ. ದೇಶಾದ್ಯಂತ ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆ ಸಾಧಿಸಲು ಭಾರತೀಯ ಉದ್ಯಮದ ಸಹಯೋಗದೊಂದಿಗೆ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (RDSO)ಯು ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತ- ಬ್ರಿಟನ್ ಪ್ರಧಾನಿ ರಿಶಿ ಸುನಕ್ ಸಂತಾಪ

ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆ ಕವಚ ಭಾರತದ ರೈಲ್ವೆ ಇತಿಹಾಸದಲ್ಲೇ ಕ್ರಾಂತಿ ತಂದಿದೆ. ಕವಚ ತಂತ್ರಜ್ಞಾನ ಲೋಕೋಮೋಟಿವ್ ಡ್ರೈವರ್‍ ಳಿಗೆ ಅಪಾಯದ ಸಂಕೇತ ನೀಡುತ್ತದೆ. ವೇಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 2 ರೈಲು ವಿರುದ್ಧ ದಿಕ್ಕಿನಿಂದ ಬಂದರೂ, ಎರಡರ ವೇಗ ಏನೇ ಇದ್ದರೂ ರೈಲು ‘ರಕ್ಷಾ ಕವಚ’ದಿಂದ ಡಿಕ್ಕಿಯಾಗದೆ ರಕ್ಷಿತವಾಗುತ್ತದೆ. ಹೀಗಾಗಿಯೇ ಕವಚ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಭಾರತದ ಕವಚ ವಿಶ್ವದ ಅತ್ಯಂತ ಸ್ವಯಂಚಾಲಿತ ರೈಲು ಅಪಘಾತ ತಪ್ಪಿಸುವ ರಕ್ಷಣಾತ್ಮಕ ವ್ಯವಸ್ಥೆಯಾಗಿದೆ. ಕವಚ ಸಿಸ್ಟಮ್‍ಗೆ ಹೊರದೇಶಗಳಲ್ಲಿ ಸುಮಾರು 2 ಕೋಟಿ ರೂ. ಬೆಲೆ ಇರುತ್ತದೆ. ಆದರೆ ದೇಶದಲ್ಲಿ ಅಭಿವೃದ್ಧಿಪಡಿಸಲಾದ ಕವಚ ಸಿಸ್ಟಮ್‍ಗೆ ಪ್ರತಿ ಕಿಲೋಮೀಟರ್‍ಗೆ 50 ಲಕ್ಷ ವೆಚ್ಚವಾಗುತ್ತದೆ.

ODISHA TRAIN

ಮೊದಲ ಬಾರಿಗೆ ‘ಕವಚ’ ಪ್ರಯೋಗ ಆಗಿದ್ದು ಯಾವಾಗ?: ಮಾರ್ಚ್ 4, 2022 ರಂದು, ದಕ್ಷಿಣ ಮಧ್ಯ ರೈಲ್ವೆಯ ಗುಲ್ಲಗುಡ-ಚಿಟ್ಗಿಡ್ಡಾ ರೈಲು ನಿಲ್ದಾಣಗಳ ನಡುವೆ ‘ಕವಚ’ದ ಯಶಸ್ವಿ ಪ್ರಯೋಗ ನಡೆಸಲಾಯಿತು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಪ್ರಯೋಗವನ್ನು ಪರಿಶೀಲಿಸಿದರು. ಒಂದೇ ಹಳಿಯಲ್ಲಿ ಕವಚ ವ್ಯವಸ್ಥೆಯಿರುವ ಎರಡು ರೈಲುಗಳನ್ನು ಚಲಾಯಿಸಲಾಯಿತು. ರೈಲುಗಳು ಹತ್ತಿರವಾಗುತ್ತಿದ್ದಂತೆ ಅಪಾಯದ ಸೂಚನೆ ಅರಿತು ಕವಚ ವ್ಯವಸ್ಥೆಯು ಸ್ವಯಂಚಾಲಿತವಾಗಿ ಬ್ರೇಕಿಂಗ್ ಕಾರ್ಯ ಮಾಡುತ್ತದೆ. ಆಗ ಎರಡು ರೈಲುಗಳು 380 ಮೀಟರ್ ಅಂತರದಲ್ಲಿ ನಿಂತುಕೊಳ್ಳುತ್ತವೆ. ಇದಲ್ಲದೆ, ಲೊಕೊಮೊಟಿವ್ ಲೂಪ್ ಲೈನ್ ಅನ್ನು ಪ್ರವೇಶಿಸಿದಾಗ KAVACH ಸ್ವಯಂಚಾಲಿತವಾಗಿ ವೇಗವನ್ನು 60 ಕಿ.ಮೀ. ನಿಂದ 30 ಕಿ.ಮೀ. ಗೆ ಕಡಿಮೆ ಮಾಡುತ್ತದೆ. ಹೀಗೆ ಕವಚದ ಯಶಸ್ವಿ ಪ್ರಯೋಗ ನಡೆಸಲಾಯಿತು. ಇದನ್ನೂ ಓದಿ: ಭಾರತದಲ್ಲಿ ಭೀಕರ ರೈಲು ದುರಂತ ಕಂಡು ತುಂಬಾ ದುಃಖವಾಗಿದೆ – ಪಾಕಿಸ್ತಾನ, ತಾಲಿಬಾನ್‌ ಸಂತಾಪ

KAVACH INDIAN RAILWAY 2

ಕವಚ ವೈಶಿಷ್ಯವೇನು?
* ಸಿಗ್ನಲ್ ನೀಡಿ ಅಪಾಯವನ್ನು ತಪ್ಪಿಸುತ್ತದೆ.
* ಚಲನೆಯ ಸಂದರ್ಭದಲ್ಲಿ ಕಾಲಕಾಲಕ್ಕೆ ಅಪ್‍ಡೇಟ್ ನೀಡುತ್ತೆ.
* ಅತಿ ವೇಗವನ್ನು ತಡೆಗಟ್ಟಲು ಸ್ವಯಂಚಾಲಿತ ಬ್ರೇಕಿಂಗ್
* ಲೆವೆಲ್ ಕ್ರಾಸಿಂಗ್ ಗೇಟ್ಸ್ ಸಮೀಪಿಸುತ್ತಿರುವಾಗ ಸಿಗ್ನಲ್, ಶಬ್ಧ ಹೊಮ್ಮುವುದು.
* ನೆಟ್‍ವರ್ಕ್ ಮಾನಿಟರ್ ಸಿಸ್ಟಮ್ ಮೂಲಕ ರೈಲು ಚಲನೆಗಳ ಕೇಂದ್ರೀಕೃತ ನೇರ ಮೇಲ್ವಿಚಾರಣೆ.

ಕವಚ ವ್ಯವಸ್ಥೆಯಿಂದ ಒಡಿಶಾ ರೈಲು ದುರಂತ ತಪ್ಪುತ್ತಿತ್ತೆ?: ಮೂರು ರೈಲುಗಳ ಡಿಕ್ಕಿಯಿಂದಾಗಿ ಒಡಿಶಾ ರೈಲು ದುರಂತ ಸಂಭವಿಸಿದೆ. ಪರಿಣಾಮವಾಗಿ 260ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಮಾರ್ಗದಲ್ಲಿ ಕವಚ ತಂತ್ರಜ್ಞಾನ ವ್ಯವಸ್ಥೆ ಲಭ್ಯವಿರಲಿಲ್ಲ’ ಎಂದು ಭಾರತೀಯ ರೈಲ್ವೆ ಇಲಾಖೆ ವಕ್ತಾರ ಅಮಿತಾಭ್ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.

ಎರಡು ರೈಲು ಒಂದೇ ಹಳಿಯಲ್ಲಿ ಸಾಗಿದಾಗ, ಕವಚ ತಂತ್ರಜ್ಞಾನ ವ್ಯವಸ್ಥೆ ಇದ್ದರೆ ರೈಲು ಅಪಘಾತವನ್ನು ತಪ್ಪಿಸಬಹುದು. ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿರುವ ಈ ಕವಚ ರೈಲುಗಳು 380 ಮೀಟರ್ ಅಂತರದಲ್ಲಿ ನಿಂತುಕೊಳ್ಳುವಂತೆ ಮಾಡುತ್ತದೆ. ಆಗ ಅಪಘಾತ ತಪ್ಪುತ್ತದೆ. ಆದರೆ ಒಡಿಶಾ ರೈಲು ದುರಂತದವನ್ನು ಗಮನಿಸಿದಾಗ 3 ಹಳಿಗಳಲ್ಲಿ ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿದೆ. ಒಂದು ಹಳಿಯಲ್ಲಿ ಸಾಗುತ್ತಿದ್ದ ರೈಲು ಹಳಿತಪ್ಪಿದ್ದು, ಅದರ ಕೆಲ ಬೋಗಿಗಳು ಮುರಿದು ಮತ್ತೊಂದು ಹಳಿ ಮೇಲೆ ಬಿದ್ದಿವೆ. ಈ ವೇಳೆ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ರೈಲು ತನ್ನ ಹಳಿ ಮೇಲೆ ಬಿದ್ದದ್ದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ದುರಂತ ಸಂಭವಿಸಿ, ಅಪಾರ ಸಾವು ನೋವಾಗಿದೆ. ಈ ದುರಂತಕ್ಕೆ ಕವಚ ತಂತ್ರಜ್ಞಾನ ವ್ಯವಸ್ಥೆ ಎಷ್ಟು ಸಹಕಾರಿಯಾಗುತ್ತಿತ್ತು ಎಂಬ ಪ್ರಶ್ನೆ ಕೂಡ ಉದ್ಭವಿಸುತ್ತದೆ.

 

Share This Article