Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Explainer | ಪಬ್‌ಜಿ, ಬ್ಲೂ ವೇಲ್‌, ಕೊರಿಯನ್‌ ಲವ್‌ ಗೇಮ್‌ – ಮಕ್ಕಳ ಜೀವ ಕಸಿಯುತ್ತಿದೆ ಆನ್‌ಲೈನ್‌ ಗೇಮಿಂಗ್‌ ಗೀಳು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Explainer | Explainer | ಪಬ್‌ಜಿ, ಬ್ಲೂ ವೇಲ್‌, ಕೊರಿಯನ್‌ ಲವ್‌ ಗೇಮ್‌ – ಮಕ್ಕಳ ಜೀವ ಕಸಿಯುತ್ತಿದೆ ಆನ್‌ಲೈನ್‌ ಗೇಮಿಂಗ್‌ ಗೀಳು

Explainer

Explainer | ಪಬ್‌ಜಿ, ಬ್ಲೂ ವೇಲ್‌, ಕೊರಿಯನ್‌ ಲವ್‌ ಗೇಮ್‌ – ಮಕ್ಕಳ ಜೀವ ಕಸಿಯುತ್ತಿದೆ ಆನ್‌ಲೈನ್‌ ಗೇಮಿಂಗ್‌ ಗೀಳು

Public TV
Last updated: February 14, 2026 3:23 pm
Public TV
Share
6 Min Read
Online Game
SHARE

ಆನ್‌ಲೈನ್ ಗೇಮ್‌ಗಳು ಕೇವಲ ಮನರಂಜನೆಯಲ್ಲ, ಅವು ಮಕ್ಕಳ ಪ್ರಾಣಕ್ಕೆ ಕಂಟಕವಾಗಬಲ್ಲವು ಎಂಬ ಆತಂಕಕಾರಿ ಸತ್ಯ ಮತ್ತೊಮ್ಮೆ ಸಾಬೀತಾಗಿದೆ. ಕೆಲ ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ‘ಬ್ಲೂ ವೇಲ್’ ಗೇಮ್ ಮಾದರಿಯಲ್ಲೇ, ಇದೀಗ ‘ಕೊರಿಯನ್ ಲವ್ ಗೇಮ್’ ಎಂಬ ಹೊಸ ಪಿಡುಗು ಮಕ್ಕಳನ್ನು ಆವರಿಸಿಕೊಂಡಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಗೇಮಿಂಗ್ ವ್ಯಸನಕ್ಕೆ ತುತ್ತಾಗಿರುವ ಮಕ್ಕಳು, ಯುವಕರು ಹಗಲು ರಾತ್ರಿ ಗೇಮಿನಲ್ಲೇ ಮುಳುಗಿ ಸಮಯ ವ್ಯರ್ಥ ಮಾಡುವುದಲ್ಲದೇ ತಮ್ಮ ಪ್ರಾಣಕ್ಕೂ ಕಂಟಕ ತಂದುಕೊಳ್ಳುತ್ತಿದ್ದಾರೆ. ಇದರಿಂದ ಮಾನಸಿಕ ಒತ್ತಡಕ್ಕೊಳಗಾದವರು ಪ್ರಾಣವನ್ನೇ ಕಳೆದುಕೊಳ್ಳುವ ಹಂತಕ್ಕೆ ಹೋಗುತ್ತಾರೆ.

ಒಂದು ಕಾಲದಲ್ಲಿ ಮೈದಾನಕ್ಕಿಳಿದು ಆಡುವುದು, ದೋಸ್ತರೊಂದಿಗೆ ಹರಟೆ ಹೊಡೆಯುವುದೇ ಮಕ್ಕಳ ಮತ್ತು ಯುವಕರ ಪಾಲಿನ ಮನರಂಜನೆ ಆಗಿತ್ತು. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಆನ್​ಲೈನ್​ ಗೇಮಿಂಗ್ ಈ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ. ಆನ್‌ಲೈನ್‌ ಗೇಮಿಂಗ್‌ಗೆ ಅಡಿಕ್ಟ್ ಆಗಿರುವ ಇಂದಿನ ಯುವ ಸಮಾಜದಲ್ಲಿ ಜನರ ಜೀವಕ್ಕೂ ಬೆಲೆ ಇಲ್ಲದಂತಾಗಿದೆ. ಕೊರಿಯನ್‌ ಲವ್‌ ಗೇಮ್‌ಗೆ ಮೂವರು ಸಹೋದರಿಯರ ಆತ್ಮಹತ್ಯೆ ಹಾಗೂ ಪಬ್‌ಜಿ ಆಡುವಾಗಲೇ ಯುವಕ ಸಾವನ್ನಪ್ಪಿರುವ ಪ್ರಕರಣ ಇದಕ್ಕೆ ಜೀವಂತ ಸಾಕ್ಷಿ. ಕೇವಲ ಈ ಪ್ರಕರಣ ಮಾತ್ರವಲ್ಲ, ದೇಶಾದ್ಯಂತ ಈ ರೀತಿಯ ಪ್ರಕರಣಗಳು ನಡೆಯುತ್ತಲೇ ಇದೆ. ಹಾಗಿದ್ರೆ ಆನ್‌ಲೈನ್‌ ಗೇಮಿಂಗ್‌ ಮಕ್ಕಳ ಜೀವಕ್ಕೆ ಮಾರಕವಾಗುತ್ತಿರುವುದು ಹೇಗೆ? ಇದರಿಂದ ರಕ್ಷಣೆ ಹೇಗೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

Gaziabad 3 Sisters Death Korean Love Game

ಕೊರಿಯನ್‌ ಲವ್‌ ಗೇಮ್‌ಗೆ ಮೂವರು ಸಹೋದರಿಯರ ಬಲಿ:
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನೆಲೆಸಿದ್ದ 12, 14 ಮತ್ತು 16 ವರ್ಷದ ಮೂವರು ಸಹೋದರಿಯರು ಕೋರಿಯನ್ ಲವ್ ಗೇಮ್​ ಒಂದಕ್ಕೆ ಇನ್ನಿಲ್ಲದಂತೆ ಅಡಿಕ್ಟ್ ಆಗಿದ್ದರು. ಕೋವಿಡ್ ಸಮಯದಲ್ಲಿ ಮೂವರು ಟೈಮ್ ಪಾಸ್​ಗೆಂದು ಈ ಗೇಮ್​ ಆಡಲು ಶುರು ಮಾಡಿದ್ದರೂ ಕ್ರಮೇಣ ಅದು ಚಟವಾಗಿ ಪರಿಣಮಿಸಿತ್ತು. ಎಷ್ಟರ ಮಟ್ಟಿಗೆಂದರೆ ಅಕ್ಕ-ತಂಗಿಯರೆಲ್ಲರೂ ಶಾಲೆಗೆ ಹೋಗುವುದನ್ನೂ ನಿಲ್ಲಿಸಿದ್ದರು. ಇವರ ವರ್ತನೆಗೆ ಬೇಸತ್ತ ತಂದೆ-ತಾಯಿ ಆಟವಾಡಬೇಡಿ ಎಂದು ತಡೆದಾಗ, ಮಾನಸಿಕ ಒತ್ತಡಕ್ಕೆ ಸಿಲುಕಿದ ಮಕ್ಕಳು, ಬೆಳಗಿನ ಜಾವ 2 ಗಂಟೆಗೆ, ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಒಬ್ಬೊಬ್ಬರಾಗಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಬ್‌ಜಿ ಗೇಮ್‌ ಆಡುವಾಗಲೇ ಯುವಕ ಸಾವು:
ಆನ್​ಲೈನ್ ಗೇಮ್​ ಕೇವಲ ಮಾನಸಿಕ ಮಾತ್ರವಲ್ಲದೆ ದೈಹಿಕವಾಗಿಯೂ ಮಾರಕವಾಗಿದೆ ಎಂಬುದಕ್ಕೆ ಮೀರತ್​ನ ಘಟನೆಯೊಂದು ಸಾಕ್ಷಿಯಾಗಿದೆ. 22 ವರ್ಷದ ಮೊಹಮ್ಮದ್ ಕೈಫ್ ಪಬ್‌ಜಿ ಗೇಮ್‌ಗೆ ತೀವ್ರವಾಗಿ ಅಡಿಕ್ಟ್ ಆಗಿದ್ದ. ರಾತ್ರಿ 3 ಗಂಟೆಗೆ ಪಬ್‌ಜಿ ಆಡುತ್ತಿದ್ದಾಗಲೇ ಅವನಿಗೆ ಹೈಪರ್‌ಟೆನ್ಷನ್ ಉಂಟಾಗಿ, ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ರಕ್ತದೊತ್ತಡ 300ಕ್ಕಿಂತ ಹೆಚ್ಚಾಗಿತ್ತು. ಎರಡು ದಿನಗಳ ಚಿಕಿತ್ಸೆ ಬಳಿಕವೂ ಕೈಫ್ ಪ್ರಾಣ ಕಳೆದುಕೊಂಡಿದ್ದಾನೆ. ಡೋಪಮೈನ್ ಹೆಚ್ಚಳ, ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡವೇ ಈ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

Uttar Pradesh Meerut PUBG Death

ಕಳೆದ ಒಂದು ವರ್ಷದಲ್ಲಿ ಭಾರತದ 100ಕ್ಕೂ ಹೆಚ್ಚು ಜೀವಗಳು ಇದೇ ಗೇಮ್ ಗೀಳಿಗೆ ಬಲಿಯಾಗಿವೆ. ಅಪ್ರಾಪ್ತರಿಗೆ ಟಾಸ್ಕ್ ಆಧಾರಿತ, ಹಿಂಸಾತ್ಮಕ ಹಾಗೂ ಮಾನಸಿಕ ಒತ್ತಡ ನೀಡುತ್ತಿರುವ ಈ ಆನ್​ಲೈನ್ ಗೇಮ್​ಗಳು ಇನ್ನೆಷ್ಟು ಜೀವಗಳನ್ನು ಬಲಿಪಡೆಯಬೇಕೆಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಏನಿದು ಕೊರಿಯನ್‌ ಲವ್‌ ಗೇಮ್?
ಕೊರಿಯನ್ ಲವ್ ಗೇಮ್ ಹೆಸರಿನಲ್ಲಿ ಡಿಸೈನ್‌ ಮಾಡಲಾದ ಗೇಮ್‌ಗಳು ಸಾಮಾನ್ಯ ವಿಡಿಯೋ ಗೇಮ್‌ಗಳಲ್ಲ. ಇವು ಹೆಚ್ಚಿನದಾಗಿ ವರ್ಚುವಲ್ ರೊಮ್ಯಾನ್ಸ್ ಅಥವಾ ಡೇಟಿಂಗ್ ಗೇಮ್‌ಗಳ ರೂಪದಲ್ಲಿರುತ್ತವೆ. ಆಟಗಾರನು ಒಂದು ಪಾತ್ರವನ್ನು ಆಯ್ಕೆ ಮಾಡಿಕೊಂಡು, ಪರದೆಯಲ್ಲಿರುವ ವರ್ಚುವಲ್ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸುತ್ತಾನೆ. ಆರಂಭದಲ್ಲಿ ಇದು ಅಷ್ಟೇನೂ ಅಪಾಯಕಾರಿಯಾಗಿ ಕಾಣಿಸುವುದಿಲ್ಲ. ಅಲ್ಲಿ ಸೃಷ್ಟಿಸುವ ಮಾತುಕತೆ, ಕೃತಕ ಭಾವನೆ, ಕಾಳಜಿ, ಪ್ರೀತಿ ಎಲ್ಲವೂ ಫೇಕ್‌ ಆಗಿರುತ್ತವೆ. ಆ ಫೇಕ್‌ ಭಾವನೆಗಳು ನಿಧಾನವಾಗಿ ಆಡುವವರ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತವೆ. ಅಪರಿಚಿತ ವ್ಯಕ್ತಿಯೊಬ್ಬ ಮಗುವಿನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಂಭಾಷಣೆಯನ್ನು ಪ್ರಾರಂಭಿಸುವುದರೊಂದಿಗೆ ‘ಆಟ’ ಪ್ರಾರಂಭವಾಗುತ್ತದೆ.

ಇದು ಕೇವಲ ಸಮಯ ಕಳೆಯುವ ಸಲುವಾಗಿ ಆಡುವ ವಿಶಿಷ್ಟ ಆಟವಲ್ಲ. ಇದು ಕೊರಿಯನ್ ಶೈಲಿಯ ಆನ್‌ಲೈನ್ ಲವ್ ಅಥವಾ ರೊಮ್ಯಾಂಟಿಕ್ ಟಾಸ್ಕ್-ಆಧಾರಿತ ಆಟ. ಈ ಕೊರಿಯನ್ ಲವ್ ಗೇಮ್‌ಗಳನ್ನು ಹೆಚ್ಚಾಗಿ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ನಡೆಸಲಾಗುತ್ತದೆ. ಬಳಕೆದಾರರನ್ನು ಕೊರಿಯನ್ ಸಂಸ್ಕೃತಿ, ಕೆ-ಪಾಪ್ ಮತ್ತು ಕೆ-ಡ್ರಾಮಾಗೆ ಸಂಪರ್ಕಿಸುತ್ತದೆ. ಆಟಗಾರರು ಕೊರಿಯನ್ ಶೈಲಿಯಲ್ಲಿ ಮಾತನಾಡುವ, ಪ್ರಣಯ ಸಂದೇಶಗಳನ್ನು ಕಳುಹಿಸುವ ಮತ್ತು ದೈನಂದಿನ ಕಾರ್ಯಗಳನ್ನು ನೀಡುವ ವರ್ಚುವಲ್ ಪ್ರೇಮಿ ಅಥವಾ ಪಾಲುದಾರರನ್ನು ಆಯ್ಕೆ ಮಾಡುತ್ತಾರೆ.

Online Game 1

ಆಟ ಮುಂದುವರೆದಂತೆ, ಕಾರ್ಯಗಳು ಹೆಚ್ಚು ಕಷ್ಟಕರವಾಗುತ್ತವೆ. ಆರಂಭದಲ್ಲಿ, ಅವು ದಿನವಿಡೀ ಫೋಟೋಗಳನ್ನು ಕಳುಹಿಸುವುದು, ಬರೆಯುವುದು ಅಥವಾ ಚಾಟ್ ಮಾಡುವಂತಹ ಸಣ್ಣ ಕಾರ್ಯಗಳನ್ನು ಒಳಗೊಂಡಿರುತ್ತವೆ. ಆದಾಗ್ಯೂ, ನಂತರ, ಟಾಸ್ಕ್‌ಗಳು ತುಂಬಾ ವೈಯಕ್ತಿಕ ಮತ್ತು ಅಪಾಯಕಾರಿಯಾಗಬಹುದು, ಸ್ವಯಂ-ಹಾನಿ ಅಥವಾ ಅಂತಿಮವಾಗಿ ಪ್ರಾಣಪಾಯ ಉಂಟುಮಾಡುವಂತಹ ಟಾಸ್ಕ್‌ಗಳು ಕೂಡ ಇದರಲ್ಲಿ ಸೇರಿರುತ್ತದೆ.

ದೇಶದಲ್ಲಿ ಕೊರಿಯನ್‌ ಸಂಸ್ಕೃತಿ ಗೀಳು:
ಈ ಆಟಗಳು ಕೊರಿಯಾದಿಂದ ಪ್ರೇರಿತವಾಗಿವೆ. ಅಲ್ಲಿ ಕೆ-ಡ್ರಾಮಗಳು ಮತ್ತು ಕೆ-ಪಾಪ್ ಆಟಗಳಿಗೆ ಭಾರಿ ಕ್ರೇಜ್ ಇದೆ. ಬಳಕೆದಾರರು ತಮ್ಮನ್ನು ಕೊರಿಯನ್ನರು ಎಂದು ಕಲ್ಪಿಸಿಕೊಳ್ಳಲು ಪ್ರಾರಂಭಿಸುತ್ತಾರೆ, ತಮ್ಮನ್ನು ರಾಜಕುಮಾರಿಯರು ಅಥವಾ ಕೊರಿಯನ್ ಪ್ರೇಮಿಗಳು ಎಂದು ಕಲ್ಪಿಸಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ, ಇದು ವ್ಯಸನವಾಗಿ ಪರಿಣಮಿಸುತ್ತದೆ, ಇದು ಅವರ ಮನಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಳ್ಳಲು ಕಾರಣವಾಗುತ್ತದೆ.

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಕೊರಿಯನ್ ಸಂಸ್ಕೃತಿ ಭಾರತದಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಿತು. ಎಲ್ಲೆಡೆ ಲಾಕ್‌ಡೌನ್ ಆಗುತ್ತಿದ್ದಂತೆ ಅನೇಕರು ಮನರಂಜನೆಗಾಗಿ ನೆಟ್‌ಫ್ಲಿಕ್ಸ್ ಮತ್ತು ಇತರ OTT ಪ್ಲಾಟ್‌ಫಾರ್ಮ್‌ಗಳನ್ನು ಬಳಸಿದರು. ಇದರಲ್ಲಿ ಪ್ರಸಾರವಾಗುತ್ತಿದ್ದ ಕೆ-ಡ್ರಾಮಾಗಳು ಜನಪ್ರಿಯವಾದವು. ಇಂದು ಕೆ-ಡ್ರಾಮಾ ಮತ್ತು ಕೆ-ಪಾಪ್ ಭಾರತದಲ್ಲಿ ದೊಡ್ಡ ಮಾರುಕಟ್ಟೆಯನ್ನು ಕಂಡುಕೊಂಡಿವೆ. 2025ರ ಜಾಗತಿಕ ಹಲ್ಯು ಸಮೀಕ್ಷೆಯಲ್ಲಿ (2024ರ ಡೇಟಾವನ್ನು ಆಧರಿಸಿ) ಫಿಲಿಪೈನ್ಸ್ ಮತ್ತು ಇಂಡೋನೇಷ್ಯಾ ನಂತರ ಭಾರತವು ಕೆ-ಕಂಟೆಂಟ್ ಬಗ್ಗೆ ಜಾಗತಿಕವಾಗಿ ಶೇಕಡಾ 84.5ರಷ್ಟು ಹೆಚ್ಚಿನ ಒಲವು ಹೊಂದಿದೆ. ಸರಿಸುಮಾರು 185 ಮಿಲಿಯನ್ ಬಳಕೆದಾರರಲ್ಲಿ ಭಾರತದ ಕೆ-ಪಾಪ್ ಸ್ಟ್ರೀಮಿಂಗ್ ಸಂಖ್ಯೆಗಳು ಜಾಸ್ತಿ ಇದೆ ಎಂದು ಫೈನಾನ್ಶಿಯಲ್‌ ಎಕ್ಸ್‌ಪ್ರೆಸ್ ವರದಿ ಹೇಳಿದೆ.

AI Image
AI Image

2023ರಲ್ಲಿ ಭಾರತದಲ್ಲಿ ಡ್ಯುಯೊಲಿಂಗೊದಲ್ಲಿ ನಾಲ್ಕನೇ ಹೆಚ್ಚು ಕಲಿತ ವಿದೇಶಿ ಭಾಷೆಯೆಂದರೆ ಅದು ಕೊರಿಯನ್ ಭಾಷೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 2020ರಲ್ಲಿ ತನ್ನ ವಿದೇಶಿ ಭಾಷಾ ಪಠ್ಯಕ್ರಮದ ಅಡಿಯಲ್ಲಿ ಕೊರಿಯನ್ ಅನ್ನು ಐಚ್ಚಿಕ ಭಾಷೆಯಾಗಿ ಅಧಿಕೃತವಾಗಿ ಸೇರಿಸಿತು. 2024ರ ಹೊತ್ತಿಗೆ 2,000ಕ್ಕೂ ಹೆಚ್ಚು CBSE-ಸಂಯೋಜಿತ ಶಾಲೆಗಳು ಕೊರಿಯನ್ ಅನ್ನು ಎರಡನೇ ಅಥವಾ ಮೂರನೇ ಭಾಷೆಯಾಗಿ ಕಲಿಸುತ್ತಿವೆ.

KOTRA (Korea Trade-Investment Promotion Agency) ಪ್ರಕಾರ, 2020 ಮತ್ತು 2023ರ ನಡುವೆ ಭಾರತದ ಕೊರಿಯನ್ ಜೀವನಶೈಲಿ ಉತ್ಪನ್ನಗಳು (ಸೌಂದರ್ಯ, ಆಹಾರ, ಫ್ಯಾಷನ್) ಆಮದು ಶೇಕಡಾ 287ರಷ್ಟು ಹೆಚ್ಚಾಗಿದೆ. ಇದರ ಮೌಲ್ಯ 2023ರ ಅಂತ್ಯದ ವೇಳೆಗೆ 418 ಮಿಲಿಯನ್ ಅಮೆರಿಕನ್ ಡಾಲರ್ ಗಿಂತಲೂ ಹೆಚ್ಚು ಕೆ-ಬ್ಯೂಟಿ ಮತ್ತು ಕೆ-ಫ್ಯಾಷನ್ ಬ್ರ್ಯಾಂಡ್‌ಗಳು 160ಕ್ಕೂ ಹೆಚ್ಚು ಭಾರತೀಯ ಮಾಲ್ ಗಳು ಮತ್ತು ಚಿಲ್ಲರೆ ಮಾರುಕಟ್ಟೆಗಳನ್ನು ಸಹ ಪ್ರವೇಶಿಸಿವೆ.

ಬ್ಲೂ ವೇಲ್ ಗೇಮ್:
ಇದರಲ್ಲಿ 50 ದಿನಗಳ ಕಾಲ 50 ಟಾಸ್ಕ್‌ಗಳನ್ನು ನೀಡಲಾಗುತ್ತಿತ್ತು. ಅಂತಿಮ ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಗುತ್ತಿತ್ತು.‌ ಬಹಳಷ್ಟು ಮಂದಿ ಈ ಗೇಮ್‌ಗೆ ಅಡಿಕ್ಟ್‌ ಆಗಿ ತಮ್ಮ ಜೀವವನ್ನು ಅಪಾಯಕ್ಕೆ ದೂಡಿದ್ದರು. 2017ರಲ್ಲಿ ಭಾರತದಲ್ಲಿ ಈ ಗೇಮ್ ಅನ್ನು ನಿಷೇಧಿಸಲಾಗಿತ್ತು.

ಪರಿಣಾಮ ಏನು?
ಮೊಬೈಲ್‌ ಗೇಮ್‌ಗಳು ಮಕ್ಕಳ ಮನೋಲೋಕವನ್ನು ಇನ್ನಿಲ್ಲದಂತೆ ಆವರಿಸುತ್ತದೆ. ಮಕ್ಕಳಲ್ಲಿ ಈ ಗೀಳು ಹೆಚ್ಚಾದಂತೆ ಅವರಲ್ಲಿ ಒಂಟಿತನ, ಅಸಹಿಷ್ಣುತೆ, ನಿರಾಸಕ್ತಿ, ಹಟಮಾರಿತನ ಹೆಚ್ಚುತ್ತದೆ. ಆಟ, ಪಾಠಗಳಲ್ಲಿ ಆಸಕ್ತಿ ಕುಂದಿ ಊಟ, ನಿದ್ದೆ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಸದಾ ಮೊಬೈಲ್‌ ಬೇಕು ಎಂದು ಹಟ ಹಿಡಿಯುವ ಮಕ್ಕಳು ಅದು ಕೈಯಲ್ಲಿ ಇಲ್ಲದಿದ್ರೆ ಅಸಹಜವಾಗಿ ವರ್ತಿಸಲು ಆರಂಭಿಸುತ್ತಾರೆ. ಕೆಲವೊಮ್ಮೆ ಈ ಗೀಳು ಆತ್ಮಹತ್ಯೆಗೆ ಪ್ರಚೋದಿಸುತ್ತದೆ.

online game

ಮಕ್ಕಳ ರಕ್ಷಣೆ ಹೇಗೆ?
ಹದಿಹರೆಯದ ಮಕ್ಕಳ ಮೆದುಳು ಸಂಪೂರ್ಣ ಬೆಳವಣಿಗೆ ಹೊಂದಿರೋದಿಲ್ಲ. ಗೇಮ್ ಚಟಕ್ಕೆ ಬಿದ್ದಾಗ ಅದನ್ನೇ ರಿಯಲ್ ಲೈಫ್ ಎಂದುಕೊಳ್ಳುತ್ತಾರೆ. ವರ್ಚುವಲ್ ರೋಲ್ ಮಾಡೆಲ್ ಜೊತೆ ತಮ್ಮ ಲೈಫ್ ಹೋಲಿಕೆ ಮಾಡುತ್ತಾರೆ. ಮೊಬೈಲ್ ಕಸಿದುಕೊಂಡಾಗ, ಗೇಮ್ ಆಡೋದನ್ನು ತಡೆದಾಗ ಅವರಿಗೆ ಒಂಟಿತನ ಕಾಡುತ್ತದೆ. ಗುರುತು ಕಳೆದುಕೊಳ್ಳುವ ಭಯಕ್ಕೊಳಗಾಗುತ್ತಾರೆ.

ಮಕ್ಕಳು ಗೇಮಿಂಗ್ ಚಟಕ್ಕೆ ಬಲಿಯಾಗಿದ್ದಾರೆ ಎಂಬುದು ನಿಮ್ಮ ಅರಿವಿಗೆ ಬಂದ ತಕ್ಷಣ ಮೊಬೈಲ್ ಕಸಿದುಕೊಂಡು, ಹೊಡೆಯೋದು, ಬೈಯ್ಯೋದು ಮಾಡಬೇಡಿ. ನಿಧಾನವಾಗಿ ಮಕ್ಕಳ ದಿನಚರಿ ಬದಲಿಸಿ. ಅವರಿಗೆ ಬುದ್ಧಿವಾದ ಹೇಳಿ, ಮನಸ್ಥಿತಿ ಬದಲಿಸಿ. ಅವರ ಮನಸ್ಸು ಮೊಬೈಲ್ ಆಟದಿಂದ ಹೊರಾಂಗಣ ಆಟಕ್ಕೆ ಬರುವಂತೆ ಪ್ರಯತ್ನ ಮಾಡಿ. ಮಕ್ಕಳು ಅತಿಯಾಗಿ ವರ್ತಿಸುತ್ತಿದ್ದರೆ ತಜ್ಞರ ಸಲಹೆ ಪಡೆಯಿರಿ.

TAGGED:Blue Whale GameChildrensKorean CultureKorean Love GAMEonline gaming
Share This Article
Facebook Whatsapp Whatsapp Telegram

Cinema news

Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories
Bhushan Kumar Vivek Agnihotri 2
ಸೆಟ್ಟೇರುತ್ತಿದೆ ʻಆಪರೇಷನ್‌ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ
Bollywood Cinema Latest Main Post National
Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World
Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National

You Might Also Like

KSRTC Bus Transport bus catches fire in front of Lulu Mall Bengaluru
Bengaluru City

ಲುಲು ಮಾಲ್‌ ಮುಂದೆ ಹೊತ್ತಿ ಉರಿದ ಬೆಂಗಳೂರು-ಶಿವಮೊಗ್ಗ KSRTC ಬಸ್‌

Public TV
By Public TV
6 hours ago
Accident
Crime

ಬಸ್, ಪಿಕಪ್ ನಡುವೆ ಭೀಕರ ಅಪಘಾತ – 10 ಮಂದಿ ದುರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ

Public TV
By Public TV
6 hours ago
Donald Trump 2
Latest

ಪಾಕ್‌ ಧ್ವಜ ಇರುವ 10 ತೈಲ ಟ್ಯಾಂಕರ್‌ಗಳನ್ನು ಇರಾನ್‌ ನಮಗೆ ಗಿಫ್ಟ್‌ ನೀಡಿದೆ: ಟ್ರಂಪ್‌

Public TV
By Public TV
6 hours ago
Nelamangala Assistant Professor Propose to Student
Bengaluru City

ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ್ದ ಅಸಿಸ್ಟೆಂಟ್ ಪ್ರೊಫೆಸರ್ ಅರೆಸ್ಟ್

Public TV
By Public TV
7 hours ago
Mudigere Police Station
Chikkamagaluru

ಮೂಡಿಗೆರೆ ಲವ್ ಜಿಹಾದ್ ಆರೋಪ ಪ್ರಕರಣ – 1 ತಿಂಗಳು ಉಪವಾಸ, ಮನೆಯಲ್ಲೇ ನಮಾಜ್ ಮಾಡುತ್ತಿದ್ದ ಅಪ್ರಾಪ್ತೆ

Public TV
By Public TV
7 hours ago
Donald Trump 1 2
Latest

ಅಲಿ ಖಮೇನಿ ನಮ್ಮೊಂದಿಗೆ ಇಲ್ಲ, ಇರಾನ್‌ನಲ್ಲಿ ಈಗ ನಾಯಕರೇ ಇಲ್ಲ: ಟ್ರಂಪ್‌

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?