Advertisements

ನಿಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ 10 ಅಪ್ಲಿಕೇಶನ್‍ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ

ನೀವು ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದರೆ, ಕೆಲವು ಅಪ್ಲಿಕೇಶನ್‍ಗಳನ್ನು ಡೌನ್‍ಲೋಡ್ ಮಾಡುವ ಮೊದಲು ಬಹಳ ಜಾಗರೂಕರಾಗಿರುವುದು ಅಗತ್ಯ. ಕೆಲವು ಅಪ್ಲಿಕೇಶನ್‍ಗಳು ನಿಮ್ಮ ಫೋನ್‍ನ ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತವೆ ಎಂಬ ವಿಷಯ ತಿಳಿದುಬಂದಿದೆ. 3 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈ ಬ್ಯಾಂಕಿಂಗ್ ಟ್ರೋಜನ್ ಮಾಲ್‍ವೇರ್ ಅನ್ನು ಡೌನ್‍ಲೋಡ್ ಮಾಡಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

Advertisements

ಸಾಮಾನ್ಯವಾಗಿ ಡೌನ್‍ಲೋಡ್ ಮಾಡುವ ಅಪ್ಲಿಕೇಶನ್‍ಗಳು ನಾಲ್ಕು ಬಗೆಯ ಮಾಲ್‍ವೇರ್‌ಗಳಿಗೆ ಎಡೆಮಾಡಿಕೊಡುತ್ತದೆ. ಅದರಲ್ಲಿ ಒಂದು ಬ್ಯಾಂಕಿಂಗ್ ಸಂಬಂಧಿತ ವಿವರಗಳನ್ನು ಹ್ಯಾಕರ್‌  ಕಳುಹಿಸುವ ಮೂಲಕ ನಿಮ್ಮ ಹಣಕಾಸನ್ನು ಅಪಾಯಕ್ಕೆ ತಂದೊಡ್ಡುತ್ತವೆ.

Advertisements

ಕ್ಯೂಆರ್ ಕೋಡ್ ರೀಡರ್, ಡಾಕ್ಯುಮೆಂಟ್ ಸ್ಕ್ಯಾನರ್, ಫಿಟ್‍ನೆಸ್ ಮಾನಿಟರ್ ಹಾಗೂ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಪ್ಲಾಟ್‍ಫಾರ್ಮ್‍ಗಳಂತಹ ಜನಪ್ರಿಯ ಅಪ್ಲಿಕೇಶನ್‍ ಹೆಸರಿನಲ್ಲಿ ಮಾಲ್‌ವೇರ್‌ಗಳನ್ನು ಬಿಡುತ್ತಾರೆ. ಹೀಗಾಗಿ ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವಾಗ ಎಚ್ಚರದಲ್ಲಿರುವುದು ಒಳಿತು ಎಂದು  ಸಂಶೋಧಕರು ತಿಳಿಸಿದ್ದಾರೆ.

10 ಅಪ್ಲಿಕೇಶನ್‌ಗಳು ಯಾವುದು?
1. ಟು ಫ್ಯಾಕ್ಟರ್ ಅಥೆಂಟಿಕೇಟರ್
2. ಪ್ರೊಟೆಕ್ಷನ್ ಗಾರ್ಡ್
3. ಕ್ಯೂಆರ್ ಕ್ರಿಯೇಟರ್‍ಸ್ಕ್ಯಾನರ್
4. ಮಾಸ್ಟರ್ ಸ್ಕ್ಯಾನರ್ ಲೈವ್
5. ಕ್ಯೂಆರ್ ಸ್ಕ್ಯಾನರ್ 2021
6. ಪಿಡಿಎಫ್ ಡಾಕ್ಯುಮೆಂಟ್ ಸ್ಕ್ಯಾನರ್- ಸ್ಕ್ಯಾನ್ ಟು ಪಿಡಿಎಫ್
7. ಪಿಡಿಎಫ್ ಡಾಕ್ಯುಮೆಂಟ್ ಸ್ಕ್ಯಾನರ್
8. ಕ್ಯೂಆರ್ ಸ್ಕ್ಯಾನರ್
9. ಕ್ರಿಪ್ಟೋ ಟ್ರ್ಯಾಕರ್
10. ಜಿಮ್ ಆಂಡ್ ಫಿಟ್ನೆಸ್ ಟ್ರೇನರ್

ಹ್ಯಾಕರ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕದಿಯಲು ನಾಲ್ಕು ರೀತಿಯ ಮಾಲ್‍ವೇರ್‌ಗಳನ್ನು ಡೆವಲಪ್‌ ಮಾಡುತ್ತಾರೆ. ಈ ಆಪ್‍ಗಳು ಫೋನ್‍ಗಳಲ್ಲಿ ಇನ್‌ಸ್ಟಾಲ್‌ ಆಗುವವರೆಗೆ ಮಾಲ್‍ವೇರ್‌ಗಳು ನಿಷ್ಕ್ರಿಯವಾಗಿ ಇರುತ್ತದೆ. ಆಪ್ ಇನ್‌ಸ್ಟಾಲ್‌ ಆದ ಬಳಿಕ ಆವುಗಳು ಸಕ್ರಿಯವಾಗುತ್ತದೆ. ಇದನ್ನೂ ಓದಿ: ಏರ್‌ಟೆಲ್‌ ಪ್ರಿಪೇಯ್ಡ್‌ ಕರೆ, ಡೇಟಾ ಶುಲ್ಕ ಹೆಚ್ಚಳ – ಹೀಗಿದೆ ಪರಿಷ್ಕೃತ ದರ

Advertisements

ಅನ್ಸಾಟಾ ಎಂಬ ಮಾಲ್‍ವೇರ್ ಅತ್ಯಂತ ಸಾಮಾನ್ಯವಾಗಿದ್ದು, ಇದನ್ನು 2 ಲಕ್ಷ ಆಂಡ್ರಾಯ್ಡ್ ಬಳಕೆದಾರರು ಡೌನ್ಲೋಡ್ ಮಾಡಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದನ್ನು ಸುಧಾರಿತ ಬ್ಯಾಂಕಿಂಗ್ ಟ್ರೋಜನ್ ಎಂದು ಕರೆಯಲಾಗಿದೆ. ಏಲಿಯನ್, ಹೈಡ್ರಾ ಹಾಗೂ ಎರ್ಮಾಕ್ ಎಂಬ ಮೂರು ಮಾಲ್‍ವೇರ್‌ಗಳನ್ನು ಕಂಡು ಹಿಡಿಯುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಡಿ.1 ರಿಂದ ರಿಂದ ಜಿಯೋ ದುಬಾರಿ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋನೋ ಲೈಟ್, ಪೇಪಾಲ್‍ನಂತಹ ಜನಪ್ರಿಯ ಅಪ್ಲಿಕೇಶನ್‍ಗಳು ಸೇರಿದಂತೆ ಹಲವಾರು ಮಾಲ್‍ವೇರ್‍ಗಳಿಗೆ ತುತ್ತಾದ ಅಪ್ಲಿಕೇಶನ್‍ಗಳನ್ನು ಸಂಶೋಧಕರು ಪಟ್ಟಿ ಮಾಡಿದ್ದಾರೆ. ಗೂಗಲ್ ಈಗಾಗಲೇ ಮಾಲ್‍ವೇರ್‌ಗಳನ್ನು ಹೊಂದಿದ ಅಪ್ಲಿಕೇಶನ್‍ಗಳನ್ನು ತೆಗೆದುಹಾಕಿದೆ. ಇಂತಹ ಹಲವು ಅಪ್ಲಿಕೆಶನ್‍ಗಳನ್ನು ಗುರುತಿಸಿ ತೆಗೆದು ಹಾಕುವ ಕೆಲಸವನ್ನೂ ಮಾಡುತ್ತಿದೆ.

ಮಾಲ್‍ವೇರ್ ಎಂದರೇನು?
ಮಾಲ್‍ವೇರ್ ಎಂಬುದು ಮ್ಯಾಲಿಶಿಯಸ್ ಸಾಫ್ಟ್‌ವೇರ್‌ ಎಂಬುದರ ಸಂಕ್ಷಿಪ್ತ ರೂಪವಾಗಿದ್ದು, ಇದು ಫೋನ್ ಮಾಲೀಕನ ಒಪ್ಪಿಗೆ ಇಲ್ಲದೇ ಆತನ ಫೋನಿನ ಒಳಗೆ ಕದ್ದು ನುಸುಳುವಂತೆ ಅಥವಾ ಅದಕ್ಕೆ ಹಾನಿಯೆಸಗುವಂತೆ ವಿನ್ಯಾಸಗೊಳಿಸಲಾಗಿರುವ ಒಂದು ತಂತ್ರಾಂಶ.

Advertisements
Exit mobile version