ಲಕ್ನೋ: ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ತರಗತಿಯಿಂದ ಹೊರಹಾಕಿದ್ದಕ್ಕೆ ಪ್ರಿನ್ಸಿಪಾಲ್ ಮೇಲೆ ಶೂಟ್ ಮಾಡಿ ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಯ ವರ್ತನೆಯನ್ನು ತಾಳಲಾರದೇ ಪ್ರಿನ್ಸಿಪಾಲ್ ಆತನನ್ನು ಶಾಲೆಯಿಂದ ಹೊರಹಾಕಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿ ಪ್ರಿನ್ಸಿಪಾಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲು ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಬುಧವಾರ ಬೆಳಗ್ಗೆ ಘಟನೆ ನಡೆದಿದ್ದು, ಆರೋಪಿ 17 ವರ್ಷದ ಬಾಲಕನಾಗಿದ್ದು, 15 ದಿನಗಳ ಹಿಂದೆ ಈ ಖಾಸಗಿ ಶಾಲೆಗೆ ಸೇರಿಕೊಂಡಿದ್ದ.
Advertisement
ಈ ಘಟನೆಯನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು, ಆ ಬಾಲಕ ಬುಧವಾರ ಬೆಳಿಗ್ಗೆ ತನ್ನ ತಾಯಿಯೊಂದಿಗೆ ಶಾಲೆಗೆ ಬಂದು ಮರಳಿ ಶಾಲೆಗೆ ಬರಲು ಪ್ರಿನ್ಸಿಪಾಲರ ಬಳಿ ಮನವಿ ಮಾಡಿಕೊಂಡಿದ್ದಾನೆ. ಆದರೆ ಅವರು ಒಪ್ಪದಿದ್ದಾಗ ಮನೆಗೆ ತೆರಳುತ್ತಾನೆ. ಬಳಿಕ ಮಧ್ಯಾಹ್ನ 12ಕ್ಕೆ ಮರಳಿ ಪಿಸ್ತೂಲ್ ನೊಂದಿಗೆ ಶಾಲೆಗೆ ಬಂದು ಶೂಟ್ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
Advertisement
ಪ್ರಾಂಶುಪಾಲರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಯ ಮೇಲೆ ಐಪಿಸಿ ಸೆಕ್ಷನ್ 307 (ಕೊಲೆ) ಅಡಿ ಪ್ರಕರಣ ದಾಖಲಾಗಿದೆ.
Advertisement
Principal shot at by a student who was rusticated from the school in Bijnor's Seohara. Victim admitted to hospital, the student is on the run.Police begin investigation. pic.twitter.com/vUb6jGe18n
— ANI UP/Uttarakhand (@ANINewsUP) August 30, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv