ಅಘಾದವಾದ ಪ್ರತಿಭೆಯಿದ್ದರೂ, ಎಷ್ಟೇ ಹಾರ್ಡ್ ವರ್ಕ್ ಮಾಡಿದ್ರೂ ಕೂಡ ಅದೃಷ್ಟ ಅನ್ನೋ ಮೂರಕ್ಷರ ಕೈ ಹಿಡಿಯೋವರೆಗೂ ಕಾಯ್ಲೆಬೇಕು. ಅದ್ರಂತೆ ಕಾಯ್ತಾ, ಕೊನೆಗೂ ಬೆಳ್ಳಿತೆರೆ ಮೇಲೆ ಮಿನುಗೋಕೆ ರೆಡಿಯಾಗಿರುವ ಅಮೃತವರ್ಷಿಣಿ ಖ್ಯಾತಿಯ ರಜಿನಿ (Rajini) , ಅಂಬುಜ (Ambuja) ಅದೃಷ್ಟ ಹೊತ್ತು ತರುವ ನಿರೀಕ್ಷೆಯ ಬಗ್ಗೆ, ಸರ್ಜರಿಗೆ ಸೆಡ್ಡು ಹೊಡೆದು ಬಣ್ಣ ಹಚ್ಚಿದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
Advertisement
ಅಂಬುಜ ಹಿರಿತೆರೆ ನಟಿಯಾಗಿ ನನ್ನ ಡೆಬ್ಯೂ ಚಿತ್ರ. ಲಂಬಾಣಿ ಹೆಣ್ಣುಮಗಳ ಪಾತ್ರ. ಚೊಚ್ಚಲ ಸಿನಿಮಾದಲ್ಲೇ ಫರ್ಪಾಮೆನ್ಸ್ ಗೆ ಸ್ಕೋಪ್ ಇರುವಂತಹ ರೋಲ್ ಸಿಗ್ತು. ಸಿಕ್ಕಾಪಟ್ಟೆ ಚಾಲೆಂಜಿಂಗ್ ಆಗಿತ್ತು. ಟಿಪಿಕಲ್ ಲಂಬಾಣಿ ಹೆಣ್ಣುಮಗಳಂತೆ ಕಾಣಬೇಕು ಅಂತ ನಿರ್ದೇಶಕರು ಗದಗದ ಕಳಸಾಪುರದ ತಾಂಡಾದಲ್ಲೇ ಲಂಬಾಣಿ ಕಾಸ್ಟ್ಯೂಮ್ ತಯ್ಯಾರು ಮಾಡಿಸಿಕೊಟ್ಟಿದ್ದರು. ಸುಮಾರು 20 ರಿಂದ 25 ಕೆಜಿ ತೂಕದ ಆ ಕಾಸ್ಟ್ಯೂಮ್ ತೊಟ್ಟು ಪರ್ಫಾಮ್ ಮಾಡಿದ್ದೇನೆ. ಐದಾರು ದಿನ ಸಾಂಗ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದೇನೆ. ಇಡೀ ರಾತ್ರಿ ಅಷ್ಟು ಭಾರವಾದ ಉಡುಗೆ ತೊಟ್ಟು ನಟಿಸಿದ್ದು ಕಷ್ಟ ಆದ್ರೂ ಮನಸ್ಸಿಗೆ ಖುಷಿಕೊಟ್ಟಿದೆ. ಹೀಗೆ ಅಂಬುಜ ಸಿನಿಮಾ, ತನ್ನ ಪಾತ್ರದ ಬಗ್ಗೆ ವಿವರಿಸುತ್ತಾ ಹೋದ ನಟಿ ರಜಿನಿ, ಅಪಘಾತ, ಆಪರೇಷನ್ ಕಥೆ ಬಿಚ್ಚಿಟ್ಟು ಅಚ್ಚರಿ ಪಡುವಂತೆ ಮಾಡಿದರು.
Advertisement
Advertisement
ಅಂಬುಜಾ ಸಿನಿಮಾ ಮಾಡೋದಕ್ಕೂ ಮುನ್ನ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದೆ. ಆಗ ಸಂಭವಿಸಿದಂತಹ ಅಪಘಾತದಿಂದ ಎರಡು ಕಾಲುಗಳಿಗೆ ಬಲವಾದ ಹೊಡೆತ ಬಿದ್ದಿತ್ತು. ಕೊನೆಗೆ ಸರ್ಜರಿ ಮಾಡಿಸಿಕೊಂಡು ಮೂರು ತಿಂಗಳ ಕಾಲ ಬೆಡ್ ರೆಸ್ಟ್ ನಲ್ಲಿದ್ದೆ. ಆಗ ವೈದ್ಯರು ಯಾವುದೇ ಕಾರಣಕ್ಕೂ ಇನ್ಮೇಲೆ ರಿಸ್ಕಿ ಡ್ಯಾನ್ಸ್ ಮೂಮೆಂಟ್ಸ್ ಮಾಡಬೇಡಿ ಅಂತ ಸಲಹೆ ನೀಡಿದ್ರಂತೆ. ಆದರೆ, ಅಂಬುಜಾ ಸಿನಿಮಾದಲ್ಲಿ ಡ್ಯಾನ್ಸ್ ನಂಬರ್ ಸಾಂಗ್ ಇದ್ದಿದ್ದರಿಂದ ಮೂಮೆಂಟ್ಸ್ ಮಾಡ್ಲೆಬೇಕಾಗಿ ಬಂತು. ಆಗ ಅರಸಿಕೊಂಡು ಬಂದ ಅವಕಾಶವನ್ನ ಎಡಗೈನಲ್ಲಿ ಸರಿಸಲು ಒಲ್ಲೇ ಎನ್ನದ ರಜಿನಿ, ಆತ್ಮವಿಶ್ವಾಸವ ತುಂಬಿಕೊಂಡು ಡ್ಯಾನ್ಸ್ ಫ್ಲೋರ್ ಗೆ ಧುಮ್ಕಿದ್ದರು. ಫಿಲ್ಮ್ಟೀಮ್ ಮಾತ್ರವಲ್ಲ ವೈದ್ಯ ಲೋಕವೇ ಅಚ್ಚರಿ ಪಡುವಂತೆ ಡ್ಯಾನ್ಸ್ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳ್ಳಿ ತೆರೆಮೇಲೆ ರಜಿನಿ ಡ್ಯಾನ್ಸ್ ಧಮಾಕವನ್ನ ಕಣ್ತುಂಬಿಕೊಳ್ಳಬಹುದು.
Advertisement
ರಜಿನಿಯವರ ಅಭಿನಯ ಎಂತಹದ್ದು ಅನ್ನೋದು ಕಿರುತೆರೆ ಪ್ರೇಕ್ಷಕರಿಗೆ ಗೊತ್ತಿದೆ. ಮೂಲತಃ ತುಮಕೂರಿನವರಾದ ರಜಿನಿ, ಅಮೃತವರ್ಷಿಣಿ ಸೀರಿಯಲ್ ಮೂಲಕ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಕೊಟ್ಟು ಕರುನಾಡಲ್ಲಿ ಮೆರವಣಿಗೆ ಹೊರಟರು. ಆದರೆ, ಕಳೆದ 12 ವರ್ಷದ ಸಿನಿಜರ್ನಿಯಲ್ಲಿ ರಜಿನಿಗೆ ಬೆಳ್ಳಿಭೂಮಿ ಮೇಲೆ ದಿಬ್ಬಣ ಹೊರಡುವ ಚಾನ್ಸ್ ಸಿಕ್ಕಿತ್ತಾದ್ರೂ ಕಾಲ ಕೂಡಿಬಂದಿರಲಿಲ್ಲ. ಫೈನಲೀ, ಅಂಬುಜ ಸಿನಿಮಾದಿಂದ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ನನ್ನ ಪಾತ್ರವನ್ನ ಪ್ರೇಕ್ಷಕರು ಮೆಚ್ಚಿಕೊಳ್ತಾರೆ, ಈ ಸಿನಿಮಾದಿಂದ ನನ್ನ ಕರಿಯರ್ ಬದಲಾಗುತ್ತೆ. ಒಳ್ಳೊಳ್ಳೆ ಪಾತ್ರಗಳು ತನ್ನನ್ನು ಅರಸಿಕೊಂಡು ಬರುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಅವರ ಆಸೆಯಂತೆ ಅಂಬುಜ ಪಾತ್ರ ಅವರ ವೃತ್ತಿಬದುಕಿಗೆ ತಿರುವು ನೀಡಲಿ.
ಅಂದ್ಹಾಗೇ, ಅಂಬುಜ ಒಂದು ಮಹಿಳಾ ಪ್ರಧಾನ ಸಿನಿಮಾ. ಕೆಲವು ದಿನಗಳ ನಂತರ ಹೆಸರಲ್ಲಿ ಕನ್ನಡದಲ್ಲೊಂದು ಸಿನಿಮಾ ಮಾಡಿ ಭರವಸೆ ಮೂಡಿಸಿದ್ದ ನಿರ್ದೇಶಕ ಶ್ರೀನಿ ಹನುಮಂತ ರಾಜು (Srini Hanuntharaju) ಈಗ ಅಂಬುಜ ಮೂಲಕ ಮತ್ತೆ ಬಂದಿದ್ದಾರೆ. ಮರ್ಡರ್ ಮಿಸ್ಟ್ರಿ, ಹಾರರ್, ಥ್ರಿಲ್ಲರ್ ಎಲಿಮೆಂಟ್ಸ್ ಗಳನ್ನೆಲ್ಲಾ ಸೇರಿಸಿ ಪಕ್ಕಾ ಕಮರ್ಷಿಯಲ್ ಸಿನಿಮಾ ಸಿದ್ದಪಡಿಸಿದ್ದಾರೆ. ಹಿಂದೆಂದೂ ಕಂಡು ಕೇಳರಿಯದ ಬೆಚ್ಚಿಬೀಳಿಸುವ ವಿಚಿತ್ರ ಕಥಾಹಂದರ ಎಣೆದಿರುವ ಕಾಶಿನಾಥ್ ಡಿ ಮಡಿವಾಳರ್ ಅವರು ನಿರ್ಮಾಣದ ಜವಬ್ದಾರಿ ಹೊತ್ತಿದ್ದಾರೆ. ಇವರಿಗೆ ಲೋಕೇಶ್ ಭೈರವ, ಶಿವಪ್ರಕಾಶ್. ಎನ್ ಕೈ ಜೋಡಿಸಿದ್ದಾರೆ. ನಟಿ ಶುಭಪುಂಜಾ, ದೀಪಕ್ ಸುಬ್ರಹ್ಮಣ್ಯ, ಪದ್ಮಜ ರಾವ್, ಗೋವಿಂದೇಗೌಡ, ಬೇಬಿ ಆಕಾಂಕ್ಷ, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವು ಕಲಾವಿದರು ಪಾತ್ರವರ್ಗದಲ್ಲಿದ್ದಾರೆ. ಈಗಾಗಲೇ ಟೀಸರ್, ಸಾಂಗ್ಸ್ ಮೂಲಕ ಸೌಂಡ್ ಮಾಡಿರುವ ಅಂಬುಜ ಚಿತ್ರ ಜುಲೈ 21ರಂದು ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ.
Web Stories