ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ರೈತರ ನೆರವಿಗೆ ಧಾವಿಸಿದ್ದಾರೆ. ಆದ್ರೆ, ಸಾಲಮನ್ನಾ ಮಾಡೋ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಏನ್ ಮಾಡುತ್ತಾರೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಬೆಳಗ್ಗೆ 11.30ಕ್ಕೆ ದೋಸ್ತಿ ಸರ್ಕಾರದ ಮೊದಲ ಬಜೆಟ್ ಮಂಡಿಸಲಿದ್ದಾರೆ. ಈಗಾಗಲೇ ಬೆಲೆ ಸಾಲ ಮನ್ನಾ ಮಾಡೋದಾಗಿ ಸರ್ಕಾರ ಹೇಳಿದ್ದರೂ, ಸಂಪೂರ್ಣ ಮನ್ನಾವೋ? ಅಥವಾ ಅರ್ಧ ಮನ್ನಾ ಮಾಡುತ್ತಾರೋ ಎನ್ನುವ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ರೈತರಿಗೆ ಮೋದಿಯಿಂದ ಬಂಪರ್ ಗಿಫ್ಟ್: ಯಾವ ಬೆಳೆಗೆ ಎಷ್ಟು ಕನಿಷ್ಠ ಬೆಂಬಲ ಬೆಲೆ? ಇಲ್ಲಿದೆ ಪೂರ್ಣ ಮಾಹಿತಿ
Advertisement
ಸಾಲಮನ್ನಾ ಸಾಧ್ಯಾಸಾಧ್ಯತೆಗಳು:
ಸಹಕಾರಿ, ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿನ ರೈತರ `ಬೆಳೆಸಾಲ’ ಮಾತ್ರ ಮನ್ನಾ ಮಾಡುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರ ಅನುಸರಿಸಿದ್ದ ಕ್ರಮದಂತೆ ಹಂತ-ಹಂತವಾಗಿ ಮನ್ನಾ ಮಾಡುವ ಸಾಧ್ಯತೆಯಿದೆ.
Advertisement
ಸಾಲ ಮನ್ನಾಕ್ಕೆ ಭೂ ಹಿಡುವಳಿ ಮಿತಿ ಇಲ್ಲದೇ ಇದ್ದರೂ ಸಣ್ಣ ಮತ್ತು ಮಧ್ಯಮ ರೈತರ ಸಾಲವನ್ನಷ್ಟೇ ಮನ್ನಾ ಮಾಡುವುದರ ಜೊತೆಗೆ ಇಂತಿಷ್ಟು ಲಕ್ಷದವರೆಗಷ್ಟೇ ಎಂದು ಮಿತಿ ವಿಧಿಸುವ ಸಾಧ್ಯತೆಯಿದೆ.
Advertisement
ಸರ್ಕಾರಿ ನೌಕರರ ಬೆಳೆ ಸಾಲ, ಆದಾಯ ತೆರಿಗೆ ಪಾವತಿಸುವ ರೈತರ ಸಾಲ, ಬೇರೆ ಉದ್ದೇಶಗಳಿಗೆ ಬೆಳೆಸಾಲ ಬಳಸಿಕೊಂಡಿದರೆ ಅವರ ಸಾಲ ಮನ್ನಾ ಆಗುವುದು ಸಂದೇಹವಿದೆ. ಲಾಭದಾಯಕ ಹುದ್ದೆ, ಜನಪ್ರತಿನಿಧಿಗಳ ಬೆಳೆ ಸಾಲ ಕೂಡ ಮನ್ನಾ ಮಾಡದೇ ಇರುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
Advertisement
ಬಜೆಟ್‍ನಲ್ಲಿ ಏನೇನು ಘೋಷಿಸಬಹುದು..?
ನೋಂದಣಿ, ಮುದ್ರಾಂಕ ಮೇಲಿನ ಶುಲ್ಕ ಹೆಚ್ಚಳ, ಅಬಕಾರಿ ಮೇಲಿನ ಮಾರಾಟ ತೆರಿಗೆ ಏರಿಕೆ ಸಾಧ್ಯತೆ, ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಳವಾಗುವ ಸಾಧ್ಯತೆಯಿದೆ.
ಮಂಡ್ಯ ಅಥವಾ ಉತ್ತರಕನ್ನಡದಲ್ಲಿ ಇಸ್ರೇಲ್ ಮಾದರಿ ಕೃಷಿ, ಸಿದ್ದರಾಮಯ್ಯ ಸರ್ಕಾರದ ಯೋಜನೆಗಳ ಮುಂದುವರಿದರೂ ಅನ್ನಭಾಗ್ಯ ಹೊರತು ಇತರ ಯೋಜನೆಗಳ ಅನುದಾನ ಕಡಿತಗೊಳ್ಳಬಹುದು.
ಮಠಮಾನ್ಯಗಳಿಗೆ ಅನುದಾನ ಘೋಷಣೆ ಸಾಧ್ಯತೆ ಕ್ಷೀಣವಾಗಿದ್ದು, ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನ ಸಾಧ್ಯತೆಯಿದೆ. ಹಿರಿಯರ ಮಾಶಾಸನ 500 ರಿಂದ 1000ಕ್ಕೆ ಹೆಚ್ಚಳ, ಸಿದ್ದು ಸರ್ಕಾರದ `ಆರೋಗ್ಯ ಕರ್ನಾಟಕ’ ಯೋಜನೆ ಮುಂದುವರಿಕೆ ಸಾಧ್ಯತೆಯಿದೆ.
ಗರ್ಭಿಣಿ, ಬಾಣಂತಿಯರಿಗೆ 6 ಸಾವಿರ ರೂ. ನಂತೆ 6 ತಿಂಗಳು ಮಾಶಾಸನ, ಮಹಿಳಾ ಪೊಲೀಸರಿಗೆ ವಿಶೇಷ ಅನುದಾನ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆಯಾಗಬಹುದು.
ಕೃಷಿ ಹೊಂಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ, ಜಲಾಶಯ ಹೂಳೆತ್ತುವಿಕೆಗೆ ವಿದೇಶ ತಂತ್ರಜ್ಞಾನ ಬಳಕೆ, ರಾಮನಗರದಲ್ಲಿ ಫಿಲಂ ಸಿಟಿ ನಿರ್ಮಾಣ ಘೋಷಣೆ, ಬಿಡದಿ ಬಳಿ ಟೌನ್‍ಶಿಪ್ ನಿರ್ಮಾಣ ಘೋಷಣೆ ಸಾಧ್ಯತೆಯಿದೆ.