ನವದೆಹಲಿ: ಹರಿಯಾಣದಲ್ಲಿ (Haryana Assembly Elections) ಬಿಜೆಪಿಗೆ ಹ್ಯಾಟ್ರಿಕ್ ಜಯದ ಕನಸು ಭಗ್ನಗೊಂಡಿದೆ. ರಾಜ್ಯದ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಮ್ಯಾಟ್ರಿಜ್ ಸಮೀಕ್ಷೆ ಏನು ಹೇಳುತ್ತೆ?
ಕಾಂಗ್ರೆಸ್ 55-62, ಬಿಜೆಪಿ 18-24, ಐಎನ್ಎಲ್ಡಿ 3-6, ಜೆಜೆಪಿ 03, ಇತರರು 2-5
Advertisement
Advertisement
ಎಬಿಪಿ
ಕಾಂಗ್ರೆಸ್ – 57, ಬಿಜೆಪಿ – 27, ಇತರೆ – 06
Advertisement
ದೈನಿಕ್ ಭಾಸ್ಕರ್
ಕಾಂಗ್ರೆಸ್ 44-54, ಬಿಜೆಪಿ 19-29, ಐಎನ್ಎಲ್ಡಿ 1-5, ಜೆಜೆಪಿ- 1, ಇತರರು 4-10
Advertisement
2019 ರ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದ 90 ಸ್ಥಾನಗಳಲ್ಲಿ ಬಿಜೆಪಿ 40, ಕಾಂಗ್ರೆಸ್ 31 ಮತ್ತು ಜನನಾಯಕ ಜನತಾ ಪಕ್ಷ (ಜೆಜೆಪಿ) 10 ಸ್ಥಾನಗಳನ್ನು ಗೆದ್ದಿದ್ದವು. ಜೆಜೆಪಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿತ್ತು. ದುಶ್ಯಂತ್ ಚೌಟಾಲಾ ಉಪಮುಖ್ಯಮಂತ್ರಿಯಾದರು. ಮಾರ್ಚ್‌ನಲ್ಲಿ ಬಿಜೆಪಿ ಮನೋಹರ್ ಲಾಲ್ ಖಟ್ಟರ್ ಬದಲಿಗೆ ನಯಾಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ ನಂತರ ಮೈತ್ರಿ ಕೊನೆಗೊಂಡಿತ್ತು.