ಬೆಂಗಳೂರು: ಲೋಕಸಭಾ ಚುನಾವಣೆ ಎಲ್ಲ ಹಂತದ ಮತದಾನ ಅಂತ್ಯಗೊಂಡಿದ್ದು ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿವೆ. ಎಲ್ಲ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಸುಮಾರು 21 ರಿಂದ 22 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿವೆ.
Advertisement
ಕಾಂಗ್ರೆಸ್-ಜೆಡಿಎಸ್ ನಾಯಕರ ಕಿತ್ತಾಟ ನೇರವಾಗಿ ಬಿಜೆಪಿ ಲಾಭ ಪಡೆದುಕೊಂಡಿದೆ. 2014ರ ಚುನಾವಣೆಯಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿಕೊಂಡಿತ್ತು. ಇದೀಗ 2019ರ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ಏರಿಸಿಕೊಂಡಂತೆ ಕಾಣುತ್ತಿದೆ. ಹಾಗಾದ್ರೆ ಸಮೀಕ್ಷೆಗಳ ಅಂಕಿ-ಅಂಶಗಳು ಹೀಗಿವೆ.
Advertisement
1. ಟೈಮ್ಸ್ ನೌ: ಬಿಜೆಪಿ-21, ಕಾಂಗ್ರೆಸ್+ಜೆಡಿಎಸ್-9, ಇತರೆ-0
2. ಸಿ ವೋಟರ್: ಬಿಜೆಪಿ-18, ಕಾಂಗ್ರೆಸ್+ಜೆಡಿಎಸ್-09 ಇತರೆ-01
3. ಇಂಡಿಯಾ ಟುಡೇ: ಬಿಜೆಪಿ-21ರಿಂದ25, ಕಾಂಗ್ರೆಸ್+ಜೆಡಿಎಸ್-05 ಇತರೆ-1
4. ಚಾಣಕ್ಯ: ಬಿಜೆಪಿ-23, ಕಾಂಗ್ರೆಸ್-05, ಇತರೆ-00
5. ನ್ಯೂಸ್ 18: ಬಿಜೆಪಿ-22, ಕಾಂಗ್ರೆಸ್+ಜೆಡಿಎಸ್-6, ಇತರೆ-0
6. ಎನ್‍ಡಿಟಿವಿ: ಬಿಜೆಪಿ-18ರಿಂದ20, ಕಾಂಗ್ರೆಸ್+ಜೆಡಿಎಸ್-08, ಇತರೆ-00
7. ಸಿಎನ್‍ಎನ್: ಬಿಜೆಪಿ-22, ಕಾಂಗ್ರೆಸ್-06, ಇತೆರೆ-00
8. ಎಬಿಪಿ: ಬಿಜೆಪಿ-15, ಕಾಂಗ್ರೆಸ್-13, ಇತರೆ-00
Advertisement
Advertisement
2014ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.