– ಉಪಕದನದಲ್ಲಿ ಬಿಜೆಪಿಗೆ 8-10 ಕ್ಷೇತ್ರಗಳಲ್ಲಿ ಮುನ್ನಡೆ
– ಪಬ್ಲಿಕ್ ಟಿವಿ ಎಕ್ಸಿಟ್‍ಪೋಲ್ ಸರ್ವೆಯಲ್ಲಿ ಅನಾವರಣ
ಬೆಂಗಳೂರು: ಉಪಕದನ ಅಂತ್ಯವಾಗಿದ್ದು, ಮತದಾರನ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಈ ನಡುವೆ ಎಕ್ಸಿಟ್‍ಪೋಲ್ ಪ್ರಕಾರ ಯಡಿಯೂರಪ್ಪ ಸರ್ಕಾರ ಸೇಫ್ ಆಗುವಷ್ಟು ನಂಬರ್ ಸಿಗುವ ಸಾಧ್ಯತೆಯಿದೆ.
ಪಬ್ಲಿಕ್ ಎಕ್ಸಿಟ್ ಪೋಲ್ ಕೂಡ ನಡೆದಿದೆ. ಪಬ್ಲಿಕ್ ಲೆಕ್ಕ ತುಂಬಾ ವೈಜ್ಞಾನಿಕವಲ್ಲ. ಆದರೆ ಯಾವುದೇ ಪಕ್ಷಪಾತವಿಲ್ಲದೆ ಸಂಜೆ 5 ಗಂಟೆ ತನಕ ನಮ್ಮ ವರದಿಗಾರರು ಸಂಗ್ರಹಿಸಿರುವ ಅಭಿಪ್ರಾಯ ಮಾತ್ರ. ಬೂತ್ ಸಮೀಪ ನಮ್ಮ ಅಭಿಪ್ರಾಯ ಸಂಗ್ರಹವೇ ಪಬ್ಲಿಕ್ ಎಕ್ಸಿಟ್ ಪೋಲ್. ಹೀಗಿದ್ದರೂ ಕಡೆಯ 1 ಗಂಟೆಯಲ್ಲಿ ಆಗಿರುವ ಮತದಾನವೂ ಎಕ್ಸಿಟ್ ಲೆಕ್ಕಚಾರವನ್ನೂ ಉಲ್ಟಾ ಮಾಡುವ ಶಕ್ತಿ ಇರುತ್ತದೆ. ಆದರೆ ದೊಡ್ಡ ಮಟ್ಟದಲ್ಲಿ ಉಲ್ಟಾ ಆಗದಿರುವ ಸಾಧ್ಯತೆಯೂ ಇದೆ.
Advertisement
Advertisement
ಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ, ಬಿಜೆಪಿ 8ರಿಂದ 10 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 3ರಿಂದ 5 ಕ್ಷೇತ್ರಗಳಲ್ಲಿ, ಜೆಡಿಎಸ್ 1ರಿಂದ 2 ಕ್ಷೇತ್ರಗಳಲ್ಲಿ ಹಾಗೂ ಇತರೆ 1 ಕ್ಷೇತ್ರದಲ್ಲಿ ಗೆಲ್ಲಬಹುದು. ಚಿಕ್ಕಬಳ್ಳಾಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರಂ, ಅಥಣಿ, ಹಿರೇಕೆರೂರು, ವಿಜಯನಗರ ಹಾಗೂ ಯಲ್ಲಾಪುರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಬಹುದು.
Advertisement
50:50 ಫೈಟ್ ಎಲ್ಲಿ?
ಗೋಕಾಕ್, ಹೊಸಕೋಟೆ, ಶಿವಾಜಿನಗರ, ಕೆಆರ್ ಪೇಟೆ, ಹುಣಸೂರು, ರಾಣೆಬೆನ್ನೂರು, ಕಾಗವಾಡ ಕ್ಷೇತ್ರಗಳಲ್ಲಿ ಭರ್ಜರಿ ಪೈಪೋಟಿ ನಡೆಸಿದೆ. ಹೀಗಾಗಿ ಇಲ್ಲಿ ಮತದಾರರು ಯಾರ ಕೈಹಿಡಿಯುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
Advertisement
ಸಿ-ವೋಟರ್ ಕೂಡ ಎಕ್ಸಿಟ್ ಪೋಲ್ ಸರ್ವೆ ಮಾಡಿದ್ದು, ಅದರ ಪ್ರಕಾರ ಬಿಜೆಪಿ 9ರಿಂದ 12, ಕಾಂಗ್ರೆಸ್ 3ರಿಂದ 6 ಕ್ಷೇತ್ರ, ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.
ಬಿಜೆಪಿ ಲೆಕ್ಕಾಚಾರ: ಒಟ್ಟು 15 ಕ್ಷೇತ್ರಗಳ ಪೈಕಿ ಬಿಜೆಪಿಯು 10ರಿಂದ 12 ಕ್ಷೇತ್ರ, ಕಾಂಗ್ರೆಸ್ 1ರಿಂದ 2 ಕ್ಷೇತ್ರ, ಜೆಡಿಎಸ್ 1ರಿಂದ 2 ಕ್ಷೇತ್ರ ಗೆಲ್ಲಬಹುದು. ಈ ಪೈಕಿ 4 ಕ್ಷೇತ್ರಗಳಲ್ಲಿ ಫಿಫ್ಟಿ ಫಿಫ್ಟಿ ಪೈಟ್ ಇದೆ ಎನ್ನುವುದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಎಲೆಲ್ಲೆ ಕಮಲ ಅರಳುತ್ತೆ?:
ಬಿಜೆಪಿ ಲೆಕ್ಕಾಚಾರದ ಪ್ರಕಾರ ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್, ವಿಜಯನಗರದಲ್ಲಿ ಆನಂದ್ ಸಿಂಗ್, ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ ಪಾಟೀಲ್, ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್, ಕಾಗವಾಡದಲ್ಲಿ ಶ್ರೀಮಂತ್ ಪಾಟೀಲ್, ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ, ಕೆ.ಆರ್.ಪುರಂ ಕ್ಷೇತ್ರದಲ್ಲಿ ಬೈರತಿ ಬಸವರಾಜ್, ಯಶವಂತಪುರದಲ್ಲಿ ಎಸ್.ಟಿ.ಸೋಮಶೇಖರ್, ಮಹಾಲಕ್ಷ್ಮಿಲೇಔಟ್ ಕ್ಷೇತ್ರದಲ್ಲಿ ಗೋಪಾಲಯ್ಯ ಹಾಗೂ ಶಿವಾಜಿನಗರದಿಂದ ಶರವಣ ಭರ್ಜರಿ ಗೆಲವು ಸಾಧಿಸುತ್ತಾರೆ. ಹುಣಸೂರು ಕ್ಷೇತ್ರದಲ್ಲಿ ಹೆಚ್.ವಿಶ್ವನಾಥ್ ಅವರಿಗೆ ಹಿನ್ನಡೆ ಆಗಲಿದ್ದು, ಕಾಂಗ್ರೆಸ್‍ನ ಹೆಚ್.ಪಿ ಮಂಜುನಾಥ್ ಗೆಲ್ಲಬಹುದು.
ಉಳಿದಂತೆ ಗೋಕಾಕ್‍ನಲ್ಲಿ ಬಿಜೆಪಿಯ ರಮೇಶ್ ಜಾರಕಿಹೊಳಿ, ಕಾಂಗ್ರೆಸ್‍ನ ಲಖನ್ ಜಾರಕಿಹೊಳಿ, ಜೆಸಿಎಸ್‍ನ ಅಶೋಕ್ ಪೂಜಾರಿ ಮಧ್ಯೆ ಭರ್ಜರಿ ಪೈಪೋಟಿ ನಡೆದಿದೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ನಾರಾಯಣಗೌಡ ಹಾಗೂ ಜೆಡಿಎಸ್‍ನ ಎಲ್.ದೇವರಾಜ್ ಮಧ್ಯೆ ಭಾರೀ ಫೈಟ್ ನಡೆದಿದೆ. ಇದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರಿಗೆ ಹಿನ್ನಡೆ ಆಗಬಹುದು. ರಾಣೇಬೆನ್ನೂರಿನಲ್ಲಿ ಬಿಜೆಪಿಯ ಅರುಣ್ ಕುಮಾರ್ ಹಾಗೂ ಕಾಂಗ್ರೆಸ್‍ನ ಕೆ.ಬಿ.ಕೋಳಿವಾಡ ಮಧ್ಯೆ 50:50 ಫೈಟ್ ನಡೆದಿದೆ. ಆದರೆ ಜೆಡಿಎಸ್‍ನ ಮಲ್ಲಿಕಾರ್ಜುನ್ ಹಲಗೇರಿ ಅವರು ಹಿನ್ನಡೆ ಅನುಭವಿಸಬಹುದು. ಹೊಸಕೋಟೆಯಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ಹಾಗೂ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ನqಡುವೆ ಬಿಗ್ ಫೈಟ್ ಇದೆ. ಕಾಂಗ್ರೆಸ್‍ನ ಪದ್ಮಾವತಿ ಸುರೇಶ್ ಅವರಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಲೆಕ್ಕ:
ಕಾಂಗ್ರೆಸ್ 6-7
ಬಿಜೆಪಿ 6-7
ಜೆಡಿಎಸ್ 1-2
50:50 2
ಯಾವ ಕ್ಷೇತ್ರದಲ್ಲಿ ಮುನ್ನಡೆ?
* ಹುಣಸೂರು – ಹೆಚ್.ಪಿ ಮಂಜುನಾಥ್
* ಕೆ.ಆರ್.ಪೇಟೆ – ಕೆ.ಬಿ.ಚಂದ್ರಶೇಖರ್
* ಚಿಕ್ಕಬಳ್ಳಾಪುರ – ಆಂಜಿನಪ್ಪ
* ರಾಣೇಬೆನ್ನೂರು – ಕೆ.ಬಿ.ಕೋಳಿವಾಡ
* ಕಾಗವಾಡ – ರಾಜು ಕಾಗೆ
* ಶಿವಾಜಿನಗರ- ರಿಜ್ವಾನ್ ಅರ್ಷದ್
ಯಾವ ಕ್ಷೇತ್ರದಲ್ಲಿ ಹಿನ್ನಡೆ:
* ವಿಜಯನಗರ – ಘೋರ್ಪಡೆ (ಆನಂದ್ ಸಿಂಗ್ ಮುನ್ನಡೆ)
* ಹಿರೇಕೆರೂರು – ಬನ್ನಿಕೋಡ್(ಬಿ.ಸಿ ಪಾಟೀಲ್ ಮುನ್ನಡೆ)
* ಯಲ್ಲಾಪುರ – ಭೀಮಣ್ಣ ನಾಯ್ಕ್ (ಶಿವರಾಮ್ ಹೆಬ್ಬಾರ್ ಮುನ್ನಡೆ)
* ಅಥಣಿ – ಗಜಾನನ ಮಂಗಸೂಳಿ (ಮಹೇಶ್ ಕುಮಟಳ್ಳಿ ಮುನ್ನಡೆ)
* ಕೆ.ಆರ್.ಪುರಂ – ನಾರಾಯಣಸ್ವಾಮಿ (ಬೈರತಿ ಬಸವರಾಜ್ ಮುನ್ನಡೆ)
* ಮಹಾಲಕ್ಷ್ಮಿಲೇಔಟ್ – ಶಿವರಾಜ್ (ಗೋಪಾಲಯ್ಯಗೆ ಮುನ್ನಡೆ)
* ಯಶವಂತಪುರ – ನಾಗರಾಜ್ (ಜವರಾಯಿಗೌಡ ಮುನ್ನಡೆ)
ಯಾವ ಕ್ಷೇತ್ರದಲ್ಲಿ 50:50:
* ಗೋಕಾಕ್ ರಮೇಶ್ ಜಾರಕಿಹೊಳಿ(ಬಿಜೆಪಿ) – 50:50
ಲಖನ್ ಜಾರಕಿಹೊಳಿ (ಕಾಂಗ್ರೆಸ್) -50:50
ಅಶೋಕ್ ಪೂಜಾರಿ (ಜೆಡಿಎಸ್) – 50:50
* ಹೊಸಕೋಟೆ ಪದ್ಮಾವತಿ ಸುರೇಶ್ (ಕಾಂಗ್ರೆಸ್)- 50:50
ಶರತ್ ಬಚ್ಚೇಗೌಡ (ಪಕ್ಷೇತರ)-50:50
ಎಂಟಿಬಿ ನಾಗರಾಜ್ (ಬಿಜೆಪಿ – ಹಿನ್ನಡೆ)
ಜೆಡಿಎಸ್ ಲೆಕ್ಕ:
ಜೆಡಿಎಸ್ 4-5
ಬಿಜೆಪಿ 5-6
ಕಾಂಗ್ರೆಸ್ 3-4
ಇತರೆ 1
50:50 2
ಎಲ್ಲಿ ಜೆಡಿಎಸ್ ಕಿಂಗ್?
* ಕೆ.ಆರ್.ಪೇಟೆ – ಎಲ್. ದೇವರಾಜ್ (ನಾರಾಯಣಗೌಡ ಬಿಜೆಪಿ ಹಿನ್ನಡೆ)
* ಚಿಕ್ಕಬಳ್ಳಾಪುರ – ರಾಧಾಕೃಷ್ಣ (ಕೆ.ಸುಧಾಕರ್ ಬಿಜೆಪಿ – ಹಿನ್ನಡೆ)
* ಗೋಕಾಕ್ – ಅಶೋಕ್ ಪೂಜಾರಿ (ರಮೇಶ್ ಜಾರಕಿಹೊಳಿಗೆ ಹಿನ್ನಡೆ)
* ಯಶವಂತಪುರ – ಜವರಾಯಿಗೌಡ (ಎಸ್.ಟಿ.ಸೋಮಶೇಖರ್‍ಗೆ ಹಿನ್ನಡೆ)
* ಮಹಾಲಕ್ಷ್ಮಿ ಲೇಔಟ್- ಡಾ.ಗಿರೀಶ್ ನಾಶಿ (ಗೋಪಾಲಯ್ಯಗೆ ಹಿನ್ನಡೆ)
ಜೆಡಿಎಸ್ ಎಡವೋದು ಎಲ್ಲಿ?
* ಹುಣಸೂರು – ಸೋಮಶೇಖರ್ (ಹೆಚ್.ಪಿ ಮಂಜುನಾಥ್ – ಕಾಂಗ್ರೆಸ್ ಮುನ್ನಡೆ)
* ವಿಜಯನಗರ – ಎಂಎನ್ ನಬಿ (ಆನಂದ್ ಸಿಂಗ್ – ಬಿಜೆಪಿ ಮುನ್ನಡೆ)
* ಹಿರೇಕೆರೂರು – ಅಭ್ಯರ್ಥಿ ಇಲ್ಲ (ಬಿ.ಸಿ ಪಾಟೀಲ್ ಬಿಜೆಪಿ ಮುನ್ನಡೆ)
* ರಾಣೇಬೆನ್ನೂರು – ಮಲ್ಲಿಕಾರ್ಜುನ್ ಹಲಗೇರಿ (ಕೆ.ಬಿ.ಕೋಳಿವಾಡ ಕಾಂಗ್ರೆಸ್ ಮುನ್ನಡೆ)
* ಯಲ್ಲಾಪುರ – ಚೈತ್ರಾಗೌಡ (ಶಿವರಾಮ್ ಹೆಬ್ಬಾರ್ ಬಿಜೆಪಿ ಮುನ್ನಡೆ)
* ಅಥಣಿ – ಅಭ್ಯರ್ಥಿ ಇಲ್ಲ (ಮಹೇಶ್ ಕುಮಟಳ್ಳಿ ಬಿಜೆಪಿ ಮುನ್ನಡೆ)
* ಹೊಸಕೋಟೆ – ಅಭ್ಯರ್ಥಿ ಇಲ್ಲ (ಪಕ್ಷೇತರ ಶರತ್ ಮುನ್ನಡೆ, ಎಂಟಿಬಿ ನಾಗರಾಜ್‍ಗೆ ಹಿನ್ನಡೆ)
* ಕೆ.ಆರ್.ಪುರಂ – ಕೃಷ್ಣಮೂರ್ತಿ (ಬೈರತಿ ಬಸವರಾಜ್ ಬಿಜೆಪಿ ಮುನ್ನಡೆ)
50:50 ಕ್ಷೇತ್ರಗಳು:
* ಕಾಗವಾಡ ಶ್ರೀಮಂತ ಪಾಟೀಲ್ (ಬಿಜೆಪಿ)- 50:50
ರಾಜು ಕಾಗೆ (ಕಾಂಗ್ರೆಸ್)- 50:50
ಶ್ರೀಶೈಲ ತುಗಶೆಟ್ಟಿ (ಜೆಡಿಎಸ್)- ಸೋಲು
* ಶಿವಾಜಿನಗರ ಶರವಣ (ಬಿಜೆಪಿ)- 50:50
ರಿಜ್ವಾನ್ ಅರ್ಷದ್ (ಕಾಂಗ್ರೆಸ್)-50:50
ತನ್ವೀರ್ ಅಹ್ಮದ್ (ಜೆಡಿಎಸ್)- ಸೋಲು