ಜನಪ್ರಿಯ ‘ಕನ್ನಡತಿ’ ಸೀರಿಯಲ್ ನಟ ಕಿರಣ್ ರಾಜ್ (Kiran Raj) ಪ್ರಯಾಣಿಸುತ್ತಿದ್ದ ಕಾರು ಕೆಂಗೇರಿ ಬಳಿ ಸೆ.10ರಂದು ಅಪಘಾತವಾಗಿದೆ. ಈ ವೇಳೆ, ಕಾರು ಚಲಾಯಿಸುತ್ತಿದ್ದ ‘ರಾನಿ’ ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ (Girish) ಆಕ್ಸಿಡೆಂಟ್ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಕನ್ನಡ 11ರ ಪ್ರೋಮೋ ಔಟ್- ಹೊಸ ಅಧ್ಯಾಯ ಬರೆಯಲು ಸಜ್ಜಾದ ದೊಡ್ಮನೆ!
ನಿನ್ನೆ (ಸೆ.10) ವೃದ್ಧಾಶ್ರಮಕ್ಕೆ ಹೋಗಿ ಮೈಸೂರಿಗೆ ಹೋಗಲು ಮರಳಿ ಬರುತ್ತಿದ್ದ ಸಂದರ್ಭದಲ್ಲಿ ರಾತ್ರಿ 9:45ಕ್ಕೆ ಘಟನೆ ಸಂಭವಿಸಿದೆ. ಮುದ್ದರಾಯನ ಪಾಳ್ಯ ಬಳಿ ಬರುವ ವೇಳೆ ರಸ್ತೆಗೆ ಸಡನ್ ಸಗಿ ಮುಂಗುಸಿ ಬಂತು ಅದನ್ನು ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ ಎಂದಿದ್ದಾರೆ.
ಇದರ ಪರಿಣಾಮ, ನಾನು ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಿದ್ದೆ ಹಾಗಾಗಿ ನನಗೆ ಸೊಂಟಕ್ಕೆ ಸ್ವಲ್ಪ ಸಮಸ್ಯೆ ಆಗಿದೆ. ಕಿರಣ್ ಹಿಂದೆ ಕೂತಿದ್ದರಿಂದ ಎದೆ ಹಾಗೂ ಮುಖಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ರೀತಿ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.