Connect with us

Bengaluru City

Exclusive: ವಿಧಾನಸಭೆ ಚುನಾವಣೆ ಮುನ್ನ ರಾಜ್ಯ ಬಿಜೆಪಿಗೆ ಬಿಗ್ ಶಾಕ್!

Published

on

ಬೆಂಗಳೂರು: ಗೆಲುವಿನ ಹುಮ್ಮಸ್ಸಿನಲ್ಲಿರುವ ರಾಜ್ಯ ನಾಯಕರಿಗೆ ಆಘಾತದ ಸುದ್ದಿ. ವಿಧಾನಸಭೆ ಚುನಾವಣೆ ಮುನ್ನ ಬಿಜೆಪಿಗೆ ಬಿಗ್ ಶಾಕಿಂಗ್ ಸುದ್ದಿ ಪ್ರಕಟವಾಗಿದೆ.

ಹೌದು. ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಒಂದು ಸರ್ವೆ ಮುಗಿದಿದ್ದು, ಬಿಜೆಪಿಯ ಹಾಲಿ 44 ಶಾಸಕರಲ್ಲಿ 8 ಮಂದಿಗೆ ಗೆಲುವಿನ ಹಾದಿ ಕಠಿಣ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ:ಕರ್ನಾಟಕದಲ್ಲಿ ಕಮಲ ಹಿಂದೆ, ಕೈ ಮುಂದೆ: ಅಮಿತ್ ಶಾಗೆ ಕಾಂಗ್ರೆಸ್ ಶಾಕ್!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೈಗೆ ವರದಿ ಸಲ್ಲಿಕೆಯಾಗಿದ್ದು, 8 ಶಾಸಕರ ಬಗ್ಗೆ ಜನಾಭಿಪ್ರಾಯ ಮೂಡದೇ ಇರುವ ವಿಚಾರ ವರದಿಯಲ್ಲಿ ಉಲ್ಲೇಖವಾಗಿದೆ. ಇದರಲ್ಲಿ ಬೆಂಗಳೂರಿನ ಇಬ್ಬರು ಘಟಾನುಘಟಿ ಶಾಸಕರು, ಕೋರ್  ಕಮಿಟಿಯ ಇಬ್ಬರು ಶಾಸಕರು ಕೂಡ ಗೆಲ್ಲುವುದು ಕಷ್ಟ ಎನ್ನುವ ವಿಚಾರ ಪ್ರಸ್ತಾಪವಾಗಿದೆ. ಇದನ್ನೂ ಓದಿ:ರಾಜ್ಯ ಬಿಜೆಪಿ ನಾಯಕರ ಮಕ್ಕಳಿಗೆ ಅಮಿತ್ ಶಾ`ಕ್’!

ಗುಜರಾತ್ ಚುನಾವಣೆಯ ಬಳಿಕ ಈ ಸರ್ವೆಯನ್ನು ಅಮಿತ್ ಶಾ ಅಧ್ಯಯನ ನಡೆಸಲಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಶಾಸಕರ ಕ್ಷೇತ್ರಗಳು ಕೂಡ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಬಿಜೆಪಿಯ ಉನ್ನತ ಮೂಲಗಳ ಮಾಹಿತಿ ನೀಡಿವೆ.ಇದನ್ನೂ ಓದಿ:  ಕಾಂಗ್ರೆಸ್ ಗೆ ಐಟಿ ಶಾಕ್ ನೀಡಿದ್ದ ಬಿಜೆಪಿಗೆ 80 ಸೀಟಿನ ಶಾಕ್!

2018 ವಿಧಾನಸಭಾ ಚುನಾವಣೆಯ ಸಂಬಂಧ ಬಿಜೆಪಿ ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಎಸ್ ಯಡಿಯೂರಪ್ಪ ಅವರನ್ನು ಘೋಷಿಸಿದೆ. 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿರುವ ಬಿಜಪಿ ಈಗ ಪಕ್ಷವನ್ನು ಕರ್ನಾಟಕದಲ್ಲಿ ಮತ್ತಷ್ಟು ಸಂಘಟಿಸುವ ನಿಟ್ಟಿನಲ್ಲಿ ಪರಿವರ್ತನಾ ಯಾತ್ರೆಯನ್ನು ಆರಂಭಿಸಿದೆ. ಇದನ್ನೂ ಓದಿ: ಏರ್‍ಪೋರ್ಟ್ ನಿಂದ ರಸ್ತೆಯಲ್ಲಿ ಬರುವಾಗಲೇ ರಾಜ್ಯ ಬಿಜೆಪಿ ನಾಯಕರಿಗೆ ಶಾ ತರಾಟೆ

 

https://twitter.com/Office_of_BSY/status/896253038368661505

Click to comment

Leave a Reply

Your email address will not be published. Required fields are marked *