ಬೆಂಗಳೂರು: ಶಾಂತಿನಗರ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ಖಾಸಗಿ ವಿಮಾನ ಖರೀದಿಸಲು ಪ್ಲಾನ್ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು. ಆನ್ ಲೈನ್ ಹ್ಯಾಕರ್ ಗಳನ್ನು ಬಳಸಿಕೊಂಡು ಕೋಟ್ಯಾಂತರ ರೂ. ಸಂಪಾದನೆ ಮಾಡಿದ್ದ ನಲಪಾಡ್ ವಿಮಾನ ಖರೀದಿ ಮಾಡಲು ಪುಣೆಗೆ ಈ ಹಿಂದೆ ತೆರಳಿ ಮಾತುಕತೆ ನಡೆಸಿದ್ದ. ಇದಾದ ಬಳಿಕ ವಿಮಾನ ಖರೀದಿ ಪ್ರಕ್ರಿಯೆಯಿಂದ ಹಿಂದಕ್ಕೆ ಸರಿದಿದ್ದ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ. ಇದನ್ನೂ ಓದಿ: ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನ- ನಲಪಾಡ್ ನರಕದಿಂದ ಪಬ್ಲಿಕ್ ಟಿವಿಯ ಪ್ರತ್ಯಕ್ಷ ವರದಿ
ಎಲ್ಲಾ ಹೈಡ್ರಾಮಾದ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಮಂಗಳವಾರ ಹುಬ್ಬಳ್ಳಿಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದರು. ಕೇವಲ ಕಾಲು ತಾಗಿದ್ದಕ್ಕೆ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ ಮಾಡಿಲ್ಲ. ಇದರ ಹಿಂದೆ ಕೋಟ್ಯಾಂತರ ರೂಪಾಯಿಗಳ ಹಗರಣ ಇದೆ. ಕಂಪ್ಯೂಟರ್ ಹ್ಯಾಕಿಂಗ್, ಬಿಟ್ ಕಾಯಿನ್, ಹವಾಲಾ ದಂಧೆಯ ಕರಾಳ ಮುಖ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ಎಂ ಸಿದ್ದರಾಮಯ್ಯ ಈ ಪ್ರಕರಣವನ್ನು ಮುಚ್ಚಿಹಾಕುವ ಯತ್ನದಲ್ಲಿ ಇದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗದಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು










