Connect with us

Bengaluru City

ಮುದ್ದು ಮಗ್ಳನ್ನ ದೂರದಿಂದ್ಲೇ ನೋಡಿದ ಯಶ್

Published

on

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರು ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಪ್ಪನಾದ ಸಂತಸದಲ್ಲಿ ನಟ ಯಶ್ ತಮ್ಮ ಮುದ್ದು ಮಗಳನ್ನು ದೂರದಿಂದ ನೋಡಿ ಖುಷಿ ಪಟ್ಟಿದ್ದಾರೆ.

ನಟ ಯಶ್ ಮತ್ತು ರಾಧಿಕಾ ಅವರ ಮಗಳ ಫೋಟೋ ಮಾಧ್ಯಮಗಳಿಗೆ ಲಭ್ಯವಾಗಿದ್ದು, ನಟ ಯಶ್ ಪ್ರೀತಿಯಿಂದ ಆಸ್ಪತ್ರೆಯಲ್ಲಿ ಮಗಳನ್ನು ನೋಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಮುದ್ದು ಮಗಳ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು, ಮಗುವನ್ನು ನಟ ಯಶ್ ತಮ್ಮ ಎರಡು ಕೈಗಳನ್ನು ಹಿಂದೆ ಹಿಡಿದುಕೊಂಡು ಸೂಕ್ಷ್ಮವಾಗಿ ಮಗಳನ್ನು ಮುಟ್ಟದೇ ದೂರದಿಂದಲೇ ನೋಡುತ್ತಿರುವುದನ್ನು ಕಾಣಬಹುದಾಗಿದೆ.

ಭಾನುವಾರ ಮುಂಜಾನೆ ರಾಧಿಕಾ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಯಶ್ ಕುಟುಂಬದವರು ಮನಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದ್ದರು. ಅಣ್ಣ ಯಶ್ ಕೂಡ ತಮಗೆ ಹೆಣ್ಣು ಮಗು ಬೇಕೆಂದು ಆಸೆ ಪಟ್ಟಿದ್ದರು. ಅದರಂತೆಯೇ ಅವರ ಮನೆಗೆ ಭಾಗ್ಯಲಕ್ಷ್ಮಿ ಬಂದಿದ್ದಾಳೆ ಎಂದು ಸಹೋದರಿ ಹೇಳಿದ್ದರು.

ನಾವೆಲ್ಲಾ ಆಪರೇಷನ್ ಥಿಯೇಟರ್ ಒಳಗಡೆ ಇದ್ವಿ. ನಟ ಯಶ್ ಅವರ ಮೊದಲ ರಿಯಾಕ್ಷನ್ ಹೇಳಲು ಪದಗಳ ಮೂಲಕ ಸಾಧ್ಯವಿಲ್ಲ. ಹೆಣ್ಣು ಮಗು ಜನಿಸಿದೆ ಎಂದು ಹೇಳಿದಾಗ ಯಶ್ ಆನಂದಭಾಷ್ಪ ಕಣ್ಣೀರು ಹಾಕಿದರು. ಅದೊಂದು ಲವ್ಲೀ ಕ್ಷಣವಾಗಿತ್ತು ಎಂದು ವೈದ್ಯರು ತಿಳಿಸಿದ್ದರು.

https://www.youtube.com/watch?v=VxelNRK-5H0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *