ಬೆಂಗಳೂರು: ಕಾರ್ಯಕ್ರಮದಲ್ಲಿ ದುನಿಯಾ ವಿಜಿ ನನ್ನ ಬಳಿ ಬಂದು ಕಿಟ್ಟಿ ಎಲ್ಲಿ ಅಂತಾ ಕೇಳಿದರು. ನನಗೆ ಗೊತ್ತಿಲ್ಲಣ್ಣ ಅಂದ್ರು ಪದೇ ಪದೇ ಕೇಳುತ್ತಿದ್ದರು. ಆ ವೇಳೆ ನಾನು ಏಯ್ ಏನ್ ಇವಾಗ ಅಂತಾ ಅವಾಜ್ ಹಾಕಿದೆ. ಕೂಡಲೇ ಏಳೆಂಟು ಜನ ಬಂದು ಕಾರಿನಲ್ಲಿ ಕರೆದುಕೊಂಡು ಹೋಗಿ ಹೊಡೆದರು ಅಂತ ಹಲ್ಲೆಗೊಳಗಾಗಿರುವ ಮಾರುತಿ ಗೌಡ ಹೇಳಿದ್ದಾರೆ.
ನೋಡ ನೋಡುತ್ತಿದ್ದಂತೆ ಬಂದ ಏಳೆಂಟು ಜನ ಹಲ್ಲೆ ಮಾಡಲು ಮುಂದಾದರು. ಫೇಸ್‍ಗೆ ಹೊಡೀತಾರೆ ಅಂತಾ ಕೈಗಳಿಂದ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಕಾರ್ಯಕ್ರಮದಲ್ಲಿದ್ದ ಯಾರು ನನ್ನ ಸಹಾಯಕ್ಕೆ ಬರಲಿಲ್ಲ. ಅಲ್ಲಿದ್ದ ಅಪ್ಪು ಎಂಬ ಗೆಳೆಯ ನನ್ನ ರಕ್ಷಣೆಗೆ ಮುಂದಾದಾಗ ಆತನ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಅಪ್ಪುಗೆ ಸಹ ಗಾಯಗಳಾಗಿವೆ ಅಂತಾ ಮಾರುತಿ ಸ್ನೇಹಿತರಿಗೆ ಹೇಳಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಕಾರಿನಲ್ಲಿ ಕರೆದುಕೊಂಡ ಹೋದ ದುನಿಯಾ ವಿಜಿ ಟೀಂ ಒಂದು ಗಂಟೆಯವರೆಗೂ ನನ್ನ ಮೇಲೆ ಹಲ್ಲೆ ನಡೆಸಿ ಬೆದರಿಸಿ ವಿಡಿಯೋ ಮಾಡಿಸಿದರು ಅಂತಾ ಮಾರುತಿ ಗೌಡ ಆಸ್ಪತ್ರೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಕರಿಚಿರತೆಯ ಕಾಳಗದ ಬಗ್ಗೆ ಜಗ್ಗೇಶ್ ಹೇಳಿದ್ದೇನು?
Advertisement
Advertisement
ಶನಿವಾರ ಅಂಬೇಡ್ಕರ್ ಭವನದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆದಿತ್ತು. ಈ ವೇಳೆ ದುನಿಯಾ ವಿಜಯ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಫೋಸ್ ಕೊಡುತ್ತಿದ್ದರು. ಆಗ ಮಗ ಸಾಮ್ರಾಟ್ ತಂದೆಯೊಂದಿಗೆ ವೇದಿಕೆ ಹತ್ತಿದ್ದಾರೆ. ಇದನ್ನು ನೋಡಿದ ಮಾರುತಿಗೌಡ `ಏಯ್, ಚಿಲ್ಟು ಕೆಳಗೆ ಇಳಿಯೋ’ ಎಂದು ಎಚ್ಚರಿಸಿದ್ದರಂತೆ. ಮಾರುತಿಗೌಡ ಮಾತು ಕೇಳಿಸಿಕೊಂಡ ವಿಜಯ್ ಕೋಪ ನೆತ್ತಿಗೇರಿತ್ತಂತೆ. ತಕ್ಷಣವೇ `ಯಾಕಪ್ಪ ಹಾಗಂತಿಯಾ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾರುತಿಗೌಡ, `ಮತ್ತೆ ಏನಣ್ಣ, ನೀನು ಚಿಲ್ಟು-ಪಿಲ್ಟುಗಳನ್ನೆಲ್ಲಾ ಸ್ಟೇಜ್‍ಗೆ ಹತ್ತಿಸ್ತೀಯ’ ಎಂದಿದ್ದಾರೆ. ಆತನ ಉತ್ತರದಿಂದ ಗರಂ ಆದ ವಿಜಯ್, ಸಾಮ್ರಾಟ್‍ನನ್ನು ಚಿಲ್ಟು ಅಂತ ಕರೆದಿದ್ದಕ್ಕೆ ವಾಗ್ದಾಳಿ ನಡೆಸಿದ್ದರಂತೆ. ಇದನ್ನೂ ಓದಿ: ನಿನಗೂ, ರೌಡಿಗಳಿಗೂ ಏನು ವ್ಯತ್ಯಾಸ..?- ದುನಿಯಾ ವಿಜಯ್‍ಗೆ ಪೊಲೀಸರಿಂದ ಫುಲ್ ಕ್ಲಾಸ್!
Advertisement
ಸ್ಪರ್ಧೆ ನಡೆಯುವ ಜಾಗದಲ್ಲಿಯೇ ಬುದ್ಧಿ ಹೇಳುವುದಕ್ಕೆ ಹೋದರೆ ಗಲಾಟೆ ಆಗುತ್ತದೆ ಅಂತ ಮಾರುತಿ ಗೌಡನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದೇವೆ. ನಾವು ಅಪಹರಣ ಮಾಡಿಲ್ಲ ಅಂತ ವಿಚಾರಣೆ ವೇಳೆ ವಿಜಯ್ ಸ್ಪಷ್ಟನೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=ALFMC4BI448
https://www.youtube.com/watch?v=EgaCOcqC7ZU