BollywoodCinemaLatestMain Post

ಗಲ್ಲಿ ಬಾಯ್ ರಣವೀರ್ ಚಿತ್ರಕ್ಕೆ ಚಾರ್ಲಿ ಚಾಪ್ಲಿನ್‍ನಿಂದ ಪ್ರೇರಣೆ?

Advertisements

ಬಾಲಿವುಡ್ ಗಲ್ಲಿ ಬಾಯ್ ರಣವೀರ್ ಸಿಂಗ್ ಯಾವುದೇ ರೀತಿಯ ಪಾತ್ರ ಕೊಟ್ಟರು ನಿಭಾಯಿಸುತ್ತಾರೆ. ಗಂಭೀರ ಪಾತ್ರದಿಂದ ಹಿಡಿದು ಹಾಸ್ಯ ಪ್ರಧಾನ ಪಾತ್ರವಿದ್ದರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಅದರಂತೆ ಈ ನಟ ಹೊಸ ಸಿನಿಮಾದಲ್ಲಿ ಅಭಿಮಾನಿಗಳು ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಅವತಾರ ಕಂಡ ಅಭಿಮಾನಿಗಳು ಫಿದಾ ಆಗಿದ್ದು, ಬಿ’ಟೌನ್ ನಲ್ಲಿ ಭಾರೀ ಸುದ್ದಿಯಾಗಿದೆ.

ಸದ್ಯ ರಣವೀರ್ ಅವರು ದಿವ್ಯಾಂಗ್ ಠಕ್ಕರ್ ಚೊಚ್ಚಲ ನಿರ್ದೇಶನದ ‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಯಶ್ ರಾಜ್ ನಿರ್ಮಾಣ ಮಾಡುತ್ತಿದ್ದು, ಇದು ಬಿಡುಗಡೆಯ ಹಂತದಲ್ಲಿದೆ. ಈ ಸಿನಿಮಾ ಹಾಸ್ಯ ಪ್ರಧಾನವಾಗಿದ್ದು ಅಭಿಮಾನಿಗಳು ರಣವೀರ್‌ನನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ಜಯೇಶ್ ಭಾಯ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ರಣವೀರ್ ಸಿಂಗ್ ನಟನೆಯ 'ಜಯೇಶ್‌ಭಾಯ್ ಜೋರ್ದಾರ್' ರಿಲೀಸ್​ ಡೇಟ್​ ಫಿಕ್ಸ್​

ವಿಶೇಷತೆ ಏನು?
ಸಿನಿಮಾ ಪೋಸ್ಟರ್ ನೋಡಿದ ಬಿ’ಟೌನ್, ಈ ಚಮತ್ಕಾರಿ ಪಾತ್ರವನ್ನು ರಚಿಸುವುದರ ಹಿಂದೆ ಬಹಳಷ್ಟು ಆಲೋಚನೆಯನ್ನು ಚಿತ್ರತಂಡ ಮಾಡಿದೆ. ಈ ಪಾತ್ರದ ಹಿಂದೆ ವಿಶ್ವದ ಅಪ್ರತಿಮ ನಟ ಚಾರ್ಲಿ ಚಾಪ್ಲಿನ್ ಪ್ರೇರಣೆ ತೆಗೆದುಕೊಂಡಂತೆ ತೋರುತ್ತಿದೆ. ರಣವೀರ್ ಸಿಂಗ್ ಅವರ ಲುಕ್ ಮತ್ತು ಗುಣಲಕ್ಷಣಗಳು ಚಾರ್ಲಿ ಚಾಪ್ಲಿನ್ ಅವರಿಂದ ಸ್ಫೂರ್ತಿ ಪಡೆದಿವೆ. ಇದನ್ನೂ ಓದಿ: ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?

ಅಷ್ಟೆ ಅಲ್ಲ, ರಣವೀರ್ ಪಾತ್ರಕ್ಕಾಗಿ ಅಳವಡಿಸಿಕೊಂಡಿರುವ ಕೆಲವು ಕ್ವಿರ್ಕ್‍ಗಳು ಚಾರ್ಲಿ ಚಾಪ್ಲಿನ್ ಅವರಂತೆ ಕಂಡುಬಂದಿವೆ. ರಣವೀರ್ ಪೋಸ್ಟ್ ನೋಡಿದ ಸೆಲೆಬ್ರಿಟಿಗಳು ಈ ಸಿನಿಮಾ ಬಗ್ಗೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಸಿನಿಮಾದ ಟ್ರೈಲರ್ ಒಂದು ವಾರದಲ್ಲಿ ರಿಲೀಸ್ ಆಗುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ ಈ ಕುರಿತು ಚಿತ್ರತಂಡ ಯಾವುದೇ ರೀತಿಯ ಪ್ರತಿಕ್ರಿಯೆ ಕೊಟ್ಟಿಲ್ಲ.

Leave a Reply

Your email address will not be published.

Back to top button