– ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಬರಬಹುದು ಎಂದ ಮಾಜಿ ಸಿಎಂ
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದಿನಕ್ಕೆ 50 ಕೋಟಿ ರೂ. ಇಲ್ಲದೇ ಮನೆಗೆ ಹೋಗಿ ನಿದ್ರೆ ಮಾಡೋದಿಲ್ಲವಂತೆ. ಇದನ್ನ ನಾನಲ್ಲ ಜನ ಹೇಳ್ತಾರೆ, ಕಾಂಗ್ರೆಸ್‌ನವರೇ ಮಾತಾಡ್ತಾರೆ ಅಂತ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ʻಪಬ್ಲಿಕ್ ಟಿವಿʼಗೆ (Public TV) ನೀಡಿದ ಸಂದರ್ಶನದಲ್ಲಿ ಅವರು ಮೈತ್ರಿ ಅನಿವಾರ್ಯತೆ ಕುರಿತು ಮಾತನಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ. ಸಿ.ಎನ್ ಮಂಜುನಾಥ್ (Dr. CN Manjunath) ಗೆದ್ದೇ ಗೆಲ್ತಾರೆ ಎಂಬ ವಿಶ್ವಾಸ ವ್ಯಕ್ಯಪಡಿಸಿರುವ ಅವರು, ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಮುಂದುವರಿದು, ಕಾಂಗ್ರೆಸ್‌ನವರು (Congress) 10 ವರ್ಷ ಈ ಸರ್ಕಾರ ಇರುತ್ತೆ ಅಂತಾ ಹೇಳಿದ್ದಾರೆ. ಈ ಹಿಂದೆಯೂ 20 ವರ್ಷ ನಮ್ಮ ಸರ್ಕಾರ ಇರುತ್ತೆ ಅಂತಾ ಹೇಳಿದ್ದರು. ಇತಿಹಾಸ ತೆಗೆದು ನೋಡಿದ್ರೆ, ಏನಾಗಿದೆ ಅಂತಾ ಗೊತ್ತಾಗುತ್ತೆ. ಈಗ 136 ಪ್ಲಸ್ ಪ್ಲಸ್ ಪ್ಲಸ್ ಸೀಟ್ ಇದೆ ಅಂತಾರೆ. ಈ ಹಿಂದೆ ನಮಗೆ ಕಾಂಗ್ರೆಸ್ ಬೆಂಬಲ ಕೊಟ್ಟಾಗ ಎಷ್ಟಿತ್ತು? ಲೋಕಸಭಾ ಚುನಾವಣೆ (Lok Sabha Elections) ಆದ್ಮೇಲೆ ಎಷ್ಟು ದಿನ ಸರ್ಕಾರ ಇರುತ್ತೆ ಅಂತ ಗೊತ್ತಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಲ್ಲಿ (Bengaluru) ಸ್ಕ್ವೇರ್‌ಫಿಟ್‌ಗೆ 100 ರೂ. ಫಿಕ್ಸ್ ಮಾಡಿದ್ದಾರಂತೆ, ಪ್ರತಿ ದಿನಕ್ಕೆ 50 ಕೋಟಿ ರೂ. ಇಲ್ಲದೇ ಮನೆಗೆ ಹೋಗಿ ನಿದ್ರೆ ಮಾಡೋದಿಲ್ಲವಂತೆ. ಜನ ಮಾತ್ರ ಅಲ್ಲ, ಕಾಂಗ್ರೆಸ್‌ನವರೇ ಇದನ್ನ ಹೇಳ್ತಾರೆ. ಇಂಥವರು ಒಕ್ಕಲಿಗರನ್ನ ಉದ್ಧಾರ ಮಾಡ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಅಣಕು ಮತ ಎಣಿಕೆ ವೇಳೆ ಬಿಜೆಪಿಗೆ ಹೆಚ್ಚುವರಿ ಮತ – ವರದಿ ಸುಳ್ಳೆಂದ ಚುನಾವಣಾ ಆಯೋಗ
ಮತ್ತೆ ಜೈಲಿಗೆ ಹೋಗಬಹುದು?
ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಬರಬಹುದು. ಅವರು ಎಲ್ಲ ಅರಗಿಸಿಕೊಳ್ಳುವ ಶಕ್ತಿ ಇದೆ ಅಂತಾ ಹೇಳ್ತಾರೆ. ಅವರಿಗೆ ಹಣದಿಂದ ಯಾರನ್ನ ಬೇಕಾದರೂ ಕೊಂಡುಕೊಳ್ಳಬಹುದು ಅನ್ನೋ ಉದ್ಧಟತನ ಇರೋದು ಸತ್ಯ. ಅದರಿಂದ ನಾನು ಏನೇ ತಪ್ಪು ಮಾಡಿದರೂ ಅರಗಿಸಿಕೊಳ್ಳುವ ಶಕ್ತಿಯಿದೆ ಅನ್ನೋದು ಅವರ ಅಭಿಪ್ರಾಯ. ಮುಂದೆ ಭಗವಂತ ಅವರನ್ನ ನೋಡಿಕೊಳ್ತಾನೆ. ಇದನ್ನೂ ಓದಿ: ಲಂಡನ್, ದುಬೈನಲ್ಲಿ ಮನೆ.. 5 ಕೋಟಿ ಮೌಲ್ಯದ ಚಿನ್ನ; ದ. ಗೋವಾ ಬಿಜೆಪಿ ಅಭ್ಯರ್ಥಿ 1,400 ಕೋಟಿ ಒಡತಿ
ಮೈತ್ರಿ ಯಾಕೆ ಅನಿವಾರ್ಯ ಆಯ್ತು?
ಇಂದಿನ ರಾಜಕೀಯ ಬೆಳವಣಿಗೆ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಮೈತ್ರಿ ಅನಿವಾರ್ಯ ಅನ್ನಿಸಿತು. ಕಳೆದ ಬಾರಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ನಿರೀಕ್ಷೆ ಮಾಡಿತ್ತು. ನಾವೂ ಸಹ ಅದ್ಭುತವಾಗಿ ಪಂಚರತ್ನ ಯಾತ್ರೆ ಮಾಡಿದ್ದರಿಂದ ಹೆಚ್ಚಿನ ಸ್ಥಾನಗಳನ್ನ ನಿರೀಕ್ಷೆ ಮಾಡಿದ್ದೆವು. ಅದು ಸಾಧ್ಯವಾಗಲಿಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮರುಕ್ಷಣದಿಂದಲೇ ಭ್ರಷ್ಟ ವ್ಯವಸ್ಥೆ ಆರಂಭವಾಯಿತು. ಯಾವ ಸರ್ಕಾರದಲ್ಲೂ ಇಂತಹ ಕೆಟ್ಟ ಆಡಳಿತ ನೋಡಲಿಲ್ಲ. ಅಧಿಕಾರಕ್ಕೆ ಬಂದ ಮರುಕ್ಷಣದಿಂದಲೇ ಅಧಿಕಾರಿಗಳ ವರ್ಗಾವಣೆಗೆ ದುಡ್ಡು ಫಿಕ್ಸ್ ಮಾಡಿ ಲೂಟಿ ಮಾಡುವ ಕೆಲಸ ಶುರುವಾಯ್ತು. ಈ ರಾಜ್ಯವನ್ನ ಯಾವ ಮಟ್ಟಕ್ಕೆ ದಿವಾಳಿ ಮಾಡಬಹುದು ಅನ್ನೋದನ್ನ ನೆನಸಿಕೊಂಡಾಗ, ಪ್ರತಿಯೊಬ್ಬರಿಗೂ ಆತಂಕ ಆಗುತ್ತೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಿಗೂ ಮೈತ್ರಿ ಅನಿವಾರ್ಯವಾಯಿತು ಎಂದು ತಿಳಿಸಿದ್ದಾರೆ.
ಈ ಬಾರಿ ಮೈತ್ರಿ ಪಕ್ಷ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ಹಾಕಿಕೊಂಡಿದೆ. ಕನಿಷ್ಠ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಹೆಚ್‌ಡಿಕೆ ಶಪಥ ಮಾಡಿದ್ದಾರೆ. ಇದನ್ನೂ ಓದಿ: ರಾಮನವಿಯಂದು ಕೇಸರಿ ಶಾಲು,ರಾಮನ ಬಾವುಟ ಹಿಡಿದು ಕೆರಗೋಡಿಗೆ ಹೆಚ್‌ಡಿಕೆ ಭೇಟಿ