– ಸುಜಾತಾ ಭಟ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆಂದು ಆಕ್ಷೇಪ
ಉಡುಪಿ: ಧರ್ಮಸ್ಥಳದಲ್ಲಿ (Dharmasthala) ನಾಪತ್ತೆಯಾಗಿದ್ದಾರೆ ಎನ್ನಲಾದ ಅನನ್ಯಾ ಭಟ್ (Ananya Bhat) ಎಂಬಿಬಿಎಸ್ ಓದೇ ಇಲ್ಲ, ಇದೆಲ್ಲ ಕಟ್ಟುಕಥೆಯೆಂದು ಪರ್ಕಳದ ನಗರಸಭೆ ಮಾಜಿ ಸದಸ್ಯ ಮಹೇಶ್ ಠಾಕೂರ್ (Mahesh Thakur) ಹೇಳಿದ್ದಾರೆ.
ತಮ್ಮ ಪುತ್ರಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎಂಬ ಸುಜಾತಾ ಭಟ್ ಆರೋಪ ಕುರಿತು `ಪಬ್ಲಿಕ್ ಟಿವಿ’ ಜೊತೆಗೆ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: Exclusive | ಧರ್ಮಸ್ಥಳ ಪ್ರಕರಣದ ಅನಾಮಿಕನ ಹುಟ್ಟೂರಲ್ಲಿ ʻಪಬ್ಲಿಕ್ ಟಿವಿʼ – ಮಾಸ್ಕ್ ಮ್ಯಾನ್ ಊರು ಯಾವ್ದು? ಓದಿದ್ದೇನು?
ಅನನ್ಯಾ ಭಟ್ ನನ್ನ ಮಗಳು ಎಂದು ಸುಜಾಜಾ ಭಟ್ ಹೇಳುತ್ತಿದ್ದಾರೆ. 2003ರಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಮಾಡುತ್ತಿರುವ ಬಗ್ಗೆಯೂ ಹೇಳಿದ್ದರು. ಈ ಬಗ್ಗೆ ನಾನು ಕೂಲಂಕುಷವಾಗಿ ಹೊರವಲಯದಲ್ಲಿ ಪರಿಶೀಲಿಸಿದಾಗ ಇದು ಅಕ್ಷರಶಃ ಸುಳ್ಳು ಎಂದು ತಿಳಿಯಿತು. ಅಲ್ಲಿ ವಿಚಾರಿಸಿದಾಗ ಆ ಹೆಸರಿನ ವಿದ್ಯಾರ್ಥಿ ಎಂಬಿಬಿಎಸ್ ಮಾಡ್ತಿರಲಿಲ್ಲ ಎಂದು ತಿಳಿಯಿತು ಅಂತ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಜೀವಕ್ಕೆ ಹಾನಿಯಾದ್ರೆ ರಾಜ್ಯ ಸರ್ಕಾರ, ಇಡೀ ಬಿಜೆಪಿ ಹೊಣೆ: ತಿಮರೋಡಿ ಫಸ್ಟ್ ರಿಯಾಕ್ಷನ್
ಇಷ್ಟು ದೊಡ್ಡ ಕ್ಷೇತ್ರದ ಬಗ್ಗೆ ಹಾಗೂ ನಮ್ಮ ಊರಿನ ಪಕ್ಕದಲ್ಲಿರುವ ಉಪಾಧ್ಯಾಯ ಬಗ್ಗೆ ಹೇಳುತ್ತಿರುವುದನ್ನು ಗಮನಿಸಿದಾಗ ಇದು ಕಟ್ಟುಕಥೆಯೆಂದು ಗೊತ್ತಾಗುತ್ತದೆ. ಇಲ್ಲದ ಮಗಳನ್ನು ಸೃಷ್ಟಿಸಿ, ಪವಿತ್ರ ಕ್ಷೇತ್ರದ ಮೇಲೆ ಆರೋಪ ಮಾಡಿರುವುದೆಲ್ಲ ಸುಳ್ಳು. ಇದನ್ನು ಯಾರೂ ಸಹ ನಂಬಬಾರದು. ಇದನ್ನು ವಿರೋಧಿಸಬೇಕು. ಇದು ಸರಿಯಲ್ಲ ಎಂದು ನಾವು ಮನೆಯಲ್ಲಿ ಕೂತು ಹೇಳೋದಲ್ಲ. ಗಂಟಾಘೋಷವಾಗಿ ಇದು ಸುಳ್ಳು ಎಂದು ಹೇಳಬೇಕು ಎಂದಿದ್ದಾರೆ.
ಸುಜಾತ ಭಟ್ ಅವರು ತುಂಬಾ ವಯಸ್ಸಾದವರು, ಅವರಿಗೆ ವಯಸ್ಸಿನ ಸಮಸ್ಯೆಗಳಿರಬಹುದು. ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯು ಇನ್ನೊಂದು ಬಾರಿ ನೀಡಿದ ಹೇಳಿಕೆಗೆ ಸರಿ ಹೊಂದುತ್ತಿಲ್ಲ. ಆದ್ದರಿಂದ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಅವರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿದ್ದಾರೆ.
ಸುಜಾತಾ ಭಟ್ ಹೇಳುತ್ತಿರುವುದೆಲ್ಲ ಕಟ್ಟುಕಥೆ. ಪರ್ಕಳದ ನಿವಾಸಿಯಾಗಿ ಹಾಗೂ ಮಾಜಿ ನಗರಸಭೆಯ ಸದಸ್ಯನಾಗಿದ್ದರಿಂದ ನನಗೆ ಇಲ್ಲಿನ ವಿಚಾರ ತಿಳಿದಿದೆ. ಇವೆಲ್ಲವು ಮುಂದೆ, ಹಿಂದೆ ಇಲ್ಲದ ಕಟ್ಟುಕಥೆ ಅಂತ ಹೇಳಿದ್ದಾರೆ.