– ಒಂದು ಆಡಿಯೋ ವೈರಲ್, ಹತ್ತಾರು ಚರ್ಚೆ
ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಕುರಿತು ತೀವ್ರ ಚರ್ಚೆ ನಡೆಯುತ್ತಿರುವಾಗಲೇ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದ್ದು, ಸಿಎಂ ಬದಲಾವಣೆ ಫಿಕ್ಸ್ ಎನ್ನುವಂತಾಗಿದೆ.
ತುಳುವಿನಲ್ಲಿ ವ್ಯಕ್ತಿಯೊಬ್ಬರ ಜೊತೆ ಕಟೀಲ್ ಮಾತನಾಡಿದ್ದು, ಈ ಸಂಭಾಷಣೆಯಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ಆಗಲಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಯಾರಿಗೂ ಹೇಳಬೇಡ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರ ಟೀಮ್‍ನ್ನು ತೆಗೆಯುತ್ತೇವೆ. ಹೊಸ ತಂಡವನ್ನು ಕಟ್ಟುತ್ತೇವೆ. ಈಗ ಸದ್ಯಕ್ಕೆ ಯಾರಿಗೂ ಹೇಳಬೇಡ. ದೆಹಲಿಯಿಂದನೇ ಮಾಡುತ್ತಾರೆ ಎಂದು ತಮ್ಮ ಆಪ್ತರೊಬ್ಬರ ಬಳಿ ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ.
Advertisement
ಏನೂ ಸಮಸ್ಯೆ ಇಲ್ಲ, ಭಯಪಡಬೇಡ, ನಾವಿದ್ದೇವೆ. ಯಾರೇ ಆದ್ರೂ ಎಲ್ಲ ನಮ್ಮ ಕೈಯಲ್ಲೇ ಇರುತ್ತೆ. ಮೂರು ಹೆಸರು ಇದೆ, ಇದರಲ್ಲಿ ಯಾರಾದರೂ ಆಗುವ ಚಾನ್ಸ್ ಇದೆ ಎಂದು ಹೇಳಿದ್ದಾರೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ.
Advertisement
ಈ ಮೂಲಕ ನಾಯಕತ್ವ ಬದಲಾವಣೆಗೆ ಸುಳಿವು ಸಿಕ್ಕಂತಾಗಿದ್ದು, ಅವರದ್ದೇ ಧ್ವನಿ ಆಗಿದ್ರೆ ನಳಿನ್ ಕುಮಾರ್ ಕಟೀಲ್ ಸಿಕ್ಕಿಬಿದ್ರಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಇಷ್ಟು ದಿನ ಸಿಗದಿದ್ದ ಕಟೀಲ್ ಈಗ ಸಿಕ್ಕಿ ಬೀಳ್ತಾರಾ? ನಾಯಕತ್ವ ಬದಲಾವಣೆ ಬಗ್ಗೆ ಅಧಿಕೃತಗೊಳ್ಳುವ ಮುನ್ನ ಮುನ್ಸೂಚನೆ ಕೊಟ್ರಾ ಕಟೀಲ್? ಹೈಕಮಾಂಡ್ ನಿಂದ ಅಧಿಕೃತ ಆದೇಶ ಬರುವ ಮುನ್ನ ಆಪ್ತರ ಬಳಿ ಕಟೀಲ್ ಬಾಯಿ ಬಿಟ್ಬಿಟ್ರಾ ಎಂಬ ಪ್ರಶ್ನೆಗಳು ಎದ್ದಿದೆ.