ಬೆಂಗಳೂರು: `ಬಾ ನಲ್ಲೆ ಮಧುಚಂದ್ರಕೆ’ (Baa Nalle Madhuchandrake) ಸಿನಿಮಾ ಶೈಲಿಯಲ್ಲಿ ಹೆಂಡತಿಯನ್ನ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನ ಪಶ್ಚಿಮ ಬಂಗಾಳದಲ್ಲಿ (West Bengal) ಬಂಧಿಸಿದ್ದ ಬೆಂಗಳೂರು ಪೊಲೀಸರು ಅನೇಕ ರೋಚಕ ಸಂಗತಿಗಳನ್ನ ಬಯಲಿಗೆಳೆದಿದ್ದಾರೆ.
ಬೆಂಗಳೂರಿನ ಸುದ್ದಗುಂಟೆ ಪೊಲೀಸರು (Bengaluru Suddagunte Palya Police), ನಾಝ್ ಮಹಿಳೆಯ ಕೊಲೆ ಪ್ರಕರಣದ ತನಿಖೆ (Investigation) ನಡೆಸಿದಾಗ ಬೆಚ್ಚಿಬೀಳುವ ಮಾಹಿತಿಗಳು ಬೆಳಕಿಗೆ ಬಂದಿವೆ. ಇದನ್ನೂ ಓದಿ: ನೈಟ್‌ಕ್ಲಬ್‌ನಲ್ಲಿ ಡ್ರಗ್ಸ್ ಸೇವನೆ ಆರೋಪ – 300 ಮಂದಿ ಪೊಲೀಸರ ವಶಕ್ಕೆ
Advertisement
Advertisement
ಆರೋಪಿ ಪತಿ ನಾಸಿರ್ ಹೊಸೈನ್ ಇತಿಹಾಸ ಕೆದಕಿದಾಗ ಬಾಂಗ್ಲಾದೇಶದ ಮೂಲದವನು ಅನ್ನೋದು ಬೆಳಕಿಗೆ ಬಂದಿದೆ. ಈತ ಅಕ್ರಮವಾಗಿ ಬೆಂಗಳೂರಲ್ಲಿ ವಾಸವಿದ್ದ. ಅದಕ್ಕಾಗಿ ಇಲ್ಲಿನ ಆಧಾರ್ (Adhar Card), ಪಾನ್‌ಕಾರ್ಡ್ (Pan Card) ಹಾಗೂ ಮತದಾರರ ಗುರುತಿನ ಚೀಟಿ (Voter ID) ಸಹ ಪಡೆದಿದ್ದ. ದೆಹಲಿ ವಿಳಾಸದಲ್ಲಿ ನಕಲಿ ಆಧಾರ್, ಕೊಲ್ಕತ್ತಾ ವಿಳಾಸದಲ್ಲಿ ಪಾನ್‌ಕಾರ್ಡ್ ಹಾಗೂ ಬೆಂಗಳೂರು ವಿಳಾಸದಲ್ಲಿ ವೋಟರ್ ಐಡಿ ಹೊಂದಿದ್ದ. ತನ್ನ ಬಗ್ಗೆ ಯಾವುದೇ ಮಾಹಿತಿ ನೀಡದೇ ನಾಝ್ ಎಂಬಾಕೆಯನ್ನ ವಿವಾಹವಾಗಿದ್ದ. 6 ತಿಂಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಇದರಿಂದ ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ.
Advertisement
ಪತ್ನಿ ನಾಝ್‌ಳನ್ನ ಕೊಲೆ ಮಾಡಿ ವಿಮಾನದಲ್ಲಿ ದೆಹಲಿಗೆ ಹೋಗಿದ್ದ ಹೊಸೈನ್, ಬಾಂಗ್ಲಾದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ. ದೆಹಲಿಯಿಂದ ಸಿಲಿಗುರಿಗೆ ಹೊರಟಿದ್ದ ಈ ವೇಳೆ ಪಶ್ಚಿಮ ಬಂಗಾಳ ಪೊಲೀಸರ ಸಹಾಯದಿಂದ ಬಾಂಗ್ಲಾದೇಶದ ಗಡಿಯಲ್ಲೇ ಖೆಡ್ಡಕ್ಕೆ ಕೆಡವಲಾಗಿದೆ. ಸಿಲಿಗುರಿ ಸಮೀದ ಇಸ್ಲಾಂಪುರ್ ಜಿಲ್ಲೆಯಲ್ಲಿ ಆರೋಪಿಯನ್ನ ಅರೆಸ್ಟ್ ಮಾಡಲಾಗಿದೆ.
Advertisement
ಢಾಕಾದಲ್ಲಿ ಎಂಜಿನಿಯರಿಂಗ್ ತರಬೇತಿ ಪಡೆದಿದ್ದ ಹೊಸೈನ್ ಹಾರ್ಡ್ವೇರ್ ಎಂಜಿನಿಯರ್ ಆಗಿ ಗುರುತಿಸಿಕೊಂಡಿದ್ದ. ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸದಿದ್ದರೂ ಲ್ಯಾಪ್‌ಟಾಪ್, ಮೊಬೈಲ್ ರಿಪೇರಿಯಲ್ಲಿ ಪರಿಣಿತಿ ಹೊಂದಿದ್ದ. ಆಪಲ್ ಕಂಪನಿಯ ಸಿಸ್ಟಂ, ಲ್ಯಾಪ್‌ಟಾಪ್ ರಿಪೇರಿ ಮಾಡೋದ್ರಲ್ಲಿ ನಿಸ್ಸೀಮನಾಗಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ಪೊಲೀಸರ ವೇಷದಲ್ಲಿ ಬಂದು 80 ಲಕ್ಷ ರೂ. ದೋಚಿಕೊಂಡು ಹೋಗಿದ್ದ ಆರೋಪಿಗಳ ಬಂಧನ
ಆರೋಪಿ ಭಾರತಕ್ಕೆ ಕಾಲಿಟ್ಟಿದ್ದು ಹೇಗೆ?
ಆರೋಪಿ ಸಿಲಿಗುರಿ ಮೂಲಕ ಕೊಲ್ಕತ್ತಾಗೆ ಪ್ರವೇಶ ಪಡೆದಿದ್ದ. ಸುಳ್ಳು ದಾಖಲಾತಿ ಸೃಷ್ಟಿಸಿಕೊಂಡು ಕೆಲಸ ಶುರು ಮಾಡಿದ್ದ. ನಂತರ ಮುಂಬೈ, ದೆಹಲಿ ಸೇರಿದಂತೆ ಗುರುಗ್ರಾಮದಲ್ಲಿ ತನ್ನದೇ ಮೊಬೈಲ್ ರಿಪೇರಿ ಅಂಗಡಿ ಹೊಂದಿದ್ದ. 2019 ರಂದು ಬೆಂಗಳೂರಿಗೆ ಬಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಹೊಸೈನ್ 75 ಸಾವಿರ ಸಂಬಳ ಪಡೆಯುತ್ತಿದ್ದ.
ಆರೋಪಿ ತಾನು ವಾಸವಿದ್ದ ಮನೆ ಪಕ್ಕದಲ್ಲೇ ಇದ್ದ ನಾಝ್ ಜೊತೆಗೆ ಪರಿಚಯವಾಗಿ ಪ್ರೇಮಾಂಕುರವಾಗಿದೆ. ನಂತರ ತನ್ನ ಮಾಹಿತಿ ಬಚ್ಚಿಟ್ಟು ವಿವಾಹವಾಗಿದ್ದ. 6 ತಿಂಗಳ ನಂತರ ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಪೊಲೀಸರ ದಿಕ್ಕು ತಪ್ಪಿಸಲು ತನ್ನದೇ ಹೆಸರಿನಲ್ಲಿ ಎರಡೆರಡು ವಿಮಾನದ ಟಿಕೆಟ್ ಬುಕ್ ಮಾಡಿದ್ದ. ಎರಡೆರಡು ಓಯೋ ರೂಂ ಬುಕ್ ಮಾಡ್ತಿದ್ದ ಆರೋಪಿ ಹೊಸೈನ್, ಒಂದು ಕಡೆ ಚೆಕ್ ಇನ್ ಮಾಡಿ ಮತ್ತೊಂದು ಕಡೆ ವಾಸ್ತವ್ಯ ಹೂಡುತ್ತಿದ್ದ. ಆಗಾಗ ಮೊಬೈಲ್ ಆನ್ ಮಾಡಿ ಆಫ್ ಮಾಡ್ತಿದ್ದ. ಪೊಲೀಸರು ಬರೋದ್ರೊಳಗೆ ಮಿಂಚಿನಂತೆ ಮಾಯವಾಗ್ತಿದ್ದ.
ಕೊನೆಗೂ ಪಶ್ಚಿಮ ಬಂಗಾಳದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಈಶಾನ್ಯ ವಿಭಾಗ ಡಿಸಿಪಿ ಸಿಕೆ ಬಾಬಾ, ಆರೋಪಿಯ ಹೆಡೆಮುರಿಕಟ್ಟಿದ್ದಾರೆ. ಆರೋಪಿ ಬಾಂಗ್ಲಾ ಪ್ರವೇಶ ಮಾಡಿದ್ದೇ ಆಗಿದ್ದಿದ್ದರೆ ಆತನ ಬಂಧನ ಕಷ್ಟವಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k