ಮುಂಬೈ: ಬಾಲಿವುಡ್‍ನ ಕ್ಯೂಟ್ ಸ್ಟಾರ್ ಅಂತಾ ಕರೆಸಿಕೊಳ್ಳುವ ವರುಣ್ ಧವನ್ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ನೋಡುಗರು ವಾವ್.! ಅಂತಾ ಕಮೆಂಟ್ ಹಾಕ್ತಿದ್ದಾರೆ.
31 ವರ್ಷದ ವರುಣ್ ಧವನ್ ‘ಸ್ಟೂಡೆಂಟ್ ಆಫ್ ದಿ ಇಯರ್’ ಸಿನಿಮಾದ ಮೂಲಕ ತಮ್ಮ ಸಿನಿ ಕೆರಿಯರ್ ಆರಂಭಿಸಿದ್ರು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ಮಾಡುತ್ತಾ ಮನೆ ಮಾತಾಗಿದ್ದಾರೆ. ಸದ್ಯ ವರುಣ್ ಧವನ್ ಕಳಂಕ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿದ್ದು, ಈ ಹಿನ್ನೆಲೆಯಲ್ಲಿ ದೇಹವನ್ನು ಹುರಿಗೊಳಿಸಲು ಜಿಮ್‍ನಲ್ಲಿ ಕಸರತ್ತು ಮಾಡುತ್ತಿದ್ದಾರೆ.
ಇತ್ತೀಚೆಗೆ ವರುಣ್ ಧವನ್ ಅಭಿನಯದ ‘ಅಕ್ಟೋಬರ್’ ಚಿತ್ರ ತೆರೆಕಂಡಿತ್ತು. ಸುಂದರ ಪ್ರೇಮದ ಎಳೆಯನ್ನು ಹೊಂದಿದ್ದ ಅಕ್ಟೋಬರ್ ಸಿನಿಮಾದಲ್ಲಿ ಸರಳ ಹಾಗು ಮಧ್ಯಮ ವರ್ಗz ಯುವಕನ ಪಾತ್ರದಲ್ಲಿ ನಟಿಸಿದ್ದರು. ಇತ್ತ ಅನುಷ್ಕಾ ಶರ್ಮಾ ಜೊತೆ ‘ಸೂಯಿ ಧಾಗಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎರಡೂ ಚಿತ್ರಗಳಲ್ಲಿ ಮಧ್ಯಮ ವರ್ಗದ ಯುವಕನ ಪಾತ್ರದಲ್ಲಿ ಬಣ್ಣ ಹಚ್ಚಿದ್ದರಿಂದ ದೇಹವನ್ನು ಸಪೂರವಾಗಿಸಿದ್ದರು.
ಕಳಂಕ್ ಸಿನಿಮಾಗಾಗಿ ಸಿಕ್ಸ್ ಪ್ಯಾಕ್ ಗಾಗಿ ಮೊರೆ ಹೋಗಿದ್ದಾರೆ. ಮಾಧುರಿ ದೀಕ್ಷಿತ್, ಸಂಜಯ್ ದತ್, ಸೋನಾಕ್ಷಿ ಸಿನ್ಹಾ ಮತ್ತು ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಗಣವನ್ನು ಕಳಂಕ್ ಚಿತ್ರತಂಡ ಹೊಂದಿದೆ. ಧರ್ಮ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು, ಅಭಿಷೇಕ್ ವರ್ಮಾ ನಿರ್ದೇಶನದಲ್ಲಿ ಕಳಂಕ್ ಮೂಡಿ ಬರಲಿದೆ.
https://www.instagram.com/p/BikFObjA-G0/?taken-by=varundvn
https://www.instagram.com/p/Bhsust3AifW/?taken-by=varundvn