ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ (Delhi Liquor Scam) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳ್ಳಪಟ್ಟಿರುವ ಬಿಆರ್ಎಸ್ ನಾಯಕಿ, ತೆಲಂಗಾಲ ಪರಿಷತ್ ಸದಸ್ಯೆ ಕೆ.ಕವಿತಾಗೆ (K Kavitha) ಜಾಮೀನು ನೀಡಲು ದೆಹಲಿ ರೋಸ್ ಅವೆನ್ಯೂ ಕೋರ್ಟ್ ನಿರಾಕರಿಸಿದೆ. ಏಪ್ರಿಲ್ 4 ರಂದು ಆದೇಶ ಕಾಯ್ದಿರಿಸಿದ ನ್ಯಾ.ಕಾವೇರಿ ಬವೇಜಾ ಅವರಿಂದು ತೀರ್ಪು ಪ್ರಕಟಿಸಿದ್ದಾರೆ.
Advertisement
ಕಳೆದ ಮಾರ್ಚ್ 15 ರಂದು ಹೈದರಾಬಾದ್ನಲ್ಲಿ ಶೋಧ ನಡೆಸಿದ ಬಳಿಕ ಜಾರಿ ನಿರ್ದೇಶನಾಲಯ (ED) ಕೆ.ಕವಿತಾ ಅವರನ್ನ ಬಂಧಿಸಿತ್ತು. ವಿಚಾರಣೆ ಬಳಿಕ ಅವರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸದ್ಯ ಕವಿತಾ ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಇದೇ ಪ್ರಕರಣದಲ್ಲಿ ಬಂಧನಕ್ಕೊಳ್ಳಪಟ್ಟಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಮಾಜಿ ಡಿಸಿಎಂ ಮನೀಶ್ ಸಿಸೋಡಿಯ ಇದೇ ಜೈಲಿನಲ್ಲಿದ್ದಾರೆ. ಇದನ್ನೂ ಓದಿ: ಸಾಕ್ಷಿಗೆ ಸಂಗ್ರಹಿಸಿದ್ದ 10 ಕೆಜಿ ಗಾಂಜಾ, 9 ಕೆಜಿ ಭಾಂಗ್ ಇಲಿಗಳೇ ತಿಂದಿವೆ – ಕೋರ್ಟ್ಗೆ ವರದಿ ಸಲ್ಲಿಕೆ!
Advertisement
Advertisement
ದೆಹಲಿಯಲ್ಲಿ ಜಾರಿ ಮಾಡಲು ಹೊರಟಿದ್ದ ಹೊಸ ಮಧ್ಯ ನೀತಿಯಲ್ಲಿ ಕೆಲವು ಮದ್ಯ ಲಾಬಿ ಗುಂಪುಗಳಿಗೆ ಲಾಭದಾಯಕವಾಗುವ ರೀತಿಯಲ್ಲಿ ಯೋಜನೆ ರೂಪಿಸುವ ಪಿತೂರಿಯ ಭಾಗವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮದ್ಯದ ವ್ಯಾಪಾರಿಗಳ ʻದಿ ಸೌತ್ ಗ್ರೂಪ್ʼ ಲಾಬಿಗೆ ಕವಿತಾ ಸಂಪರ್ಕ ಹೊಂದಿದ್ದಾರೆ ಎಂದು ಇಡಿ ಕೋರ್ಟ್ ವಿಚಾರಣೆ ವೇಳೆ ಹೇಳಿದೆ. ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ತೆಲಂಗಾಣ ಮಾಜಿ ಸಿಎಂ ಪುತ್ರಿ ಕವಿತಾ
Advertisement
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ವಿಜಯ್ ನಾಯರ್ ಶರತ್ ರೆಡ್ಡಿ, ಕೆ ಕವಿತಾ ಮತ್ತು ಮಾಗುಂಟ ಶ್ರೀನಿವಾಸುಲು ಅವರ ನಿಯಂತ್ರಣದಲ್ಲಿರುವ ʻದಿ ಸೌತ್ ಗ್ರೂಪ್ʼನಿಂದ ಎಎಪಿ ನಾಯಕರ ಪರವಾಗಿ ಕನಿಷ್ಠ 100 ಕೋಟಿ ರೂ.ಗಳಷ್ಟು ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕೆ. ಕವಿತಾ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ತೆಲಂಗಾಣದಲ್ಲಿ ನೆಲೆ ಸಾಧಿಸಲು ಕೇಂದ್ರ ಸರ್ಕಾರ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನವ್ರೂ ಬೇಕಾದ್ರೆ ಮೋದಿ ಫೋಟೊ ಬಳಸಿ ಪ್ರಚಾರ ಮಾಡ್ಲಿ: ರಾಧಾ ಮೋಹನ್ ದಾಸ್ ಅಗರ್ವಾಲ್
ಕೆ.ಕವಿತಾ ಅವರ ಮೇಲಿನ ಆರೋಪಗಳೇನು?
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ AAP ನಾಯಕ ವಿಜಯ್ ನಾಯರ್ ಅವರು ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳ ನಿಯಂತ್ರಣದಲ್ಲಿರುವ ‘ದಕ್ಷಿಣ ಗುಂಪಿನಿಂದ’ 100 ಕೋಟಿ ರೂಪಾಯಿಗಳನ್ನು ಕಿಕ್ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ. ಕವಿತಾ ಅವರು 100 ಕೋಟಿ ರೂಪಾಯಿ ಕಿಕ್ಬ್ಯಾಕ್ ಪಾವತಿಸಿದ ಮದ್ಯದ ಕಾರ್ಟೆಲ್ ‘ದಿ ಸೌತ್ ಗ್ರೂಪ್’ ನ ಭಾಗವಾಗಿದ್ದರು ಎಂದು ಇಡಿ ಆರೋಪಿಸಿದೆ.