ಬೀದರ್: ಅಕ್ರಮವಾಗಿ ವಿವಿಧ ಪ್ರತಿಷ್ಠಿತ ಬ್ರ್ಯಾಂಡ್‌ನ ಖಾಲಿ ಬಾಟಲ್‌ಗಳಲ್ಲಿ ಕಲಬೆರಕೆ ಮದ್ಯ ತುಂಬಿ ಮಾರಾಟ ಮಾಡುತ್ತಿದ್ದ ದಂಧೆಗೆ ಬೀದರ್ (Bidar) ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಬ್ರೇಕ್ ಹಾಕಿದ್ದಾರೆ.ಇದನ್ನೂ ಓದಿ: ಸರ್ಕಾರಿ ಶಾಲೆಗೆ 25 ಎಕರೆ ದಾನ ಮಾಡಲು ಮಹಾರಾಜರ ವಂಶಸ್ಥರಾ? – ಡಿಕೆಶಿ ವಿರುದ್ಧ ಹೆಚ್‌ಡಿಕೆ ಕೆಂಡ
ಅಬಕಾರಿ ಉಪ ಅಧೀಕ್ಷಕರಾದ ಆನಂದ್ ಉಕ್ಕಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಡಿಫೆನ್ಸ್ ಸರ್ವಿಸ್ ಎಂದು ಇರುವ ಪ್ರತಿಷ್ಠಿತ ಬ್ರಾಂಡ್‌ನ ಖಾಲಿ ಬಾಟಲ್‌ಗಳಲ್ಲಿ ಕಲಬೆರಕೆ ಮದ್ಯ ತುಂಬಿ ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿ, ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬೀದರ್ ನಗರದ ಲೇಬರ್ ಕಾಲೋನಿಯಲ್ಲಿರುವ ಅಂಬದಾಸ್ ಇಸ್ಮಾಯಿಲ್ ಮನೆ ಮೇಲೆ ದಾಳಿ ಮಾಡಿ 40 ಸಾವಿರ ರೂ.ಗೂ ಅಧಿಕ ಕಲಬೆರಕೆ ಮದ್ಯ ಜಪ್ತಿ ಮಾಡಿದ್ದಾರೆ. ಕಲಬೆರಕೆ ಹಾಗೂ ಪ್ರತಿಷ್ಠಿತ ಬ್ರಾಂಡ್‌ನ ಖಾಲಿ ಬಾಟಲ್‌ಗಳ ಜಪ್ತಿಯ ಜೊತೆಗೆ ಅಕ್ರಮ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಇದನ್ನೂ ಓದಿ: ಮೇಲೂರು ಕೆರೆಯಲ್ಲಿ ತಾಯಿ-ಮಗನ ಶವ ಪತ್ತೆ; ಆತ್ಮಹತ್ಯೆ ಶಂಕೆ