ಬೀದರ್: ಮನೆಯಲ್ಲಿಯೇ ಚಿಕ್ಕ ದೇವಾಲಯವನ್ನು ನಿರ್ಮಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನಟೋರಿಯಸ್ ತಂಡವನ್ನು ಭೇದಿಸುವಲ್ಲಿ ಅಬಕಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಭಾಲ್ಕಿ ಪಟ್ಟಣದ ಬಸವನಗರ ಬಡಾವಣೆಯ ರೇಣುಕಾ ಜಲ್ದೆಯು ಮನೆಯಲ್ಲೇ ದೇವಾಲಯ ನಿರ್ಮಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ನಶೆ ಏರಿಸುವ ಡ್ರಗ್ಸ್ ಮಾರಾಟಮಾಡುತ್ತಿದ್ದಳು. ಇದರ ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಿಲ್ಲಾಧಿಕಾರಿ ಶಿವಪ್ರಕಾಶ್ ಹಾಗೂ ಡ್ರಗ್ಸ್ ನಿಯಂತ್ರಣ ಅಧಿಕಾರಿ ಶರಣಬಸಪ್ಪ ಸೇರಿದಂತೆ ಅಧಿಕಾರಿಗಳ ತಂಡ ಭಾನುವಾರ ದಾಳಿ ನಡೆಸಿದೆ.
Advertisement
Advertisement
ದಾಳಿ ವೇಳೆ ಮನೆಯಲ್ಲಿ ಬಚ್ಚಿಟ್ಟಿದ್ದ ಅಪಾರ ಪ್ರಮಾಣದ ಮತ್ತೇರಿಸುವ ಮಾತ್ರೆಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ರೇಣುಕಾ ಜಲ್ದೆಯನ್ನು ಬಂಧಿಸಿದ್ದು, ದಂಧೆಯ ಪ್ರಮುಖ ರೂವಾರಿ ಆಕೆಯ ಗಂಡ ಸಂಜೀವ ಕುಮಾರನಿಗಾಗಿ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದಾರೆ.
Advertisement
ಪತ್ತೆಯಾಗಿದ್ದು ಹೇಗೆ?
ಮನೆಯಲ್ಲೇ ಸಣ್ಣದಾದ ದೇವಸ್ಥಾನ ನಿರ್ಮಿಸಿಕೊಂಡಿದ್ದ ದಂಧೆಕೋರರು, ಅಂಗಳದಲ್ಲಿನ ತುಳಸಿ ಗಿಡದ ಪಕ್ಕದ ಪೊದೆಯೊಂದರಲ್ಲಿ ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡಿದ್ದರು. ದರ್ಶನದ ನೆಪ ಹೇಳಿ ಬರುತ್ತಿದ್ದ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತಿತ್ತು. ಮೇಲ್ನೋಟಕ್ಕೆ ಸ್ಥಳೀಯರಿಗೆ ದೇವಸ್ಥಾನಕ್ಕೆ ವಿದ್ಯಾರ್ಥಿಗಳು ಬಂದು ಹೋಗುತ್ತಿದ್ದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ದಿನೇ ದಿನೇ ವಿದ್ಯಾರ್ಥಿಗಳು ಹಾಗೂ ಯುವಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv