ಬೆಂಗಳೂರು: ರಾಜ್ಯದಲ್ಲಿ ಈಗ ಮಾಜಿ ಸಿಎಂ ವರ್ಸಸ್ ಹಾಲಿ ಸಿಎಂಗಳ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಿದ್ದರಾಮಯ್ಯರ ಸಿಟ್ಟಿಗೆ ಬಲಿಯಾಗಿ ಎತ್ತಂಗಡಿಯಾಗಿದ್ದ ಅಬಕಾರಿ ಆಯುಕ್ತ ವಿ.ಯಶವಂತ್‍ಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.
Advertisement
ಸಿದ್ದರಾಮಯ್ಯ ಅಸಮಾಧಾನದ ನಡುವೆಯೂ ಯಶವಂತ್ ಅವರಿಗೆ ಮೈಸೂರು ಹಿಡಿತ ಕೈಗೆ ಕೊಡಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕ್ಷೀರಭಾಗ್ಯದ ಬಗ್ಗೆ ಮಾಹಿತಿ ಕೇಳಿದ್ದರು. ಚಿಕ್ಕಮಗಳೂರು ಜಿಲ್ಲೆಯ ಡಿಸಿಯಾಗಿದ್ದ ವಿ.ಯಶವಂತ್ ಅವರಿಗೆ ಕ್ಷೀರಭಾಗ್ಯದ ಮಾಹಿತಿ ಗೊತ್ತಿರಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಸಿದ್ದರಾಮಯ್ಯ, ಪ್ರಗತಿ ಪರಿಶೀಲನಾ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ಬಳಿಕ ಚಿಕ್ಕಮಗಳೂರು ಜಿಲ್ಲೆಯಿಂದ ಎತ್ತಂಗಡಿ ಮಾಡಿ ಸರಿಯಾದ ಹುದ್ದೆಗಳಿಂದ ದೂರ ಇಟ್ಟಿದ್ದರು. ಈಗ ಅದೇ ಅಧಿಕಾರಿಗೆ ಆಯಾಕಟ್ಟಿನ ಸ್ಥಳಗಳಿಗೆ ಹುದ್ದೆ ಭಾಗ್ಯ ಸಿಕ್ಕಿದೆ.
Advertisement
Advertisement
ಹೆಚ್‍ಡಿಕೆ ಸರ್ಕಾರ ಬಂದ ಬಳಿಕ ಅಬಕಾರಿ ಆಯುಕ್ತರಾಗಿ ವಿ.ಯಶವಂತ್‍ಗೆ ಹುದ್ದೆ ನೀಡಲಾಗಿದೆ. ಹೆಚ್‍ಡಿಕೆ ಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv