ನವದೆಹಲಿ: ದೆಹಲಿ ಮೆಟ್ರೋ (Delhi Metro) ರೈಲುಗಳಲ್ಲಿ ಪ್ರಯಾಣಿಕರು 2 ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು (Alcohol Bottle) ಪ್ರಯಾಣದ ವೇಳೆ ಸಾಗಿಸಲು ಅನುಮತಿ ನೀಡಿದ ಡಿಎಂಆರ್‌ಸಿ (DMRC) ನಿರ್ಧಾರಕ್ಕೆ ದೆಹಲಿ ಸರ್ಕಾರದ ಅಬಕಾರಿ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಅಬಕಾರಿ ನಿಯಮಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆ ನಿಯಮ ಬದಲಿಸಲು ಅದು ಸೂಚಿಸಿದೆ.
ಅಬಕಾರಿ ಕಾಯ್ದೆಯ ಪ್ರಕಾರ 1 ಸೀಲ್ ಮಾಡಿದ ಮದ್ಯದ ಬಾಟಲಿಯ ರಮ್, ವೋಡ್ಕಾ ಮತ್ತು ವಿಸ್ಕಿಯನ್ನು ಮಾತ್ರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಬಹುದು. ಆದರೆ ಮೆಟ್ರೋದಲ್ಲಿ 2 ಬಾಟಲಿ ಸಾಗಿಸಲು ಅನುಮತಿ ನೀಡಿದೆ.
Advertisement
Advertisement
ದೆಹಲಿಯಲ್ಲಿ ಸಂಚರಿಸುವ ಮೆಟ್ರೋ ಎನ್‌ಸಿಆರ್ ನಗರಗಳಾದ ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮ ಮತ್ತು ಫರಿದಾಬಾದ್ ನಡುವೆ ಸಂಚರಿಸುತ್ತಿದೆ. ಇದು ಹರಿಯಾಣ ಮತ್ತು ಉತ್ತರ ಪ್ರದೇಶಕ್ಕೆ ಸಂಪರ್ಕಿಸುವ ಹಿನ್ನೆಲೆ ರಾಜ್ಯದ ಅಬಕಾರಿ ನಿಯಮಗಳ ಉಲ್ಲಂಘನೆಯಾಗಲಿದೆ ಎಂದು ಆಕ್ಷೇಪಿಸಿದೆ.
Advertisement
ಅಲ್ಲದೆ ದೆಹಲಿಯಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ಮದ್ಯವನ್ನು ಮಾರಾಟ ಮಾಡುವಂತಿಲ್ಲ. ಆದರೆ ಗುರುಗ್ರಾಮದಂತಹ ನಗರಗಳಲ್ಲಿ 18 ವರ್ಷ ವಯಸ್ಸಿನವರಿಗೆ ಮದ್ಯವನ್ನು ಮಾರಾಟ ಮಾಡಬಹುದು. ಮೆಟ್ರೋ ಹೊಸ ನಿಯಮದಿಂದ ಅಪ್ರಾಪ್ತ ವಯಸ್ಕರು ಇತರ ಸ್ಥಳಗಳಿಂದ ಮೆಟ್ರೋ ರೈಲುಗಳ ಮೂಲಕ ಮದ್ಯವನ್ನು ತಂದು ದೆಹಲಿಯಲ್ಲಿ ಸೇವಿಸಬಹುದು ಎಂದು ಅಧಿಕಾರಿಗಳು ಆರೋಪಿಸಿದರು. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು ಬಾಟಲಿಗಳನ್ನು ತಂದರೆ ಅಬಕಾರಿ ನಿಯಮ ಉಲ್ಲಂಘನೆಯಾಗದಂತೆ 2 ಮದ್ಯದ ಬಾಟಲಿಗಳನ್ನು ಒಯ್ಯುವ ನಿಯಮವನ್ನು ಬದಲಾಯಿಸುವಂತೆ ದೆಹಲಿ ಮೆಟ್ರೋ ರೈಲು ನಿಗಮಕ್ಕೆ ನೋಟಿಸ್ ಕಳುಹಿಸಲಾಗಿದೆ ಎಂದು ಹೇಳಿದರು.
ಅಬಕಾರಿ ಇಲಾಖೆಯ ಕಾಳಜಿಯ ಅನುಗುಣವಾಗಿ ಪರೀಕ್ಷಿಸಲು ಭದ್ರತಾ ಏಜೆನ್ಸಿಗೆ ತಿಳಿಸಲಾಗುವುದು. ಪ್ರಯಾಣಿಕರು ಗಡಿಯಾಚೆಗಿನ ಸಾಗಣೆಯ ಸಮಯದಲ್ಲಿ ಮದ್ಯವನ್ನು ಸಾಗಿಸಲು ಸಂಬಂಧಿಸಿದ ರಾಜ್ಯ ಅಬಕಾರಿ ಇಲಾಖೆಯ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ನಿರೀಕ್ಷಿಸಲಾಗುತ್ತಿದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲಿದ್ಯಾ ರೂಪಾಯಿ?
Web Stories