DistrictsKarnatakaKoppalLatestMain Post

ದಡೇಸುಗೂರು ಪ್ರಶ್ನೆಗೆ ಉತ್ತರಿಸಲು ಅಬಕಾರಿ ಡಿಸಿ ತಬ್ಬಿಬ್ಬು

ಕೊಪ್ಪಳ: ಜಿಲ್ಲಾದ್ಯಂತ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ದಂಧೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲೂ ಸದ್ದು ಮಾಡಿದೆ. ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ, ಅಬಕಾರಿ ಡಿಸಿ ಸೆಲೀನಾಗೆ ಶಾಸಕ ಬಸವರಾಜ್ ದಡೇಸುಗೂರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಹೋಟೆಲ್, ಪಾನ್ ಶಾಪ್‌ನಲ್ಲೂ ಮದ್ಯ ಮಾರಾಟವಾಗುತ್ತಿದೆ. ಯಾವ ಬಾರ್ ಮಾಲೀಕರ ಮೇಲೆ ಎಷ್ಟು ಕೇಸ್ ಮಾಡಿದ್ದೀರಿ? ನೀವು, ನಿಮ್ಮ ಇಲಾಖೆ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ನನಗೆ ಗೊತ್ತು. ನೀವು ಕಾನೂನು ಪ್ರಕಾರ ಕೆಲಸ ಮಾಡಿದ್ರೆ ನಾನು ಈ ಸಭೆಯಲ್ಲಿ ಮಾತಾನಾಡುವ ಅಗತ್ಯ ಇರಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ರಹಸ್ಯ ಬಯಲು

ಬಿಟ್ಟು ಬಿಡದೇ ತರಾಟೆ ತೆಗೆದುಕೊಂಡ ಶಾಸಕ ದಡೇಸುಗೂರು, ನಿಮಗೆ ತಿಂಗಳ ಸೆಟ್ಲ್ಮೆಂಟ್ ಇದೆ ಎನ್ನುವುದು ನನಗೆ ತಿಳಿದಿದೆ ಎಂದು ಗಂಭೀರ ಆರೋಪ ಮಾಡಿದರು. ದಡೇಸುಗೂರು ಪ್ರಶ್ನೆಗೆ ಉತ್ತರಿಸಲು ಅಬಕಾರಿ ಡಿಸಿ ತಬ್ಬಿಬ್ಬಾಗಿದ್ದು ಕಂಡು ಬಂತು. ಇದನ್ನೂ ಓದಿ: 2,500 ಕೋಟಿ ರೂ. ತನಿಖೆಗೆ ಭಾಸ್ಕರ್ ರಾವ್ ಆಗ್ರಹ

ಈ ವೇಳೆ ಧ್ವನಿಗೂಡಿಸಿದ ಕೆಡಿಪಿ ನಾಮಿನೇಟ್ ಸದಸ್ಯ ಗುರುಗೌಡ, ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಯುವಕರು ಹಾಳಾಗುತ್ತಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published.

Back to top button