ಬೆಂಗಳೂರು: ರಾಜ್ಯದ ಜನ ಎಣ್ಣೆ ಹಾಕುವುದನ್ನು ಯಾಕೆ ಕಡಿಮೆ ಮಾಡಿದ್ದಾರೆ. ತನಿಖೆ ಮಾಡಿ ಮೂರು ದಿನದೊಳಗೆ ವರದಿ ಕೊಡಬೇಕು ಎಂದು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಬಿಯರ್ ಮಾರಾಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗಬೇಕು. ಆದರೆ ಈ ವರ್ಷ ಮಾರಾಟದ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಇದ್ರಿಂದ ತಲೆಕೆಡಿಸಿಕೊಂಡ ಅಬಕಾರಿ ಆಯುಕ್ತರು ಜಂಟಿ ಆಯುಕ್ತರಿಗೆ ಮೂರು ದಿನದೊಳಗೆ ವಿಶ್ಲೇಷಣಾ ವರದಿ ಕೊಡುವಂತೆ ಸೂಚಿಸಿದ್ದಾರೆ.
Advertisement
Advertisement
ಈ ವರದಿ ಹಾಸ್ಯಾಸ್ಪದವಾಗಿದ್ದು, ನಮಗೆ ಬಿಯರ್ ಅನ್ನು ಅಬಕಾರಿ ಇಲಾಖೆ ಪೂರೈಸುತ್ತಿರಲಿಲ್ಲ. ಸೇಲ್ ಆಗುವುದು ಹೇಗೆ ಎಂದು ಬಾರ್ ಮಾಲೀಕರ ಸಂಘದ ಕರುಣಾಕರ್ ಹೆಗ್ಡೆ ಅವರು ಟಾಂಗ್ ಕೊಟ್ಟಿದ್ದಾರೆ.
Advertisement
ಅಬಕಾರಿ ಇಲಾಖೆ ಬೇರೆ ಮದ್ಯ ಪೂರೈಕೆ ಮಾಡುತ್ತದೆ. ಏಕೆಂದರೆ ಆದಾಯದ ಪ್ರಮಾಣ ಹೆಚ್ಚಾಗಿರುತ್ತೆ. ಬಿಯರ್ ಸೇಲ್‍ನಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯ ಕಡಿಮೆಯಿರುತ್ತದೆ. ಹೀಗಾಗಿ ಪೂರೈಕೆ ಕಡಿಮೆ ಮಾಡಿದೆ. ನಾವು ಬಿಯರ್ ಪೂರೈಕೆಗೆ ದುಂಬಾಲು ಬಿದರೂ ಕಳುಹಿಸುತ್ತಿರಲಿಲ್ಲ ಎಂದು ಬಾರ್ ಮಾಲೀಕರು ಹೇಳಿದ್ದಾರೆ.