ತಿರುವನಂತಪುರಂ: ಕೇಂದ್ರ ಅಬಕಾರಿ ಮತ್ತು ಜಿಎಸ್‌ಟಿ ಇಲಾಖೆಯ ಹೆಚ್ಚುವರಿ ಆಯುಕ್ತ, ಅವರ ತಾಯಿ ಹಾಗೂ ಸಹೋದರಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದ ಘಟನೆ ಕೇರಳದಲ್ಲಿ (Kerala) ನಡೆದಿದೆ.
ಮನೀಶ್ ವಿಜಯ್ ಮೃತ ಅಧಿಕಾರಿ. ಮೂಲತಃ ಜಾರ್ಖಂಡ್ (Jharkhand) ಮೂಲದ ಮನೀಶ್ ವಿಜಯ್ ಕುಟುಂಬ ಕೇರಳದ ಎರ್ನಾಕುಲಂ (Ernakulam) ಜಿಲ್ಲೆಯ ಕಕ್ಕನಾಡ್ ಕಸ್ಟಮ್ಸ್ ಕ್ವಾಟ್ರಸ್‌ನಲ್ಲಿ ವಾಸಿಸುತ್ತಿದ್ದರು. ಮನೀಶ್ ವೈಯಕ್ತಿಕ ಕಾರಣಕ್ಕೆ ನಾಲ್ಕು ದಿನಗಳ ರಜೆ ತೆಗೆದುಕೊಂಡಿದ್ದರು. ನಾಲ್ಕು ದಿನ ಕಳೆದ ಬಳಿಕವೂ ಕೆಲಸಕ್ಕೆ ಬಾರದ ಕಾರಣ ಮನೀಶ್ ಅವರ ಸಹೋದ್ಯಗಿಗಳು ಅವರ ಮನೆಗೆ ತೆರಳಿದ ಸಂದರ್ಭ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ತಕ್ಷಣವೇ ಸಹೋದ್ಯೋಗಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದು ಆತ್ಮಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ನೇಹಿತನಿಂದಲೇ ಗೆಳತಿ ಮೇಲೆ ಅತ್ಯಾಚಾರ
Advertisement
Advertisement
ಮನೀಶ್ ಮತ್ತು ಅವರ ಸಹೋದರಿ ಶಾಲಿನಿ ಪ್ರತ್ಯೇಕ ಕೊಠಡಿಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ತಾಯಿ ಶಕುಂತಲಾ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ತಾಯಿಯನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಹೂವುಗಳಿಂದ ಮುಚ್ಚಲಾಗಿತ್ತು. ಈ ಹಿನ್ನೆಲೆ ತಾಯಿಯನ್ನು ಕೊಂದು ಮಕ್ಕಳಿಬ್ಬರು ನೇಣಿಗೆ ಶರಣಾಗಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ಇದನ್ನೂ ಓದಿ: ಬಸ್, ಮೆಟ್ರೋ ದರ ಏರಿಕೆ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆ ಏರಿಕೆ! – ತೆಂಗಿನ ಎಣ್ಣೆ ದರ ದಿಢೀರ್ ಏರಿಕೆಯಾಗಿದ್ದು ಯಾಕೆ?
Advertisement
ಕೊಚ್ಚಿ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ ಮಾತನಾಡಿ, ಮೃತದೇಹಗಳು ಕೊಳೆಯಲು ಪ್ರಾರಂಭಿಸಿವೆ. ವಿಧಿವಿಜ್ಞಾನ ಪರೀಕ್ಷೆಯ ನಂತರವೇ ಅವರು ಯಾವಾಗ ಸತ್ತರು ಎಂದು ಹೇಳಲು ಸಾಧ್ಯ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: PUBLiC TV Impact; ಸರ್ಕಾರದ ಉಚಿತ ಪುಸ್ತಕಗಳು ಬೀದಿಪಾಲು – ಶಾಲಾ ಮುಖ್ಯೋಪಾಧ್ಯಾಯ ಅಮಾನತು
Advertisement
ತನಿಖೆ ವೇಳೆ ಕೋಣೆಯಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ಅವರ ಸಹೋದರಿ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಸಾವಿನ ಬಗ್ಗೆ ಸಹೋದರಿಗೆ ತಿಳಿಸಬೇಕು ಎಂದು ಬರೆಯಲಾಗಿದೆ. ಸದ್ಯ ಮನೀಶ್ ಅವರ ಸಹೋದರಿ ವಿದೇಶದಿಂದ ಬಂದ ನಂತರ ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಘಟನೆ ಸಂಬಂಧ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಕಾಡ್ಗಿಚ್ಚು
ಮನೀಶ್ ಈ ಹಿಂದೆ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಪ್ರಿವೆಂಟಿವ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಒಂದೂವರೆ ವರ್ಷಗಳ ಹಿಂದೆ ಕೊಚ್ಚಿಗೆ ವರ್ಗಾವಣೆಗೊಂಡರು. ಅವರ ತಾಯಿ ಮತ್ತು ಸಹೋದರಿ ಕೆಲವು ತಿಂಗಳುಗಳಿಂದ ಅವರೊಂದಿಗೆ ನೆಲೆಸಿದ್ದರು. ಪೊಲೀಸರ ಪ್ರಕಾರ, ಶಾಲಿನಿ ಜಾರ್ಖಂಡ್‌ನಲ್ಲಿ ಕಾನೂನು ಪ್ರಕರಣವೊಂದನ್ನು ಎದುರಿಸುತ್ತಿದ್ದರು. ಇದಕ್ಕಾಗಿ ಮನೀಶ್ ಕೆಲಸದಿಂದ ರಜೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಬೌಂಡರಿ ಚಚ್ಚಿ ಆರ್‌ಸಿಬಿ ಗೆಲುವು ಕಸಿದ 16ರ ಹುಡುಗಿ – ಯಾರು ಈ ಕಮಲಿನಿ? ಮುಂಬೈ 1.6 ಕೋಟಿ ನೀಡಿದ್ದು ಯಾಕೆ?
ಶಾಲಿನಿ 2006ರ ಜಾರ್ಖಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ (ಜೆಪಿಎಸ್‌ಸಿ) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಈ ಹಿನ್ನೆಲೆ ಅವರನ್ನು ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಿಸಲಾಯಿತು ಎಂದು ವರದಿಗಳು ತಿಳಿಸಿವೆ. ನಂತರ ಅವರ ರ‍್ಯಾಂಕ್ ಅನ್ನು ಪ್ರಶ್ನಿಸಿ ರದ್ದುಗೊಳಿಸಲಾಯಿತು. ಇದರಿಂದ ಶಾಲಿನಿ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು. 2024ರಲ್ಲಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸುವ ಸಲುವಾಗಿ ವಿಚಾರಣಾ ಪ್ರಕ್ರಿಯೆಗಳು ನಡೆಯುತ್ತಿದ್ದವು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮಂಡ್ಯ| ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ಕೋಟಿ ಕೋಟಿ ವಂಚನೆ