ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಕೋಟಿ ಕೋಟಿ ಲಂಚಕ್ಕೆ (Excise Bribery) ಬೇಡಿಕೆಯಿಟ್ಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಲೋಕಾಯುಕ್ತ ಎಫ್‌ಐಆರ್‌ನಲ್ಲಿರುವ (Lokayukta FIR) ಮಿನಿಸ್ಟರ್ ಪದ ಅಬಕಾರಿ ಸಚಿವರಿಗೆ ಸಂಕಷ್ಟ ತರುತ್ತಾ? ಅನ್ನೋದು ತೀವ್ರ ಕುತೂಹಲ ಹೆಚ್ಚಿಸಿದೆ.
ಬಾರ್ ಲೈಸೆನ್ಸ್ (Bar License) ಕೊಡಲು ಅಬಕಾರಿ ಇಲಾಖೆ ಅಧಿಕಾರಿಗಳು ಕೋಟಿ ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಆರೋಪ ಜೋರಾಗಿ ಸದ್ದು ಮಾಡ್ತಿದೆ. ಸಿಎಲ್ 7 ಬಾರ್ ಲೈಸೆನ್ಸ್ ಕೊಡಲು ಮುಂಗಡವಾಗಿ 50 ಲಕ್ಷ ಲಂಚದ ಹಣ ಪಡೆಯುವಾಗ ಅಬಕಾರಿ ಇಲಾಖೆ ಡಿಸಿ ಹಾಗೂ ಎಸ್ಪಿ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಈಗಾಗಲೇ ಅರೆಸ್ಟ್ ಮಾಡಿದ್ದಾರೆ. ಘಟನೆ ಸಂಬಂಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಲಂಚದ ಹಣ ಯಾರಿಗೆಲ್ಲ ಕೊಡಬೇಕಾಗುತ್ತೆ ಅನ್ನೋದರ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ ಲಂಚ ಪ್ರಕರಣಕ್ಕೆ ಟ್ವಿಸ್ಟ್ – ಸಚಿವ ತಿಮ್ಮಾಪುರ್ ವಿರುದ್ಧವೇ ಲೋಕಾಯುಕ್ತಕ್ಕೆ ದೂರು!
ಮಿನಿಸ್ಟರ್ ಪದ ʻಎಫ್‌ಐಆರ್ʼನಲ್ಲಿ ಉಲ್ಲೇಖ
ಲೋಕಾಯುಕ್ತ ಎಫ್‌ಐಆರ್‌ನಲ್ಲಿ ಮಿನಿಸ್ಟರ್ ಪದ ಉಲ್ಲೇಖ ಮಾಡಲಾಗಿದೆ. ಬಂಧಿತ ಅಬಕಾರಿ ಡಿಸಿ ಜಗದೀಶ್ ನಾಯಕ್ ಹಾಗೂ ಸೂಪರಿಂಟೆಂಡೆಂಟ್ ತಮ್ಮಣ್ಣ ಅವರಿಂದ ಹಣಕ್ಕೆ ಬೇಡಿಕೆ ಇಡುವಾಗ ಲಂಚದ ಹಣವನ್ನ ಮಿನಿಸ್ಟರ್, ಅಬಕಾರಿ ಇನ್ಸ್‌ಪೆಕ್ಟರ್, ಡಿಸಿ ಕಚೇರಿ, ಅಬಕಾರಿ ಡಿಸಿ ಕಚೇರಿ, ಅಲ್ಲಿಂದ ಕಮೀಷನರ್ ಆಫೀಸಲ್ಲಿ ನಾಲ್ಕು ಟೇಬಲ್, ಜೆ.ಸಿ, ಹೆಚ್ಚುವರಿ ಆಯುಕ್ತರು, ಇಬ್ಬರು ಡಿಸಿ ಗಳಿಗೆ ಲಂಚದ ಹಣ ನೀಡಬೇಕಿರುತ್ತೆ ಎಂದು ದೂರುದಾರನ ಬಳಿ ಮಾತನಾಡಿರುವ ಅಂಶಗಳನ್ನ ಎಫ್‌ಐಆರ್ ಪ್ರತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದನ್ನೂ ಓದಿ: ರಾಮಚಂದ್ರರಾವ್ ರಾಸಲೀಲೆ ಕೇಸ್ – ಇಂಥ ಘಟನೆ ಗೌರವ ತರಲ್ಲ, ಡಿಸ್‌ಮಿಸ್ ಕೂಡ ಆಗಬಹುದು: ಪರಂ ಗರಂ
ಅಂದಹಾಗೆ ಜಿಬಿಎ ವ್ಯಾಪ್ತಿಯಲ್ಲಿ ಸಿಎಲ್ -7 ಲೈಸೆನ್ಸ್ ನೀಡಲು ಅಬಕಾರಿ ಡಿಸಿ ಜಗದೀಶ್ ನಾಯಕ್ ಹಾಗೂ ಸೂಪರಿಂಟೆಂಡೆಂಟ್ ತಮ್ಮಣ್ಣ ನೀಡಲು 80 ಲಕ್ಷ ರೂ.ಗೆ ಲಂಚ ಮಾತನಾಡಿದ್ದರು. ನಂತರ 75 ಲಕ್ಷಕ್ಕೆ ಫಿಕ್ಸ್ ಆಗಿದ್ದ ಹಣದಲ್ಲಿ 50 ಲಕ್ಷ ಮುಂಗಡವಾಗಿ ನೀಡುವಂತೆ ಅಧಿಕಾರಿಗಳು ಒತ್ತಾಯಿಸಿದ್ದ ಆರೋಪವಿದೆ. ಹಣ ನೀಡದಿದ್ದಲ್ಲಿ ನೀವೇ ಹ್ಯಾಂಡಲ್ ಮಾಡ್ಕೊಳ್ಳಿ ಅಂತಾ ಸಬೂಬು ನೀಡಿದ್ದರಂತೆ ಅಧಿಕಾರಿಗಳು. ಅಷ್ಟಕ್ಕೆ ಸುಮ್ಮನಾಗದ ಅಧಿಕಾರಿಗಳು ಅರ್ಜಿ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಬಂದು ಲಂಚದ ಹಣ 1.50 ಕೋಟಿಗೆ ಡಿಮ್ಯಾಂಡ್ ಮಾಡಿದ್ದರಂತೆ.
ಅಲ್ಲದೇ ಮೈಕ್ರೋ ಬೆವರಿಸ್ ಸನ್ನದ್ದು ನೀಡಲು ಮಿನಿಸ್ಟರ್ ವರೆಗೂ ಹೋಗುತ್ತೆ. ಹಾಗಾಗಿ 1.50 ಕೋಟಿ ರೂ. ನೀಡುವಂತೆ ಡಿಮ್ಯಾಂಡ್ ಮಾಡಿದ್ದರ ಬಗ್ಗೆ ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಇಬ್ಬರು ಅಧಿಕಾರಿಗಳನ್ನ ಬಂಧಿಸಿರೊ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಗೆಳತಿಯರ ಕೊಂದಿದ್ದ ರಷ್ಯಾ ಹಂತಕನ ಫೋನಲ್ಲಿತ್ತು 100ಕ್ಕೂ ಹೆಚ್ಚು ಮಹಿಳೆಯರ ಫೋಟೋ!
ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ; ವಾಗ್ದಾಳಿ
ಇನ್ನು ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಬಿಜೆಪಿ ಮುಖಂಡ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಅಕ್ರಮ ಆಗಿದೆ. ಅಧಿಕಾರಿಗಳು ಸುಲಿಗೆ ಮಾಡ್ತಿದ್ದಾರೆ. ಆಡಿಯೋದಲ್ಲಿ ಸಚಿವರ ಹೆಸರು ಇದೆ, ಅವರ ಮಗನ ಹೆಸರು ಇದೆ. ಕೇರಳ ಚುನಾವಣೆಗೆ ಈ ಹಣ ಹೋಗುತ್ತೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ತಕ್ಷಣ ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆ ಪಡೆಯಬೇಕು, ಇಲ್ಲವೇ ಅವರನ್ನ ಸಂಪುಟದಿಂದ ಸಿಎಂ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


