ನವದೆಹಲಿ: ಭಾರತ ಹಿಂದೂ ರಾಷ್ಟ್ರವಾಗುತ್ತಿದ್ದು, ಜನರಿಗೆ ಅಭದ್ರತೆ ಕಾಡುತ್ತಿದೆ ಎಂದು ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ.
ಭಾರತ ಅಮೆರಿಕ ಮುಸ್ಲಿಮ್ ಸಂಘಟನೆ ಆಯೋಜಿಸಿದ್ದ ಅಮೆರಿಕಾದ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತದ ಮಾನವ ಹಕ್ಕಿನ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾತನಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಸ್‌ಪಿ ಗೆದ್ದರೆ ಯುಪಿ ಗೂಂಡಾಗಳ ರಾಜ್ಯವಾಗುತ್ತೆ: ಅಮಿತ್ ಶಾ ವಾಗ್ದಾಳಿ
ಅಮೆರಿಕಾದಲ್ಲಿರುವ ಭಾರತ ಮೂಲದ ಮುಸ್ಲಿಂ ಸಂಘಟನೆಯೊಂದು ಆಯೋಜಿಸಿದ ವರ್ಚುಚಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಮೀದ್ ಅನ್ಸಾರಿ ಮತ್ತು ಅಮೆರಿಕದ ಮೂವರು ಸಂಸತ್ ಸದಸ್ಯರಾದ ಜಿಮ್ ಮೆಕ್‍ಗವರ್ನ್, ಆಂಡಿ ಲೆವಿನ್ ಮತ್ತು ಜೇಮೀ ರಾಸ್ಕಿನ್, ಭಾರತದಲ್ಲಿ ಮಾನವ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
Former VP Ansari & Actor Swara Bhaskar participating in an event by IAMC to ‘save pluralism’ on #RepublicDay
They may not know:
IAMC paid money to get India black-list by the US is linked with Jamaat-e-Islami (JeI) &
Linked with the fraud in name of Covid crisis
A thread: pic.twitter.com/DslEr3QFJs
— DisInfo Lab (@DisinfoLab) January 26, 2022
ಇತ್ತಿಚೀನ ದಿನಗಳಲ್ಲಿ ಭಾರತದಲ್ಲಿ ಧರ್ಮಗಳ ಬಗ್ಗೆ ತುಂಬಾ ಚರ್ಚೆಗಳಾಗುತ್ತಿವೆ. ಭಾರತದಲ್ಲಿ ಅಲ್ಪಸಂಖ್ಯಾತರ ನಂಬಿಕೆಗಳಿಗೆ ಒತ್ತುಕೊಡುತಿಲ್ಲ. ಅಲ್ಲದೆ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಭಾರತವನ್ನು ಹಿಂದೂ ರಾಷ್ಟವನ್ನಾಗಿಸುವ ಕೆಲಸವಾಗುತ್ತಿದೆ ಎಂದು ವರ್ಚುವಲ್ ಕಾರ್ಯಕ್ರಮದಲ್ಲಿ ಚರ್ಚೆ ನಡೆಸಲಾಗಿದೆ. ಇದನ್ನೂ ಓದಿ: ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ – ಇದು ನಾಚಿಗೇಡಿನ ಸಂಗತಿ ಎಂದ ಕೇಜ್ರಿವಾಲ್
ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಹಮೀದ್ ಅನ್ಸಾರಿ, ನಾನು ಪ್ರಸ್ತುತ ದಿನಗಳಲ್ಲಿ ಗಮನಿಸಿದಾಗ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಉದ್ದೇಶ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ರಾಷ್ಟ್ರದಲ್ಲಿರುವ ಎಲ್ಲಾ ನಾಗರೀಕರನ್ನು ಒಂದೇ ಎಂದು ಕಾಣುವ ಅಭಿಪ್ರಾಯ ಬದಲಾಗಿದೆ. ನಾಗರಿಕರ ಕೆಲವು ಹಕ್ಕುಗಳನ್ನು ದಮನಿಸುವಂತಹ ಕಾರ್ಯ ದೇಶದಲ್ಲಿ ನಡೆಯುತ್ತಿದೆ. ಇದರಿಂದ ದೇಶದಲ್ಲಿರುವ ಜನರಲ್ಲಿ ಅಭದ್ರತೆ ಕಾಡುತ್ತಿದೆ ಎಂದು ಭಾರತದ ಬಗ್ಗೆ ಟೀಕಿಸಿದ್ದಾರೆ.
ಭಾರತದಲ್ಲಿ ಧಾರ್ಮಿಕ ತಾರತಮ್ಯ ಹೆಚ್ಚಾಗುತ್ತಿದ್ದು, ನಾಗರಿಕರು ಸ್ವತಂತ್ರವಾದ ನಿರ್ಧಾರವನ್ನು ತೆಗೆಯಲು ಅವಕಾಶ ಇಲ್ಲದಾಗಿದೆ. ಎಂದು ವರ್ಚುವಲ್ ಚರ್ಚೆಯಲ್ಲಿ ಭಾಗವಹಿಸಿದ ಇತರರು ಕೂಡ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ
ಕೆಲದಿನಗಳ ಹಿಂದೆ ಕೇಂದ್ರ ಸರ್ಕಾರ ದೇಶದಲ್ಲಿ ನಾಗರೀಕ ಹಕ್ಕುಗಳು ಕ್ಷೀಣಿಸುತ್ತಿದೆ ಎಂದು ವಿದೇಶದಿಂದ ಕೇಳಿಬರುತ್ತಿದ್ದ ಆರೋಪಗಳನ್ನು ಅಲ್ಲಗೆಳೆದಿತ್ತು.