– ತಪ್ಪನ್ನು ಕ್ಷಮಿಸಿ, ಕ್ಷಮದಾನ ನೀಡುವಂತೆ ಮನವಿ
– ಶಿಕ್ಷಕಿಯ ಪತಿಯೂ ಉಗ್ರ ಸಂಘಟನೆಯ ಸದಸ್ಯ
ವಾಷಿಂಗ್ಟನ್: ಅಮೆರಿಕದ ಮಾಜಿ ಶಾಲಾ ಶಿಕ್ಷಕಿ ಭಯೋತ್ಪಾದಕ ಗುಂಪೊಂದಕ್ಕೆ ತರಬೇತಿ ನೀಡಿದ ಅಪರಾಧದ ಹಿನ್ನೆಲೆಯಲ್ಲಿ ಅಲ್ಲಿನ ನ್ಯಾಯಾಲಯ ಆಕೆಗೆ ಶಿಕ್ಷೆಯನ್ನು ವಿಧಿಸಿತ್ತು, ಆದರೆ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮಾದಾನವನ್ನು ಕೇಳಿದ್ದಾಳೆ.
ಆಲಿಸನ್ ಫ್ಲೂಕ್ ಎಕ್ರೆನ್(42) ಫ್ಲೂಕ್ ಎಕ್ರೆನ್ ಐಸಿಸ್ ಮಿಲಿಟರಿ ಬೆಟಾಲಿಯನ್‍ನ ನಾಯಕಿ ಮತ್ತು ಸಂಘಟಕಿಯಾಗಿ ಕೆಲಸ ಮಾಡಿದ್ದಳು. ಆಕೆ 2011 ಮತ್ತು 2019ರವರೆಗೆ ಸಿರಿಯಾ, ಲಿಬಿಯಾ ಮತ್ತು ಇರಾಕ್‍ನಲ್ಲಿ ಭಯೋತ್ಪಾದನೆ-ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿದ್ದಳು.
ಅಲ್ಲಿ ಆಕೆ 10 ಅಥವಾ 11 ವರ್ಷದ ಬಾಲಕಿಯರಿಗೆ ಎಕೆ-47, ರೈಫಲ್‍ಗಳು, ಗ್ರೆನೇಡ್‍ಗಳು ಮತ್ತು ಆತ್ಮಹತ್ಯಾ ಬೆಲ್ಟ್‍ಗಳ ಬಳಕೆಯ ಕುರಿತು ತರಬೇತಿ ನೀಡುತ್ತಿದ್ದಳು. ಸುಮಾರು 100ಕ್ಕೂ ಹೆಚ್ಚು ಯುವತಿಯರು ಐಸಿಸ್ ಪರವಾಗಿ ಸಿರಿಯಾದಲ್ಲಿ ಫ್ಲೂಕ್-ಎಕ್ರೆನ್‍ನಿಂದ ಮಿಲಿಟರಿ ತರಬೇತಿ ನೀಡಿದ್ದಳು. ಇದನ್ನೂ ಓದಿ: ಜ್ಞಾನವಾಪಿ ಸಮೀಕ್ಷೆಗೆ ಆದೇಶ ನೀಡಿದ ನ್ಯಾಯಾಧೀಶರಿಗೆ ಜೀವ ಬೆದರಿಕೆ
ಈಕೆಯ ಪತಿಯೂ ಉಗ್ರನಾಗಿದ್ದ. ಆತ ಉಗ್ರ ಅನ್ಸರ್ ಅಲ್-ಶರಿಯಾ ಗುಂಪಿನ ಸದಸ್ಯನಾಗಿದ್ದ. ಉಗ್ರ ದಂಪತಿ ಈಜಿಪ್ಟ್, ಲಿಬಿಯಾ, ಟರ್ಕಿ, ಸಿರಿಯಾದಲ್ಲಿ ವಾಸವಾಗಿದ್ದರು. ಅಲ್ಲಿ ಅವಳ ಪತಿ ಇಸ್ಲಾಮಿಕ್ ಸ್ಟೇಟ್ ಸ್ನೈಪರ್ ಗುಂಪಿನ ನಾಯಕನಾಗಿದ್ದ.
ಅಷ್ಟೇ ಅಲ್ಲದೇ ಆಕೆ ಸಿರಿಯಾದಲ್ಲಿದ್ದಾಗ ಅಮೆರಿಕದ ಶಾಪಿಂಗ್ ಮಾಲ್ ಅಥವಾ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಮಾತನಾಡಿದ್ದಳು. 2016-17ರಲ್ಲಿ ಇಸ್ಲಾಮಿಕ್ ಸ್ಟೇಟ್ ಅನ್ನು ಬೆಂಬಲಿಸಲು ದೈಹಿಕ, ವೈದ್ಯಕೀಯ ಮತ್ತು ಶಸ್ತ್ರಾಸ್ತ್ರಗಳ ತರಬೇತಿಯನ್ನು ಕೈಗೊಂಡ ಎಲ್ಲಾ ಮಹಿಳಾ ಖತೀಬಾ ನುಸೈಬಾ ಬೆಟಾಲಿಯನ್‍ನ ನಾಯಕಿಯಾದಳು. ಇದನ್ನೂ ಓದಿ: ಕಾಶ್ಮೀರದಲ್ಲಿ ಪಂಡಿತರ ಹತ್ಯೆ – ಹಿಜ್ಬುಲ್ ಉಗ್ರ ಬೆಂಗಳೂರಿನಲ್ಲಿ ಸಿಕ್ಕಿ ಬಿದ್ದಿದ್ದು ಹೇಗೆ?
2019ರ ಆರಂಭದಲ್ಲಿ ಯುಎಸ್ ನೇತೃತ್ವದ ಸಮ್ಮಿಶ್ರ ಪಡೆಗಳಿಂದ ನಡೆದ ದಾಳಿಯಲ್ಲಿ ಉಗ್ರಗಾಮಿ ಗುಂಪಿನ ಪ್ರಾದೇಶಿಕ ಸೋಲಿನ ನಂತರ ಫ್ಲೂಕ್-ಎಕ್ರೆನ್‍ಳನ್ನು ಸಿರಿಯಾದಲ್ಲಿ ಬಂಧಿಸಲಾಯಿತು. ಅವಳನ್ನು ನಂತರ ಅಮೆರಿಕಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಆಕೆಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಇದೀಗ ಆಕೆ ಅಲ್ಲಿ ನ್ಯಾಯಾಧೀಶ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತಪ್ಪನ್ನು ಕ್ಷಮಿಸಲು ಮನವಿ ಮಾಡಿದ್ದಾಳೆ.