ಕೊಯಮತ್ತೂರಿನಿಂದ ಅಣ್ಣಾಮಲೈ ಸ್ಪರ್ಧೆ – ಬಿಜೆಪಿಯಿಂದ 3ನೇ ಪಟ್ಟಿ ರಿಲೀಸ್‌

Public TV
1 Min Read
Annamalai 2

– 3ನೇ ಪಟ್ಟಿಯಲ್ಲೂ ಇಲ್ಲ ಕರ್ನಾಟಕದ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು

ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿ 3ನೇ ಪಟ್ಟಿ ಬಿಡುಗಡೆ ಮಾಡಿದ್ದು, ತಮಿಳುನಾಡಿನ (Tamil Nadu) 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಕೊಯಮತ್ತೂರಿನಿಂದ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಹಾಗೂ ಚೆನ್ನೈ ದಕ್ಷಿಣದಿಂದ ತೆಲಂಗಾಣ ಮಾಜಿ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರನ್ನು ಕಣಕ್ಕಿಳಿಸಿದೆ. ಇದನ್ನೂ ಓದಿ: ಪ್ರೀತಂಗೌಡಗೆ ಸ್ವಲ್ಪ ಅಸಮಾಧಾನ ಇತ್ತು‌, ಅದನ್ನ ಸರಿ ಮಾಡಲಾಗಿದೆ: ಪ್ರಜ್ವಲ್ ರೇವಣ್ಣ

ಕೊಯಮತ್ತೂರಿನಿಂದ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಕಣಕ್ಕಿಳಿಸಿದೆ. ಚೆನ್ನೈ ಕೇಂದ್ರದಿಂದ ಪಿ.ಸೆಲ್ವಮ್‌, ವೆಲ್ಲೂರಿನಿಂದ ಎ.ಸಿ.ಶಣ್ಮುಗಂ, ಕೃಷ್ಣಗಿರಿ ಸಿ.ನರಸಿಂಹನ್‌, ನೀಲಗಿರಿ (ಎಸ್‌ಸಿ) ಕ್ಷೇತ್ರದಿಂದ ಎಲ್.ಮುರುಗನ್‌, ಪೆರಂಬಲೂರ್‌ನಿಂದ ಟಿ.ಆರ್.ಪಾರಿವೆಂಧರ್‌, ತೂತುಕುಡಿಯಿಂದ ನೈನರ್‌ ನಾಗೇಂದ್ರನ್‌, ಕನ್ಯಾಕುಮಾರಿ ಕ್ಷೇತ್ರದಿಂದ ರಾಧಾಕೃಷ್ಣನ್‌ ಸ್ಪರ್ಧೆ ಮಾಡಲಿದ್ದಾರೆ.

Share This Article