Connect with us

International

ಕಾರ್ಟೂನ್ ಪೊಪಾಯ್‍ನಂತ ಬೈಸೆಪ್ಸ್ ಗಾಗಿ ಈ ಯುವಕ ಏನು ಮಾಡ್ತಾರೆ ಗೊತ್ತಾ?

Published

on

ಮಾಸ್ಕೋ: ನೀವು ಚಿಕ್ಕವರಿದ್ದಾಗ ಪೊಪಾಯ್ ದಿ ಸೇಲರ್ ಎಂಬ ಕಾರ್ಟೂನ್ ನೋಡೇ ಇರ್ತೀರ. ಆದ್ರೆ ನಿಜಜೀವನದಲ್ಲಿ ಪೊಪಾಯ್ ಥರ ಬೈಸೆಪ್ಸ್ ಇರೋಕೆ ಸಾಧ್ಯನಾ? ಇಲ್ಲೊಬ್ಬ ಮಾಜಿ ಸೈನಿಕ ಪೊಪಾಯ್ ನಂತಹ ಬೈಸೆಪ್ಸ್ ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದಾರೆ.

ರಷ್ಯಾದ 21 ವರ್ಷದ ತೆರೆಶಿನ್ 24 ಇಂಚಿನ ಬೈಸೆಪ್ಸ್ ಹೊಂದಿದ್ದು ಜಗತ್ತಿನಾದ್ಯಂತ ಫೇಮಸ್ ಆಗಿದ್ದಾರೆ. ಈ ರೀತಿ ಬಸೆಪ್ಸ್‍ಗಾಗಿ ಇವರು ಸೈಟ್ ಎನ್‍ಹಾನ್ಸ್‍ಮೆಂಟ್ ಆಯಿಲ್ ಅಥವಾ ಸಿಂಥಾಲ್ ಬಳಸ್ತಾರಂತೆ. ಈ ಎಣ್ಣೆಯನ್ನ ತೋಳುಗಳಿಗೆ ಇಂಜೆಕ್ಟ್ ಮಾಡಿಕೊಳ್ಳೋ ಮೂಲಕ ಇಷ್ಟು ದೊಡ್ಡ ಬೈಸೆಪ್ಸ್ ಬರಿಸಿಕೊಂಡಿದ್ದಾರೆ. ಇದರಿಂದ ಇವರ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಸೈನ್ಯವನ್ನ ಬಿಟ್ಟ ನಂತರ ಕೇವಲ 10 ದಿನಗಳಲ್ಲಿ ಇವರು 10 ಇಂಚಿನ ಬೈಸೆಪ್ಸ್ ಬರಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ತೆರೆಶಿನ್ ಹೆಮ್ಮೆಯಿಂದ ತನ್ನ ಬೈಸೆಪ್ಸ್ ಪ್ರದರ್ಶಿಸಿದ್ದಾರೆ.

ಆದ್ರೆ ಈ ರೀತಿಯ ಬಾಡಿ ಬಿಲ್ಡಿಂಗ್‍ನಿಂದ ಅನಹುತವಾಗಬಹುದು ಎಂದು ವೈದ್ಯರಾದ ಯುರೀ ಸೆರೆಬ್ರಿಯಾನ್‍ಸ್ಕಿನಿ ಹೇಳಿದ್ದಾರೆ. ಅವರ ತೋಳುಗಳ ಚಲನೆಯೇ ನಿಂತುಬಿಡಬಹುದು. ಅವರ ತೋಳುಗಳು ತುಂಬಾ ಗಟ್ಟಿಯಾಗಿ ಮೇಲೆತ್ತಲು ಕೂಡ ಸಾಧ್ಯವಾಗದಂತೆ ಆಗಬಹುದು. ಅವರು ವಿಕಲಾಂಗರಂತೆ ಆಗಬಹುದು ಎಂದಿದ್ದಾರೆ.

ಅಲ್ಲದೆ ವೃತ್ತಿಪರ ಪವರ್ ಲಿಫ್ಟರ್ ಆದ ಕಿರಿಲ್ ಸಿಚೆವ್ ಕೂಡ ಇದು ನಿಜವೆಂದು ಹೇಳಿದ್ದಾರೆ. ಅವರ ಮುಖದಲ್ಲೇ ನೋಡಬಹುದು. ಏನೋ ಅನಾರೋಗ್ಯವಿರುವಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ. ಇವರಿಗೆ ವೈದ್ಯಕೀಯ ನೆರವಿನ ಅಗತ್ಯವಿದೆ. ಕೇವಲ ಅವರ ತೋಳುಗಳನ್ನ ಸರಿಪಡಿಸಿ ರಕ್ತವನ್ನ ಶುದ್ಧಿಗೊಳಿಸುವುದಷ್ಟೇ ಅಲ್ಲ. ಮನೋವೈಜ್ಞಾನಿಕ ಸಹಾಯ ಕೂಡ ಅಗತ್ಯವಿದೆ ಎಂದು ಹೇಳಿದ್ದಾರೆ.

 

ಆದ್ರೆ ತೆರೆಶಿನ್ ಮಾತ್ರ ತನ್ನ ಈ ಕ್ರಮವನ್ನ ಮುಂದುವರಿಸೋದಾಗಿ ಹೇಳಿದ್ದಾರೆ. ವರ್ಕೌಟ್ ಮಾಡುವುದರ ಜೊತೆಗೆ ಒಂದು ದಿನ ಬಾಡಿ ಬಿಲ್ಡಿಂಗ್ ದಾಖಲೆ ಮುರಿಯೋ ಕನಸು ಹೊಂದಿದ್ದಾರೆ. ಇಷ್ಟು ದೊಡ್ಡ ಬೈಸೆಪ್ಸ್‍ಗಾಗಿ ಲೀಟರ್‍ಗಟ್ಟಲೆ ಎಣ್ಣೆಯನ್ನ ತೋಳಿಗೆ ಇಂಜೆಕ್ಟ್ ಮಾಡಿಕೊಳ್ಳಬಹುದು ಎಂದು ತೆರೆಶಿನ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *