ಪಾಟ್ನಾ: ರಾಷ್ಟ್ರೀಯ ಜನತಾದಳ (ಆರ್‌ಜೆಡಿ ) ಮಾಜಿ ಸಂಸದ ಮೊಹಮ್ಮದ್ ಶಾಹಾಬುದ್ದಿನ್ ಸಹಚರ ಮತ್ತು ಸಂಬಂಧಿಯಾಗಿದ್ದ ಗ್ಯಾಂಗ್‍ಸ್ಟರ್ ನನ್ನು ಶುಕ್ರವಾರ ರಾತ್ರಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಮೊಹಮ್ಮದ್ ಯೂಸಫ್ (40) ಹತ್ಯೆಯಾದ ಆರ್‌ಜೆಡಿ ಮಾಜಿ ಸಂಸದ ಮೊಹಮ್ಮದ್ ಶಾಹಾಬುದ್ದಿನ್ ಸಹಚರ. ಮೊಹಮ್ಮದ್ ಯೂಸಫ್ ಸಿವಾನ್ ಜಿಲ್ಲೆಯ ಪ್ರತಾಪುರ್ ಗ್ರಾಮದ ಬಳಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಮೃತಪಟ್ಟಿದ್ದಾನೆ. ಯೂಸಫ್ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಅನೇಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
Advertisement
ಘಟನಾ ಸ್ಥಳದಿಂದ ಯೂಸಫ್ ನನ್ನು ಆಸ್ಪತ್ರೆಗೆ ಸಾಗಿಲಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ಆತ ಮೃತಪಟ್ಟಿದ್ದ. ಯೂಸಫ್‍ನನ್ನು ಹತ್ಯೆ ಮಾಡಿದ ಜಾಗದಲ್ಲಿ ಒಂದು ಖಾಲಿ ಗನ್ ಹಾಗೂ ಮೂರು ಗುಂಡುಗಳು ಪತ್ತೆಯಾಗಿವೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ದುಷ್ಕರ್ಮಿಗಳ ಸುಳಿವಿಗಾಗಿ ಹುಡುಕಾಟ ನಡೆಸಿದ್ದೇವೆ. ಕೊಲೆಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ ಎಂದು ಸಿವಾನ್ ಪೊಲೀಸ್ ಅಧಿಕಾರಿ ನವೀನ್ ಚಂದ್ರ ಜ್ಹಾ ಹೇಳಿದ್ದಾರೆ.
Advertisement
Advertisement
ಯೂಸಫ್ ಕೊಲೆಯನ್ನು ಖಂಡಿಸಿ ಮೊಹಮ್ಮದ್ ಶಾಹಾಬುದ್ದಿನ್ ಅವರ ನೂರಾರು ಬೆಂಬಲಿಗರು ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನೆ ಹಿನ್ನಲೆಯಲ್ಲಿ ರಸ್ತೆ ತಡೆ ನಡೆಸಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
Advertisement
ಮೊಹಮ್ಮದ್ ಶಾಹಾಬುದ್ದಿನ್ ಅವರು ಸಿವಾನ್ ಕ್ಷೇತ್ರದಿಂದ ಒಟ್ಟು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಪ್ರತಕರ್ತ ರಾಜೀವ್ ರೋಷನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಶಾಹಾಬುದ್ದಿನ್ 11 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಜೊತೆ ಮತ್ತೊಂದು ಕೊಲೆ ಪ್ರಕರಣದಲ್ಲಿ ಸಿಕ್ಕುಬಿದ್ದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv