ರಾಮನಗರ: ಮಹಾರಾಷ್ಟ್ರದಲ್ಲಿ 288 ಕ್ಷೇತ್ರಗಳಿ ನಡೆಯುವ ವಿಧಾನಸಭೆ ಚುನಾವಣೆಗೆ ಕರ್ನಾಟಕದಲ್ಲಿ ಮಧ್ಯದಂಗಡಿ ಮಾಲೀಕರಿಂದ 700 ಕೋಟಿ ರೂ. ಸಂಗ್ರಹಿಸಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆರೋಪ ಮಾಡಿದ್ದರ. ಈ ಬೆನ್ನಲ್ಲೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Devegowda) ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣೆಗೆ (Maharashtra Election) 5,000 ಕೋಟಿ ಹಣ ಅಕ್ರಮವಾಗಿ ಕಳಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಬಾಂಬ್ ಸಿಡಿಸಿದ್ದಾರೆ.
Advertisement
ಚನ್ನಪಟ್ಟಣದಲ್ಲಿಂದು ನಡೆದ ಬಿಜೆಪಿ-ಜೆಡಿಎಸ್ ನಾಯಕರ (BJP JDS Leaders) ಮೈತ್ರಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ ನಡೆಸಿದರು. ಇದೇ ವೇಳೆ ನನ್ನ ಕುರಿತ ʻನೇಗಿಲ ಗೆರೆಗಳುʼ ಪುಸ್ತಕ ಮುಂದೊಂದು ದಿನ ಪಠ್ಯಪುಸ್ತಕ ಆಗುವ ಕಾಲ ಬರುತ್ತೆ ಎಂದರು. ಇದನ್ನೂ ಓದಿ: ಮಹಿಳೆಯರಿಗೆ ಫ್ರೀ ಬಸ್ ಕೊಟ್ಟರು, ಪಾಪ ಪುರುಷರಿಗೆ ಏನ್ ಮಾಡಿದ್ರು? – ಸರ್ಕಾರಕ್ಕೆ ನಟಿ ತಾರಾ ಪ್ರಶ್ನೆ
Advertisement
Advertisement
ಸೋಮಣ್ಣ ಅವರು ಮೂರು ತಿಂಗಳಲ್ಲಿ ಈ ಸರ್ಕಾರ ಹೋಗುತ್ತೆ ಅಂತ ಜೋತಿಷ್ಯ ಹೇಳಿದ್ದಾರೆ. ನಾನೂ ಸ್ವಲ್ಪ ಜ್ಯೋತಿಷ್ಯ ಕೇಳ್ತೀನಿ. ಪಾಪ ಕುಮಾರಸ್ವಾಮಿ (HD Kumaraswamy) ನಿರಪರಾಧಿ, ಮಗನನ್ನು ಚುನಾವಣೆಗೆ ನಿಲ್ಲಿಸಲು 50 ಕೋಟಿ ಕೊಡಬೇಕು ಅಂತ ಮಾಡಿದ್ದರಂತೆ, ಅದಕ್ಕೆ ಇಂಗ್ಲೀಷ್‌ನಲ್ಲಿ ಎಕ್ಸ್ಟಾರ್ಷನ್ ಅಂತಾರೆ. ಕುಮಾರಸ್ವಾಮಿ ಮೇಲೆ ಒತ್ತಾಯ ಹಾಕಿ ಕಾಂಗ್ರೆಸ್ ಜತೆ ಸರ್ಕಾರ ಮಾಡಲು ಒಪ್ಪಿಸಿದರು. ಸಿದ್ದರಾಮಯ್ಯ (Siddaramaiah) ಅವರೇ ನಾನು 14 ಬಜೆಟ್ ಮಂಡಿಸಿದ್ದೀನಿ ಅಂತೀರಾ? ಕುಮಾರಸ್ವಾಮಿ ಬಜೆಟ್ ಓದಬೇಕಾದರೆ, ಇವರ ಬಜೆಟ್ ನಾನು ಕೇಳಬೇಕಾ ಅಂತ ಸಿದ್ದರಾಮಯ್ಯ ಎದ್ದು ಓಡಿ ಹೋಗ್ತಾರೆ. ಒಂದು ಕಾಲದಲ್ಲಿ ನಾನು ಯಡಿಯೂರಪ್ಪ ಜಗಳ ಆಡಿರಬಹುದು, ಈಗ ಈ ಸರ್ಕಾರ ಕಿತ್ತೊಗೆಯಲು ಒಟ್ಟಿಗೆ ಸೇರಿದ್ದೇವೆ ಎಂದು ಗುಡುಗಿದರು.
Advertisement
ಮಿಸ್ಟರ್ ಡಿಕೆ ಶಿವಕುಮಾರ್, ಮೋದಿಯವರನ್ನು ಅರೆಸ್ಟ್ ಮಾಡಬೇಕು ಅಂತ ಹೇಳ್ತೀಯಾ? ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣೆಗೆ 5,000 ಕೋಟಿ ಹಣ ಅಕ್ರಮವಾಗಿ ಕಳಿಸಿದ್ದಾರೆ ಎಂಬ ಆರೋಪ ಇದೆ. ಮಹಾನುಭಾವ, ನನ್ನ ಸಮಾಜದ ಮಹಾನುಭಾವ ಡಿಕೆಶಿ, ಒಕ್ಕಲಿಗ ಸಮಾಜದ ಮುಖಂಡ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಿಸಬೇಕಂತೆ.. ಅರೆ ಬಾಪ್ ರೇ… ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಚೋಟಾ ಮುಂಬೈಯಲ್ಲಿ ಬೆಲೆ ನಿಯಂತ್ರಿಸಲು ಅಖಾಡಕ್ಕಿಳಿದ ಕೇಂದ್ರ; ಹುಬ್ಬಳ್ಳಿ- ಧಾರವಾಡದಲ್ಲಿ ಭಾರತ್ ಬ್ರ‍್ಯಾಂಡ್ ಆಹಾರ ಧಾನ್ಯ ಪೂರೈಕೆಗೆ ಚಾಲನೆ
ಹನ್ನೊಂದು ದಿನಗಳ ಹಿಂದೆ ನಿಖಿಲ್ ಅಭ್ಯರ್ಥಿ ಅಂತ ಯಾರಾದ್ರೂ ಹೇಳ್ತಿದ್ರಾ? 6 ತಿಂಗಳು ನಾನೇ ಚನ್ನಪಟ್ಟಣ ಅಭ್ಯರ್ಥಿ ಅಂತ ಒಂದೇ ಸಮನೆ ಹೇಳ್ತಿದ್ರು. ನಾವೆಲ್ಲ ನಡುಗಿ ಹೋದ್ವಿ, ಚನ್ನಪಟ್ಟಣದ ಅಭ್ಯರ್ಥಿ ನಾನೇ ಅಭ್ಯರ್ಥಿ ಅಂತ ಹೇಳಿದ ಮಹಾನುಭಾವನಿಗೆ ಕೊನೆಗೆ ಏನಾಯ್ತು? ಕರ್ನಾಟಕಕ್ಕೆ ಮಹಾನುಭಾವ ಕುರಿಯನ್ ಮಿಲ್ಕ್ ಫೆಡರೇಷನ್ ಕೊಟ್ಟ, ನಾನು ಆಗ ಪ್ರಧಾನಿ. ಅದರಿಂದ ಈಗ ಚನ್ನಪಟ್ಟಣದ ಜನ ನೆಮ್ಮದಿಯಿಂದ ಬದುಕ್ತಿದ್ದಾರೆ. ಮೋದಿಯವರು ನಮ್ಮ ರಾಜ್ಯಕ್ಕೆ ಅನುದಾನ, ತೆರಿಗೆ ಮೋಸ ಮಾಡಿದ್ದಾರೆ ಅಂತ ಸಿದ್ದರಾಮಯ್ಯ ಹೇಳ್ತಾರೆ. ಸಿದ್ದರಾಮಯ್ಯಗೆ ಹಣಕಾಸು ಮಂತ್ರಿ ಮಾಡಿದ್ದು ಈ ದೇವೇಗೌಡ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಬೀಗಿದರು.
ಕನಕಪುರದ ನಾಯಕರ ಗರ್ವ ಮುರಿಯಲು ನಿಖಿಲ್‌ರನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಜೆಡಿಎಸ್‌ನವರೇ ಸ್ಪರ್ಧೆ ಮಾಡಬೇಕು ಅಂತ ಮೋದಿ, ಅಮಿತ್ ಶಾ, ನಡ್ಡಾ, ಯಡಿಯೂರಪ್ಪ ಹೇಳಿದ್ರು. ಇವರೆಲ್ಲ ಸೇರಿ ನಿಖಿಲ್ ಅಭ್ಯರ್ಥಿ ಮಾಡಿದ್ದಾರೆ. ನಿಖಿಲ್ ಗೆಲ್ಲಿಸಿ, ನವೆಂಬರ್ 23ಕ್ಕೆ ಫಲಿತಾಂಶ ಬರುತ್ತೆ. ನವೆಂಬರ್ 24ಕ್ಕೆ ನಾನು ಯಡಿಯೂರಪ್ಪ ಬಂದು ಮತದಾರರಿಗೆ ಅಭಿನಂದನೆ ಸಲ್ಲಿಸ್ತೇವೆ. ಕನಿಷ್ಠ 25 ಸಾವಿರ ಮತಗಳ ಅಂತರದಲ್ಲಿ ನಿಖಿಲ್‌ರನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಏಯ್ ಕುಮಾರಸ್ವಾಮಿ ನಿನ್ನ ರೇಟ್ ಹೇಳು – ವಿವಾದಾತ್ಮಕ ಪದ ಬಳಸಿದ ಜಮೀರ್