ಬೆಂಗಳೂರು: ರೈತರ ಸಾಲಮನ್ನಾ ವಿಚಾರದಲ್ಲಿ ವಿರೋಧಿ ಪಕ್ಷದ ಟೀಕೆಗೆ ಉತ್ತರವಾಗಿ ತಮ್ಮ ಮಗನ ಮೇಲೆ ಆಣೆ ಮಾಡಿದ್ದ ಸಿಎಂ ಕುಮಾರಸ್ವಾಮಿ ಮಾತನ್ನು ನೆನೆದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಪಕ್ಷದ ಶಾಸಕಾಂಗ ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆ ಉದ್ದೇಶಿಸಿದ ಮಾತನಾಡಿದ ದೇವೇಗೌಡರು, ಯಡಿಯೂರಪ್ಪ ಅಪ್ಪ ಮಕ್ಕಳನ್ನ ತೆಗೆಯುತ್ತೇನೆ ಅಂತಾರೆ, ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದನ್ನೇ ಹೇಳುತ್ತಾರೆ. ನಾವು ಅಂತ ಪಾಪ ಏನು ಮಾಡಿದ್ದೇವೆ. ರೈತರ ಸಾಲಮನ್ನಾ ವಿಚಾರದಲ್ಲಿ ಸಿಎಂ ಎಚ್‍ಡಿಕೆ ಮಗನ ಮೇಲೆ ಆಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವನೊಬ್ಬ ಮಗ, ನಮಗೆ 38 ಸ್ಥಾನ ರಾಜ್ಯದ ಜನರಿಗೋಸ್ಕರ ಮಗನ ಮೇಲೆ ಆಣೆ ಮಾಡಿದ್ದಾರೆ ಎನ್ನುತ್ತಾ ಕಣ್ಣೀರಿಟ್ಟರು.
ರಾಜ್ಯದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ನೆರವು ಕೊಟ್ಟಿತ್ತು. ಅಂದು ಬಡ್ಡಿಗೆ 650 ಕೋಟಿ ರೂ. ಸಾಲ ತಂದು ಯೋಜನೆ ಕೈಗೆತ್ತಿಕೊಂಡಿದ್ದೆ. ಆಲಮಟ್ಟಿ ಯೋಜನೆಗೆ ಮಾಡಿದ ಕಷ್ಟವೇನು ಎಂದು ತಮ್ಮ ಆಡಳಿತ ಅವಧಿಯಲ್ಲಿ ಕೈಗೊಂಡ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು. ಅಲ್ಲದೇ ಇದೇ ವೇಳೆ ಸಮ್ಮಿಶ್ರ ಸರ್ಕಾರದ ರಚನೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಷರತ್ತಿನ ಬಗ್ಗೆ ಹೇಳಿದರು. ನಮ್ಮ ಸರ್ಕಾರದ ಎಲ್ಲಾ ಕಾರ್ಯಕ್ರಮ ಮುಂದುವರಿಸಬೇಕು ಅಂತ ಷರತ್ತು ವಿಧಿಸಿದ್ದರು. ಆದರಂತೆ ಕುಮಾರಸ್ವಾಮಿ ನಡೆದುಕೊಂಡಿದ್ದಾರೆ ಎಂದು ತಮ್ಮ ಮಾತಿನ ಉದ್ದಕ್ಕೂ ಭಾವನತ್ಮಾಕವಾಗಿ ಮಾತನಾಡಿದರು. ಇದನ್ನು ಓದಿ:ಇರೋ ಒಬ್ಬ ಮಗನ ಮೇಲಾಣೆ ಸಾಲಮನ್ನಾ ಮಾಡ್ತೀನಿ: ಸಿಎಂ
ಪಕ್ಷ ಕಟ್ಟುವ ಕಾರ್ಯ ನಿರಂತರವಾಗಿ ಮುಂದುವರಿಯುತ್ತದೆ. ಇವತ್ತೇ ಐದು ವಿಭಾಗಗಳಿಗೆ ತಂಡಗಳನ್ನು ರಚಿಸಿ ಯಾರು ಅಧ್ಯಕ್ಷರಾಗಬೇಕು, ಯಾರು ಮುನ್ನಡೆಸಬೇಕು ಎಂದು ನಿರ್ಧಾರವಾಗುತ್ತದೆ. ಒಂದು ಸಲ ಎಡವಿದೆವು ಎಂದು ಸದಾ ಎಡವೋದಿಲ್ಲ, ಕತ್ತಲು ಕಳೆದ ಮೇಲೆ ಬೆಳಕು ಬಂದೇ ಬರುತ್ತೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv