ಗ್ವಾಟೆಮಾಲಾ ನಗರ: ದೇಶದ ಅಂತರ್ಯುದ್ಧದ ಸಂದರ್ಭದಲ್ಲಿ 36 ಸ್ಥಳೀಯ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಐವರು ಮಾಜಿ ಸೈನಿಕರಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ಸಂತ್ರಸ್ತೆಯರು ನೀಡಿರುವ ಸಾಕ್ಷ್ಯಗಳನ್ನು ನಾವು ದೃಢವಾಗಿ ನಂಬುತ್ತೇವೆ ಎಂದು ನ್ಯಾಯಾಧೀಶ ಗೆರ್ವಿ ಸಿಕಲ್ ತಿಳಿಸಿದ್ದಾರೆ. ಇದನ್ನೂ ಓದಿ: ಆಫ್ರಿಕಾ ಕ್ರೀಡಾಂಗಣದಲ್ಲಿ ಫುಟ್‌ಬಾಲ್ ವೀಕ್ಷಣೆಗಾಗಿ ನೂಕಾಟ, ಕಾಲ್ತುಳಿತ – 8 ಬಲಿ
Advertisement
Advertisement
1981 ಮತ್ತು 1985ರ ಅವಧಿಯಲ್ಲಿ ಈ ಘಟನೆ ನಡೆದಿತ್ತು. ಅಪರಾಧಿಗಳಾದ ಬೆನ್ವೆನುಟೊ, ಬರ್ನಾರ್ಡೊ ರೂಯಿಜ್, ಡಾಮಿಯನ್, ಗೇಬ್ರಿಯಲ್ ಮತ್ತು ಫ್ರಾನ್ಸಿಸ್ಕೊ ಕುಕ್ಸಮ್ ಶಿಕ್ಷೆಗೆ ಗುರಿಯಾದ ಮಾಜಿ ಸೈನಿಕರು. ರಾಜಧಾನಿಯ ಜೈಲಿನಲ್ಲಿರುವ ಇವರು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ತೀರ್ಪನ್ನು ಆಲಿಸಿದ್ದಾರೆ.
Advertisement
ಯುದ್ಧದಿಂದಾಗಿ ರಬಿನಾಲ್ ಜನರಿಗೆ ಅಪಾರ ನಷ್ಟವುಂಟಾಗಿದೆ. ರಬಿನಾಲ್ ಪ್ರದೇಶದಲ್ಲಿ ಸುಮಾರು 3,000ಕ್ಕೂ ಹೆಚ್ಚು ನಾಗರಿಕರು ಹತ್ಯೆಯಾಗಿದ್ದಾರೆ. ಆಗ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಪರಾಧಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತೆಯರು ದೂರು ನೀಡಿದ್ದರು. ದಶಕಗಳ ನಂತರ (ಜ.5) ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ – 42 ಮಂದಿ ಸಾವು
Advertisement
ನಾನು 19 ವಯಸ್ಸಿನ ಹುಡುಗಿಯಾಗಿದ್ದಾಗ ಸೇನೆಯಲ್ಲಿದ್ದ ಯೋಧರು ನನ್ನನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದರು. ನಮ್ಮ ಗ್ರಾಮವನ್ನು ಕಾಯುತ್ತಿದ್ದ ಸೈನಿಕರೇ ಈ ಕೃತ್ಯ ಎಸಗಿದ್ದರು ಎಂದು ಈಗ 59ರ ವೃದ್ಧೆಯಾಗಿರುವ ಸಂತ್ರಸ್ತೆ ಮಾರ್ಗರಿಟಾ ಸಿಯಾನಾ ದೂರಿನಲ್ಲಿ ತಿಳಿಸಿದ್ದಾರೆ.
3 ತಿಂಗಳು ಅವರಿಂದ ಚಿತ್ರಹಿಂಸೆ ಅನುಭವಿಸಿದ್ದೇವೆ. ಆ ಘಟನೆ ಈಗಲೂ ನಮ್ಮನ್ನು ಕಂಗೆಡಿಸಿದೆ. ನಾವು ಸುಳ್ಳು ಹೇಳುತ್ತಿಲ್ಲ ಎಂದು ಮತ್ತೊಬ್ಬ ಸಂತ್ರಸ್ತೆ ಹೇಳಿದ್ದಾರೆ. ಇದನ್ನೂ ಓದಿ: ವರ್ಕೌಟ್ ವೇಳೆ ವೃದ್ಧ ದಂಪತಿ ಕಿಸ್ಸಿಂಗ್ ವೀಡಿಯೋ ವೈರಲ್
ಆದರೆ ಅಪರಾಧಿಗಳಾದ ಮಾಜಿ ಸೈನಿಕರ ಸಂಬಂಧಿಕರು ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಸಂತ್ರಸ್ತೆಯರ ವಿರುದ್ಧ ನ್ಯಾಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.